Advertisement

ಸಾಲಗಾರರಿಗೆ ವಂಚನೆ: ಭಾರತೀಯ ಅಮೆರಿಕನ್‌ ಉದ್ಯಮಿ ಅರೆಸ್ಟ್‌

11:30 AM Feb 25, 2017 | Team Udayavani |

ವಾಷಿಂಗ್ಟನ್‌ : ಬಾಸ್ಟನ್‌ನಲ್ಲಿ  ಜನಪ್ರಿಯ ಸರಣಿ ಚಿನ್ನದ ಮಳಿಗೆಗಳನ್ನು ನಡೆಸಿಕೊಂಡಿದ್ದ ಭಾರತೀಯ ಅಮೆರಿಕನ್‌ ಉದ್ಯಮಿ, ತನ್ನ ಸಾಲಗಾರರಿಗೆ ಭಾರೀ ವಂಚನೆ ನಡೆಸಿರುವ ಆರೋಪದ ಮೇಲೆ, ಆತ ಭಾರತದಿಂದ ಮರಳುತ್ತಿದ್ದಂತೆಯೇ, ಲಾಸ್‌ ಏಂಜಲಿಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು  ಬಂಧಿಸಲಾಗಿದೆ.

Advertisement

67ರ ಹರೆಯದ ಭಾರತೀಯ ಅಮೆರಿಕನ್‌ ಉದ್ಯಮಿ ಹಂಡಾ ನನ್ನು ಕಳೆದ ವಾರ ಲಾಸ್‌ ಏಂಜಲೀಸ್‌ ವಿಮಾನ ನಿಲ್ದಾಣದಲ್ಲಿ  ಬಂಧಿಸಲಾಗಿದ್ದು ನಿನ್ನೆ ಅಲ್ಲಿನ ನ್ಯಾಯಾಲಯದಲ್ಲಿ  ಹಾಜರುಪಡಿಸಲಾಗಿದೆ. ಔಪಚಾರಿಕ ವಿಚಾರಣೆಗಾಗಿ ಆತನನ್ನು ಬಾಸ್ಟನ್‌ಗೆ ಕರೆತರಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

2011ರಲ್ಲೇ ದೋಷಾರೋಪಕ್ಕೆ ಗುರಿಯಾಗಿದ್ದ ಭಾರತೀಯ ಅಮೆರಿಕನ್‌ ಉದ್ಯಮಿ ಹಂಡಾ, ಸಾಲಗಾರರಿಗೆ ವಂಚನೆ ಎಸಗುವ ಮೂಲಕ 12 ಅಂಕಗಳ ಅಪರಾಧ ಎಸಗಿರುವುದಾಗಿ ದೋಷಾರೋಪ ಮಾಡಲಾಗಿದೆ. 

ಹಂಡಾ ಅವರು ಬಾಸ್ಟನ್‌ನಲ್ಲಿ ಆಲ್ಫಾ -ಒಮೇಗಾ ವಾಚ್‌ ಆ್ಯಂಡ್‌ ಜ್ಯುವೆಲ್ಲರಿಯ ಸರಣಿ ಮಳಿಗೆಗಳನ್ನು ನಡೆಸಿಕೊಂಡಿದ್ದರು. 2007ರ ಮೇ ತಿಂಗಳಿಂದ ಡಿಸೆಂಬರ್‌ ತಿಂಗಳ ವರೆಗಿನ ಅವಧಿಯಲ್ಲಿ ಹಂಡಾ ಅವರ ಉದ್ಯಮವು ತೀವ್ರ ಹಣಕಾಸು ನಷ್ಟಕ್ಕೆ ಗುರಿಯಾಗಿ ಅನೇಕ ಬ್ಯಾಂಕುಗಳ ಸಾಲವನ್ನು ತೀರಿಸದೆ ಬಾಕಿ ಇರಿಸಿ ಸುಸ್ತಿಗಾರರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next