ವಾಷಿಂಗ್ಟನ್: ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಬಾಹ್ಯಾ ಕೇಶ ಕೇಂದ್ರಕ್ಕೆ ಆಗಮಿಸಿದ್ದ ಭಾರತೀಯ-ಅಮೆರಿಕನ್ ಗಗನಯಾತ್ರಿ ರಾಜಾಚಾರಿ ಇದೇ ಮೊದಲ ಬಾರಿಗೆ ಬಾಹ್ಯಾ ಕಾಶ ನಡಿಗೆಯನ್ನು ಯಶಸ್ವಿ ಯಾಗಿ ಪೂರೈಸಿದ್ದಾರೆ.
ಫ್ಲೈಟ್ ಎಂಜಿನಿಯರ್ ಕಾಯ್ಲ ಬ್ಯಾರನ್ ಅವರೊಂದಿಗೆ ರಾಜಾ ಚಾರಿ ಅವರು ಬಾಹ್ಯಾಕಾಶ ಕೇಂದ್ರದ ಹೊರಗೆ ಬಂದು ಸೌರಫಲಕಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಿದ್ದಾರೆ.
ಏರ್‌ಲಾಕ್‌ನ ಸುರಕ್ಷಿತ ಪ್ರದೇಶ ದಿಂದ ಹೊರಬಂದು, ಬಾಹ್ಯಾ ಕಾಶದ ಶೂನ್ಯ ವಲಯ ಪ್ರವೇಶಿಸಿ ಸುಮಾರು 6.5 ಗಂಟೆಗಳ ಕಾಲ ಸ್ಪೇಸ್‌ವಾಕ್ ಮಾಡಿದ್ದಾರೆ.
ಇದನ್ನೂ ಓದಿ:ದುಬಾರಿಯಾಯಿತು ಮ್ಯಾಗಿ,ಬ್ರೂ, ನೆಸ್‌ಕೆಫೆ! ಬೆಲೆ ಏರಿಸಿದ ನೆಸ್ಲೆ , ಹಿಂದೂಸ್ತಾನ್ ಯೂನಿಲಿವರ್
ಸೌರ ಫಲಕ ಮೇಲ್ದರ್ಜೆಗೇರಿಸುವುದರಿಂದ ಬಾಹ್ಯಾಕಾಶ ಕೇಂದ್ರದ ವಿದ್ಯುತ್ಛಕ್ತಿ ಸಾಮರ್ಥ್ಯವು ಈಗಿರುವ 160 ಕಿ.ವ್ಯಾ.ನಿಂದ 215 ಕಿ.ವ್ಯಾ.ಗೆ ಏರಿಕೆಯಾಗಲಿದೆ.