Advertisement

ವೈಟ್‌ಹೌಸ್‌ ಮಾಧ್ಯಮ ಸಹ ಕಾರ್ಯದರ್ಶಿಯಾಗಿ ವೇದಾಂತ್‌ ಪಟೇಲ್‌ ಆಯ್ಕೆ

09:29 PM Dec 19, 2020 | sudhir |

ವಾಷಿಂಗ್ಟನ್‌: ಜೋ ಬೈಡೆನ್‌ ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅದಕ್ಕೂ ಮುಂಚಿತವಾಗಿ ಹಲವಾರು ಭಾರತೀಯ ಮೂಲದ ವ್ಯಕ್ತಿಗಳನ್ನು ಪ್ರಮುಖ ಸ್ಥಾನಗಳಲ್ಲಿ ನೇಮಿಸುವುದನ್ನು ಮುಂದುವರಿಸಿದ್ದಾರೆ. ಇದರಲ್ಲಿ ಕಾಣಿಸಿಕೊಂಡಿರುವ ಹೊಸ ಹೆಸರು ಗುಜರಾತ್‌ ಮೂಲದ ವೇದಾಂತ್‌ ಪಟೇಲ್‌.

Advertisement

ಅವರು ವೈಟ್‌ಹೌಸ್‌ನ ಸಹಾಯಕ ಮಾಧ್ಯಮ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಪಟೇಲ್‌ ಅವರು ಬೈಡೆನ್‌ ಅವರ ಉದ್ಘಾಟನಾ ಸಮಿತಿಯ ವಕ್ತಾರರೂ ಆಗಿದ್ದಾರೆ. ಅವರ ಚುನಾವಣಾ ಅಭಿಯಾನದ ಭಾಗವೂ ಆಗಿದ್ದರು. ವೇದಾಂತ್‌ ಪಟೇಲ್‌, ವೈಟ್‌ಹೌಸ್‌ನ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾದ ಮೂರನೇ ಭಾರತೀಯ ವ್ಯಕ್ತಿಯಾಗಿದ್ದಾರೆ. ಪ್ರಿಯಾ ಸಿಂಗ್‌ 2009ರಿಂದ 2010ರವರೆಗೆ, ರಾಜ್‌ ಶಾ 2017ರಿಂದ 2019ರವರೆಗೆ ಈ ಹೊಣೆ ಹೊತ್ತುಕೊಂಡಿದ್ದರು.

ಇದನ್ನೂ ಓದಿ:ತಿರುಪತಿ:  ಸ್ಥಳೀಯರಿಗಷ್ಟೇ ವೈಕುಂಠ ದರ್ಶನ ಟಿಕೆಟ್‌ ವಿತರಿಸಲು ಟಿಟಿಡಿ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next