ವಾಷಿಂಗ್ಟನ್: ಅಮೆರಿಕದಲ್ಲಿ ಪ್ರತಿಭಾವಂತ ಯುವಕರಿಗೆ ಕೊಡಮಾಡುವ ಪ್ರತಿಷ್ಠಿತ ಸೈನ್ಸ್ ಟ್ಯಾಲೆಂಟ್ ಸರ್ಚ್ ಪ್ರಶಸ್ತಿಗೆ ಭಾರತೀಯ ಮೂಲದ ಯುಎಸ್ ನಿವಾಸಿ, 17 ವರ್ಷದ ನೀಲ್ ಮೌದ್ಗಲ್ ಪಾತ್ರರಾಗಿದ್ದಾರೆ.
ಆರ್‌ಎನ್‌ಎ ಅಣುಗಳ ರಚನೆಯನ್ನು ಅತ್ಯಂತ ಕ್ಷಿಪ್ರವಾಗಿ ಮತ್ತು ನಿಖರವಾಗಿ ಊಹಿಸುವಂತ ಕಂಪ್ಯೂಟರ್ ಮಾದರಿಯನ್ನು ಅಭಿವೃದ್ಧಿ ಪಡಿಸಿರುವ ಹಿನ್ನೆಲೆ ಮಿಚಿಗನ್ ನಿವಾಸಿಯಾಗಿರುವ ನೀಲ್‌ಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯ ಭಾಗವಾಗಿ 2.50 ಲಕ್ಷ ಡಾಲರ್ ಗೌರವಧನವನ್ನೂ ನೀಡಲಾಗಿದೆ. ನೀಲ್ ಅಭಿವೃದ್ಧಿ ಪಡಿಸಿರುವ ಮಾದರಿಯು ಹಲವು ರೋಗಗಳನ್ನು ನಿಖರವಾಗಿ ಪತ್ತೆಹಚ್ಚಿ, ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.