Advertisement
ಭಾರತ ಮತ್ತು ಚೀನಾ ನಡುವೆ ಸಂಘರ್ಷ ಆರಂಭಗೊಂಡ ದಿನದಿಂದ ಭಾರತದ ವಾಯುಪಡೆ ತನ್ನ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳತೊಡಗಿದ್ದು, ಇದೀಗ ಭಾರತದ ವಾಯುಪಡೆ ಆಕಾಶದಲ್ಲೇ ಸನ್ನದ್ಧವಾಗಿ ಭಾರತೀಯ ಪಡೆಯನ್ನು ರಕ್ಷಿಸಿಕೊಳ್ಳುವ ವ್ಯೂಹ ರಚಿಸಿದ್ದು, ಶತ್ರುಪಡೆಯನ್ನು 8 ನಿಮಿಷದಲ್ಲೇ ಪ್ರಬಲ ದಾಳಿ ನಡೆಸಿ ಬುದ್ಧಿ ಕಲಿಸುವ ಸಾಮರ್ಥ್ಯ ಹೊಂದಿರುವುದಾಗಿ ವರದಿ ವಿವರಿಸಿದೆ.
Related Articles
Advertisement
ಇಂದು ಭಾರತ ಕೂಡಾ ಆಯಕಟ್ಟಿನ ಸ್ಥಳದಲ್ಲಿ ಸರ್ವಸನ್ನದ್ಧವಾಗಿದೆ!ಇಂತಹ ಕಠಿಣ ಪರಿಸ್ಥಿತಿಯನ್ನು ಅರಿತಿರುವ ಭಾರತ ಇಂದು ಆಯ ಕಟ್ಟಿನ ಸ್ಥಳದಲ್ಲಿ ಸರ್ವಸನ್ನದ್ಧವಾಗಿದೆ. ಭಾರತದ ಯುದ್ಧ ವಿಮಾನಗಳು ಅತೀ ಎತ್ತರದ ಪ್ರದೇಶದಲ್ಲಿಯೂ ಲೀಲಾಜಾಲವಾಗಿ ಕಾರ್ಯಾಚರಿಸಬಲ್ಲದಾಗಿದೆ. ಭಾರತದ ವಾಯುಪಡೆಯಲ್ಲಿರುವ ಸುಖೋಯ್, ಮಿರಾಜ್, ಜಾಗ್ವಾರ್, ಮಿಗ್ ಲಡಾಖ್ ನ ಅತೀ ಎತ್ತರ ಪರ್ವತ ಶ್ರೇಣಿಯಲ್ಲಿ ಮಿಂಚಿನಂತೆ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಚೀನಾಕ್ಕೆ ಈ ಅವಕಾಶ ಇಲ್ಲ. ಯಾಕೆಂದರೆ ಸೂಕ್ತ ವಾಯುನೆಲೆ ಇಲ್ಲದ ಪರಿಣಾಮ ಪಾಕಿಸ್ತಾನದ ಸ್ಕರ್ದು ವಾಯುನೆಲೆಯ ಪ್ರಯೋಜನ ಪಡೆದುಕೊಳ್ಳುವ ಲೆಕ್ಕಚಾರ ಹಾಕಿಕೊಂಡಿದೆ. ಭಾರತ ಗಡಿಯಲ್ಲಿ ತನ್ನ ಸೇನೆಯನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ ಚೀನಾದ ದಾಳಿಯನ್ನು ಎದುರಿಸಲು ಭಾರತೀಯ ಸೇನೆ ಆಕಾಶ್ ಮಿಸೈಲ್ ಅನ್ನು ರವಾನಿಸಿದೆ. ಈ ಮಿಸೈಲ್ಸ್ ಗಳು ಶತ್ರುದೇಶದ ಯುದ್ಧ ವಿಮಾನ, ಡ್ರೋನ್ ಹಾಗೂ ಮಿಸೈಲ್ಸ್ ಅನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಭಾರತದ ಬತ್ತಳಿಕೆಯಲ್ಲಿ ಬ್ರಹ್ಮೋಸ್ ಮಿಸೈಲ್ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ವಾಯುಪಡೆ ಹೊಂದಿರುವ ಭಾರತದ ಸೇನೆ ಚೀನಾ ದಾಳಿ ಎದುರಿಸಿ ತಕ್ಕಪಾಠ ಕಲಿಸಲು ಸಿದ್ಧವಾಗಿರುವುದಾಗಿ ವರದಿ ವಿವರಿಸಿದೆ.