ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ 2024 ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, “ಹಿರಿಮೆ”ಯನ್ನು ಹಿಂದಿಕ್ಕುವ ಹಾಗೂ ಚೀನಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಭರವಸೆಯೊಂದಿಗೆ ಚುನಾವಣಾ ಪ್ರಚಾರ ಆರಂಭಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನೇಪಾಲದಲ್ಲಿ ಕಂಪಿಸಿದ ಭೂಮಿ: ದೆಹಲಿ ಸೇರಿ ಉತ್ತರ ಭಾರತದ ಹಲವೆಡೆ ಕಂಪನ ಅನುಭವ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ನಿಕ್ಕಿ ಹ್ಯಾಲೆಯ ನಂತರ ರಿಪಬ್ಲಿಕನ್ ಪಕ್ಷದ ಎರಡನೇ ಅಭ್ಯರ್ಥಿ ಅಧ್ಯಕ್ಷ ಚುನಾವಣೆಯ ಅಖಾಡಕ್ಕಿಳಿದಂತಾಗಿದೆ. ರಾಮಸ್ವಾಮಿ (37ವರ್ಷ) ಪೋಷಕರು ಕೇರಳದಿಂದ ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದ್ದರು. ರಾಮಸ್ವಾಮಿ ಪೋಷಕರು ಓಹಿಯೊದಲ್ಲಿನ ಜನರಲ್ ಎಲೆಕ್ಟ್ರಿಕ್ ಪ್ಲ್ಯಾಂಟ್ ನಲ್ಲಿ ಕಾರ್ಯನಿರ್ವಹಿಸಿದ್ದರು. ಫೋಕ್ಸ್ ನ್ಯೂಸ್ ನ ಪ್ರೈಮ್ ಟೈಮ್ ನ ನೇರ ಸಂದರ್ಶನದಲ್ಲಿ ರಾಮಸ್ವಾಮಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಇಂಡಿಯನ್ ಅಮೆರಿಕನ್ ಮೂಲದ ಎರಡನೇ ಅಭ್ಯರ್ಥಿಯಾಗಿದ್ದಾರೆ. ರಾಮಸ್ವಾಮಿ ಹುಟ್ಟಿ, ಬೆಳೆದದ್ದು ಒಹಿಯೋದ ಸಿನ್ಸಿನಾಟಿಯಲ್ಲಿ. ರಾಮಸ್ವಾಮಿ ಪೋಷಕರು ಕೇರಳದ ಪಾಲಕ್ಕಾಡ್ ನಿಂದ ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದ್ದರು. ರಾಮಸ್ವಾಮಿ ತಂದೆ ವಿ.ಜಿ.ರಾಮಸ್ವಾಮಿ ಕೇರಳದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಇವರು ಒಹಿಯೋದ ಜನರಲ್ ಎಲೆಕ್ಟ್ರಿಕ್ ಪ್ಲ್ಯಾಂಟ್ ನಲ್ಲಿ ಕಾರ್ಯನಿರ್ವಹಿಸಿದ್ದರು. ತಾಯಿ ಗೀತಾ ಸಿನ್ಸಿನಾಟಿಯಲ್ಲಿ ಮನೋವೈದ್ಯರಾಗಿದ್ದಾರೆ.
ರಾಮಸ್ವಾಮಿ 2003ರಲ್ಲಿ ಸಿನ್ಸಿನಾಟಿಯಲ್ಲಿ ಸೈಂಟ್ ಕ್ಸೇವಿಯರ್ ಹೈಸ್ಕೋಲ್ ನಲ್ಲಿ ಶಿಕ್ಷಣ ಪಡೆದಿದ್ದರು. 2007ರಲ್ಲಿ ರಾಮಸ್ವಾಮಿ, ಹಾರ್ವರ್ಡ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ರಾಮಸ್ವಾಮಿ ಪ್ರಸ್ತುತ ಸ್ಟ್ರೈವ್ ಅಸ್ಸೆಟ್ ಮ್ಯಾನೇಜ್ ಮೆಂಟ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.