Advertisement

ನ್ಯೂಯಾರ್ಕ್‌ ದಕ್ಷಿಣ ಜಿಲ್ಲೆಗೆ ಜಡ್ಜ್ ಆಗಿ ಭಾರತೀಯ ಮೂಲದ ವಕೀಲ

07:57 PM Sep 07, 2022 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬಿಡನ್‌ ಅವರು ಭಾರತೀಯ ಮೂಲದ ವಕೀಲ ಅರುಣ್‌ ಸುಬ್ರಮಣಿಯನ್‌ ಅವರನ್ನು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಗೆ ಅಮೆರಿಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಿಸಿದ್ದಾರೆ.

Advertisement

ಸುಬ್ರಮಣಿಯನ್‌ ಅವರು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಗೆ ಅಮೆರಿಕ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿರುವ ಮೊದಲ ದಕ್ಷಿಣ ಏಷ್ಯಾದ ನ್ಯಾಯಾಧೀಶರಾಗಿದ್ದಾರೆ. ಸುಬ್ರಮಣಿಯನ್‌ ಅವರು 2001ರಲ್ಲಿ ಕೇಸ್‌ ವೆಸ್ಟರ್ನ್ ರಿಸರ್ವ್‌ ವಿವಿಯಿಂದ ಬಿಎ ಪದವಿ ಹಾಗೂ 2004ರಲ್ಲಿ ಕೊಲಂಬಿಯಾ ಲಾ ಸ್ಕೂಲ್‌ನಿಂದ ಜೆ.ಡಿ. ಪದವಿ ಪಡೆದಿದ್ದಾರೆ. ಪ್ರಸ್ತುತ ನ್ಯೂಯಾರ್ಕ್‌ನ ಸುಸ್ಮಾನ್‌ ಗಾಡ್ಫ್ರೆ ಎಲ್‌ಎಲ್‌ಪಿ ಯ ಪಾಲುದಾರರಾಗಿದ್ದಾರೆ.

ಮೊದಲ ಭಾರತೀಯ: ಅಮೆರಿಕದ ವಿದೇಶಾಂಗ ಸಚಿವಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಪತ್ರಿಕಾಗೋಷ್ಠಿ ನಡೆಸಿ ಪ್ರಮುಖ ವಿಚಾರಗಳನ್ನು ವಿವರಿಸಿದ್ದಾರೆ. ಸದ್ಯ ಅವರು ಪ್ರಧಾನ ಉಪ ಮಾಧ್ಯಮ ವಕ್ತಾರ ವೇದಾಂತ್‌ ಪಟೇಲ್‌ ಅಮೆರಿಕದ ವಿದೇಶಾಂಗ ಸಚಿವಾಲಯದ ಪತ್ರಿಕಾಗೋಷ್ಠಿ ನಡೆಸಿದ ಮೊದಲ ಭಾರತೀಯ ಮೂಲದವರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಗುಜರಾತ್‌ ಮೂಲದವರಾಗಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯ ಪದವೀಧರರಾಗಿದ್ದಾರೆ. ಸದ್ಯ ಅವರು ವಿದೇಶಾಂಗ ಇಲಾಖೆಯಲ್ಲಿ  ಪ್ರಧಾನ ಉಪವಕ್ತಾರರಾಗಿದ್ದಾರೆ. ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಸಹಾಯಕ ಪತ್ರಿಕಾ ಕಾರ್ಯದರ್ಶಿ ಮತ್ತು ವಕ್ತಾರನಾಗಿ ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next