Advertisement

ಟೆಕ್ಸಾಸ್‌ ಜಡ್ಜ್ ಆಗಿ ಜೂಲಿ ಮ್ಯಾಥ್ಯೂ ಮರು ಆಯ್ಕೆ

12:48 AM Jan 04, 2023 | Team Udayavani |

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕನ್ನರಾದ ಜೂಲಿ ಎ ಮ್ಯಾಥ್ಯೂ, ಸತತ 2ನೇ ಬಾರಿಗೆ ಅಮೆರಿಕದ ಟೆಕ್ಸಾಸ್‌ ಪ್ರಾಂತದ ನ್ಯಾಯಮೂರ್ತಿಯಾಗಿ ಆಯ್ಕೆಯಾಗುವ ಮೂಲಕ ಭಾರತದ ಗರಿಮೆಯನ್ನು ಹೆಚ್ಚಿಸಿದ್ದಾರೆ.

Advertisement

ಕೇರಳ ಮೂಲದವರಾದ ಜೂಲಿ, ಶಾಲಾ ದಿನಗಳಲ್ಲೇ ಅಮೆರಿಕಕ್ಕೆ ಕುಟುಂಬ ಸಮೇತ ವಲಸೆಹೋಗಿದ್ದರು. ಅವರು ವಕೀಲೆ ಅಥವಾ ಜಡ್ಜ್ ಆಗಲು ಬಯಸಿದವರೇ ಅಲ್ಲ. ಆದರೆ ಕೆಲವು ವರ್ಷಗಳ ಹಿಂದೆ ತಮ್ಮ ತಂದೆ ಉದ್ದಿಮೆಯಲ್ಲಿ ಅನೇಕ ಕಾನೂನು ಸಮಸ್ಯೆ ಎದುರಿಸಿದಾಗ, ಜೂಲಿ ಅವರಿಗೆ ಕಾನೂನು ಅಧ್ಯಯನದ ಬಗ್ಗೆ ಆಸಕ್ತಿ ಮೂಡಿತ್ತು.

ಹಾಗಾಗಿ ಅಲ್ಲಿಯೇ ತಮ್ಮ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. 15 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, 4 ವರ್ಷದ ಹಿಂದೆ ಅಮೆರಿಕದ ಟೆಕ್ಸಾಸ್‌ನಲ್ಲಿ ನ್ಯಾಯಮೂರ್ತಿ ಪಟ್ಟ ಅಲಂಕರಿಸುವ ಮೂಲಕ, ಅಮೆರಿಕದ ನ್ಯಾಯಮೂರ್ತಿ ಪಟ್ಟಕ್ಕೇರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಈಗ 2ನೇ ಬಾರಿ ನ್ಯಾಯಮೂರ್ತಿ ಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೂಲಿ ಅವರ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next