Advertisement

Ethiopia: ಭಾರೀ ಮಳೆಗೆ ಗುಡ್ಡ ಕುಸಿತ, 229 ಮಂದಿ ಜೀವಂತ ಸಮಾಧಿ, ಹಲವರು ನಾಪತ್ತೆ

10:15 AM Jul 24, 2024 | Team Udayavani |

ಅಡ್ಡಿಸ್‌ ಅಬಾಬಾ(ಇಥಿಯೋಪಿಯಾ): ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದ ಪರಿಣಾಮ ರಕ್ಷಣಾ ಕಾರ್ಯಾಚರಣೆಯ ಜನರು ಸೇರಿದಂತೆ 229 ಜನರು ಕೊನೆಯುಸಿರೆಳೆದಿರುವ ಘಟನೆ  ಮಂಗಳವಾರ (ಜು.23)ಇಥಿಯೋಪಿಯಾದ ಗ್ರಾಮೀಣ ಭಾಗದಲ್ಲಿ ಸಂಭವಿಸಿರುವುದಾಗಿ ವರದಿ ತಿಳಿಸಿದೆ.

Advertisement

ದಕ್ಷಿಣ ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮಕ್ಕಳು, ಗರ್ಭಿಣಿಯರು ಸೇರಿದಂತೆ ನೂರಾರು ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿ ಡಾಗ್ಮಾವಿ ಅಯೇಲೆ ತಿಳಿಸಿದ್ದಾರೆ.

ಇದೊಂದು ದೊಡ್ಡ ದುರಂತ ಎಂದು ಇಥಿಯೋಪಿಯಾದ ಪ್ರಧಾನಿ ತಿಳಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಐವರನ್ನು ರಕ್ಷಿಸಲಾಗಿದೆ ಎಂದು ವರದಿ ವಿವರಿಸಿದೆ. ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದಾಗಿ ವರದಿಯಾಗಿದೆ.

Advertisement

ಈ ದುರಂತ ತುಂಬಲಾರದ ನಷ್ಟವಾಗಿದ್ದು, ಇದಕ್ಕಾಗಿ ತೀವ್ರ ಸಂತಾಪ ಸೂಚಿಸುವುದಾಗಿ ಪ್ರಧಾನಮಂತ್ರಿ ಅಬಿ ಅಹ್ಮದ್‌ ತಿಳಿಸಿದ್ದಾರೆ. ಗುಡ್ಡ ಕುಸಿತದಲ್ಲಿ ಇನ್ನೂ ಎಷ್ಟು ಜನರು ಸಿಲುಕಿದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:Vijayapura: ಸ್ಟೇಷನ್ ಬೇಲ್ ನೀಡಲು ಲಂಚ: ಇಬ್ಬರು ಕಾನ್‌ ಸ್ಟೇಬಲ್‌ ಲೋಕಾಯುಕ್ತ ಬಲೆಗೆ

Advertisement

Udayavani is now on Telegram. Click here to join our channel and stay updated with the latest news.

Next