Advertisement

Indian AI model ಕ್ಯಾನ್ಸರ್‌ ಪತ್ತೆಗೆ ಎಐ ಬಳಕೆ

07:29 PM Sep 11, 2023 | Team Udayavani |

ಕ್ಯಾನ್ಸರ್‌ ಅನ್ನು ತಪಾಸಣೆ ಮಾಡಿ, ಅದಕ್ಕೆ ಚಿಕಿತ್ಸೆ ನೀಡುವುದೇ ಒಂದು ಸವಾಲಿನ ಕೆಲಸ. ಕೃತಕ ಬುದ್ಧಿಮತ್ತೆ ವ್ಯವಸ್ಥೆ ಜನಪ್ರಿಯವಾಗುತ್ತಿರುವ ಈ ಹಂತದಲ್ಲಿ ರೋಗದ ಪತ್ತೆಗೆ ಅದು ನೆರವಾಗಲಿದೆ.

Advertisement

ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಆಸ್ಪತ್ರೆಯಲ್ಲಿ ಪಿತ್ತಕೋಶದ ಕ್ಯಾನ್ಸರ್‌ ಪತ್ತೆ ಮಾಡುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯನ್ನು ಬಳಕೆ ಮಾಡಲಾಗಿದೆ. ಅದಕ್ಕೆ ದೆಹಲಿ ಐಐಟಿ ತಾಂತ್ರಿಕ ನೆರವು ನೀಡಿದೆ.

ದೇಹದಲ್ಲಿ ರಹಸ್ಯವಾಗಿ ಬೆಳೆದು ಜೀವವನ್ನೇ ಆಪೋಷಣ ತೆಗೆದುಕೊಳ್ಳುವ ಪಿತ್ತಕೋಶ ಕ್ಯಾನ್ಸರ್‌ ಪತ್ತೆಗಾಗಿ ಕಿಬ್ಬೊಟ್ಟೆಗೆ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ವ್ಯವಸ್ಥೆಯನ್ನು ಬಳಕೆ ಮಾಡಿ ಡೀಪ್‌ ಲರ್ನಿಂಗ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಎರಡೂ ಶಿಕ್ಷಣ ಸಂಸ್ಥೆಗಳು ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next