Advertisement

ಪೋಲ್ಯಾಂಡ್ ನ ಕರೋಲಿನಾಗೆ ವಿಶ್ವಸುಂದರಿ ಕಿರೀಟ, ಭಾರತೀಯ ಮೂಲದ ಸೈನಿ ರನ್ನರ್ ಅಪ್

01:37 PM Mar 17, 2022 | Team Udayavani |

ಪೋರ್ಟ್ ರಿಕೋ: ಪೋಲ್ಯಾಂಡ್ ನ ಕರೋಲಿನಾ ಬಿಲಾವಸ್ಕ್ 2021ನೇ ಸಾಲಿನ ವಿಶ್ವಸುಂದರಿ ಕಿರೀಟವನ್ನು ಶುಕ್ರವಾರ (ಮಾರ್ಚ್ 17) ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪೋರ್ಟೊ ರಿಕೋದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ವಿಶ್ವಸುಂದರಿ ಜಮೈಕಾದ ಟೋನಿ ಆ್ಯನ್ ಸಿಂಗ್ ಅವರು ಪೋಲ್ಯಾಂಡ್ ನ ಕರೋಲಿನಾ ಬಿಲಾವಸ್ಕ್ ಗೆ ಕಿರೀಟ ತೊಡಿಸಿದರು.

Advertisement

ಇದನ್ನೂ ಓದಿ:ನರಮೇಧ:ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ, ಮಕ್ಕಳು ಸೇರಿ ಸಾವಿರಕ್ಕೂ ಅಧಿಕ ಮಂದಿ ಸಾವು?

ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕ ಪ್ರಜೆ ಶ್ರೀ ಸೈನಿ ಮೊದಲ ರನ್ನರ್ ಅಪ್ ಎನಿಸಿಕೊಂಡಿದ್ದು, ಕೋಟ್ ಡಿ ಐವರಿಯ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿರುವುದಾಗಿ ವರದಿ ತಿಳಿಸಿದೆ.

ಮಿಸ್ ವರ್ಲ್ಡ್ ಟ್ವೀಟರ್ ಖಾತೆಯಲ್ಲಿ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, ನಮ್ಮ ನೂತನ ವಿಶ್ವಸುಂದರಿಯಾಗಿ ಪೋಲ್ಯಾಂಡ್ ನ ಕರೋಲಿನಾ ಬಿಲಾವಸ್ಕ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ(ಭಾರತೀಯ ಮೂಲ) ಶ್ರೀ ಸೈನಿ ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು, ಕೋಟ್ ಡಿ ಐವರಿಯ ಒಲಿವಿಯಾ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದೆ.

Advertisement

ಏತನ್ಮಧ್ಯೆ ಭಾರತವನ್ನು ಪ್ರತಿನಿಧಿಸಿದ್ದ ಮಾನಸ ವಾರಣಾಸಿ ಟಾಪ್ 13ರಲ್ಲಿ ಸ್ಥಾನ ಪಡೆದಿದ್ದು, ಭಾರತದ ಮಾನುಶಿ ಚಿಲ್ಲರ್ 2017ರಲ್ಲಿ ವಿಶ್ವಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ವಿಶ್ವಸುಂದರಿ ಸ್ಪರ್ಧೆಯನ್ನು 2021ರ ಡಿಸೆಂಬರ್ ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾರತದ ಮಾನಸ ವಾರಣಾಸಿ ಸೇರಿದಂತೆ ಕೆಲವು ಸ್ಪರ್ಧಿಗಳಿಗೆ ಕೋವಿಡ್ ದೃಢಪಟ್ಟಿದ್ದರಿಂದ ಸ್ಪರ್ಧೆಯನ್ನು ಮುಂದೂಡಲಾಗಿತ್ತು.

ಯಾರೀಕೆ ಶ್ರೀ ಸೈನಿ:

ಶ್ರೀ ಸೈನಿ 1996ರ ಜನವರಿ 6ರಂದು ಪಂಜಾಬ್ ನ ಲುಧಿಯಾನಾದಲ್ಲಿ ಜನಿಸಿದ್ದರು. ನಂತರ ಈಕೆ ತನ್ನ 5ನೇ ವಯಸ್ಸಿನಿಂದಲೇ ಅಮೆರಿಕದಲ್ಲಿ ವಾಸ್ತವ್ಯ. ಎಳೆಯ ವಯಸ್ಸಿನಲ್ಲಿಯೇ ಬಡತನ ಅನುಭವಿಸಿದ್ದ ಸೈನಿ, ಅಂದಿನಿಂದ ಪ್ರತಿಯೊಬ್ಬರು ತಮ್ಮಿಂದಾದ ಸಹಾಯವನ್ನು ಸಮಾಜಕ್ಕೆ ನೀಡುವ ಹೊಣೆಗಾರಿಕೆ ಹೊರಬೇಕು ಎಂದು ಪ್ರತಿಪಾದಿಸುತ್ತಿರುವುದಾಗಿ ವರದಿ ತಿಳಿಸಿದೆ.

ಅಮೆರಿಕದ ಮೊಸೆಸ್ ಲೇಕ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಸೈನಿಯ ಮುಖ ಸುಟ್ಟು ಹೋಗಿತ್ತು. ಅಷ್ಟೇ ಅಲ್ಲ ಸೈನಿಯ ಹೃದಯ ಬಡಿತ ಕೇವಲ ನಿಮಿಷಕ್ಕೆ 20ರಷ್ಟಿತ್ತು. ಈ ಸಂದರ್ಭದಲ್ಲಿ ವೈದ್ಯರು ನೀನು ಇನ್ನು ಮುಂದೆ ನೃತ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿದ್ದರು. ಹಾಗೂ ಸುಟ್ಟು ಹೋದ ಮುಖ ಗುಣಮುಖವಾಗಿ, ಮೊದಲಿನಂತಾಗಲು ಒಂದು ವರ್ಷ ಬೇಕು ಎಂದಿದ್ದರು. ಆದರೆ ಇದ್ಯಾವುದಕ್ಕೂ ಹೆದರದ ಸೈನಿ ಎರಡು ವಾರಗಳ ನಂತರ ಡ್ಯಾನ್ಸ್ ತರಗತಿಗೆ ಹಾಜರಾಗಿದ್ದರು. ಸೈನಿ ಮಿಸ್ ವರ್ಲ್ಡ್ ಅಮೆರಿಕ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next