ಆನ್‌ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನ ಸಿಇಒ ಆಗಿ ಭಾರತೀಯ ಅಮೆರಿಕನ್ ನೀಲ್ ಮೋಹನ್ ನೇಮಕಗೊಂಡಿದ್ದಾರೆ. ಪ್ರಮುಖ ಜಾಗತಿಕ ಸಂಸ್ಥೆಗಳ ಉನ್ನತ ಹುದ್ದೆಯ ಚುಕ್ಕಾಣಿ ಹಿಡಿದ ಕೆಲ ಭಾರತೀಯರ ಕುರಿತಾದ ವಿವರ ಇಲ್ಲಿದೆ.
ಸುಂದರ್ ಪಿಚೈ : ಮದುರೈ ಮೂಲದ ಪಿಚೈ ಗೂಗಲ್ ಹಾಗೂ ಅದರ ಮಾತೃ ಸಂಸ್ಥೆ ಆ
ಲ್ಫಬೆಟ್ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸತ್ಯ ನಾದೆಳ್ಳಾ : ಮೈಕ್ರೋಸಾಫ್ಟ್ ಸಿಇಒ ಹಾಗೂ ಅಧ್ಯಕ್ಷ ಆಗಿರುವ ಸತ್ಯ, ಮೂಲತಃ ಹೈದರಾಬಾದ್‌ನವರಾಗಿದ್ದು, 1992ರಲ್ಲಿ ಮೈಕ್ರೋಸಾಫ್ಟ್ ಸೇರ್ಪಡೆಗೊಂಡರು. 2014ರಲ್ಲಿ ಸಿಇಒ, 2021ರಲ್ಲಿ ಸಂಸ್ಥೆಯ ಅಧ್ಯಕ್ಷ ಗಾದಿಗೆಯನ್ನೇರಿದರು.
ಸಂದೀಪ್ ಕಟಾರಿಯಾ : ಬಾಟಾ ಸಂಸ್ಥೆಯ ಸಿಇಒ ಆಗಿ 2021ರಲ್ಲಿ ನೇಮಕಗೊಂಡ ಕಟಾರಿಯಾ, ಸಂಸ್ಥೆಯ 126 ವರ್ಷಗಳ ಇತಿಹಾಸದಲ್ಲೇ ಅತ್ಯುನ್ನತ ಹುದ್ದೆಗೇರಿದ ಮೊದಲ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಲಕ್ಷ್ಮಣ್ ನರಸಿಂಹನ್ : ವಿಶ್ವಪ್ರಸಿದ್ಧ ಕೆಫೆ ಸ್ಟಾರ್‌ಬಕ್ಸ್‌ನ ಸಿಇಒ ಆಗಿ 2021ರಲ್ಲಿ ಲಕ್ಷ್ಮಣ್ ನರಸಿಂಹನ್ ನೇಮಕಗೊಂಡಿದ್ದಾರೆ.
ಅರವಿಂದ್ ಕೃಷ್ಣ : ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಐಬಿಎಂ ಸಂಸ್ಥೆಯ ಸಿಇಒ ಆಗಿ ಭಾರತೀಯ ಮೂಲದವರಾದ ಅರವಿಂದ್ ಕೃಷ್ಣ 2020ರಲ್ಲಿ ನೇಮಕಗೊಂಡು, ನಂತರ ಒಂದು ವರ್ಷದ ಅವಧಿಯಲ್ಲೇ ಅಧ್ಯಕ್ಷ ಸ್ಥಾನಕ್ಕೇರಿದರು.
5 ಸಂಸ್ಥೆಗಳ ಭಾರತೀಯ ಸಿಇಒಗಳು
ಸಂಸ್ಥೆ ಹೆಸರು
ಅಡೋಬ್ ಶಾಂತನು ನಾರಾಯಣ್
ಲಕ್ಸುರಿ ಫ್ಯಾಶನ್ ಶ್ರೀಮತಿ ಲೀನಾ ನಾಯರ್
ವಿಎಂವೇರ್ ರಂಗರಾಜನ್ ರಘುರಾಮ್
ಪೊಲೋ ಆಲ್ಟೋ ನಿಕೇಶ್ ಅರೋರಾ
ನೆಟ್ ಆ್ಯಪ್ ಜಾರ್ಜ್ ಕುರಿಯನ್