Advertisement

ಚಂದ್ರನತ್ತ ಭಾರತೀಯ ನಟ ದೇವ್‌!

06:21 PM Dec 09, 2022 | Team Udayavani |

ನವದೆಹಲಿ: ಜಪಾನ್‌ನ ಕೋಟ್ಯಧಿಪತಿ ಯುಸಾಕು ಮಝಾವಾ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಚಂದ್ರನತ್ತ ನಾಗರಿಕರೇ ಪ್ರಯಾಣ ಬೆಳೆಸಲಿದ್ದಾರೆ.

Advertisement

“ಡಿಯರ್‌ ಮೂನ್‌’ ಎಂಬ ಹೆಸರಿನ ಈ ಯೋಜನೆ ಮುಂದಿನ ವರ್ಷ ಸಾಕಾರಗೊಳ್ಳಲಿದೆ. ತಮ್ಮೊಂದಿಗೆ ಚಂದಿರನ ಕಡೆಗೆ ಪ್ರಯಾಣ ಬೆಳೆಸಲಿರುವ 8 ಮಂದಿಯ ಪಟ್ಟಿಯನ್ನು ಯುಸಾಕು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ನಟರೊಬ್ಬರ ಹೆಸರಿದೆ.

ಅವರ್ಯಾರು ಗೊತ್ತಾ?
ಗುಜರಾತ್‌ನ ನಟ ದೇವ್‌ ಡಿ. ಜೋಷಿ. ಗುಜರಾತ್‌ನಲ್ಲೇ ಹುಟ್ಟಿರುವ ಜೋಷಿ ಅವರು 20ಕ್ಕೂ ಹೆಚ್ಚು ಗುಜರಾತಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ, ಸೋನಿ ಸಾಬ್‌ನ ಬಾಲ್‌ ವೀರ್‌ ಮತ್ತು ಬಾಲ್‌ವೀರ್‌ ರಿಟರ್ನ್Õ ಶೋಗಳಲ್ಲಿ ಬಾಲವೀರನ ಪಾತ್ರಧಾರಿಯಾಗಿ ಅವರು ಮನೆ ಮಾತಾಗಿದ್ದಾರೆ.

ಯಾರ್ಯಾರಿದ್ದಾರೆ?
ಜೋಷಿ ಮಾತ್ರವಲ್ಲದೇ ಅಮೆರಿಕದ ಡಿಜೆ ಸ್ಟೀವ್‌ ಆಕಿ, ಕೊರಿಯಾದ ಸಂಗೀತಗಾರ ಚೋಯಿ ಸಂಗ್‌ ಹ್ಯುನ್‌, ಐರ್ಲೆಂಡ್‌ನ‌ ಫೋಟೋಗ್ರಾಫಿಕ್‌ ಆರ್ಟಿಸ್ಟ್‌ ಆ್ಯಡಮ್‌, ಯೂಟ್ಯೂಬರ್‌ ಟಿಮ್‌ ಡೋಡ್‌, ಅಮೆರಿಕದ ಚಿತ್ರ ನಿರ್ದೇಶಕ ಬ್ರೆಂಡನ್‌ ಹಾಲ್‌ ಸೇರಿದಂತೆ ವಿವಿಧ ಕಲಾತ್ಮಕ ಕ್ಷೇತ್ರಗಳ 8 ಮಂದಿ ಈ ತಂಡದಲ್ಲಿದ್ದಾರೆ.

ಪಯಣ ಹೇಗೆ?
ಉದ್ಯಮಿ ಎಲಾನ್‌ ಮಸ್ಕ್ ಅವರ ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ 2023ರಲ್ಲಿ ಇವರೆಲ್ಲರೂ ಚಂದ್ರನತ್ತ ಹಾರಲಿದ್ದಾರೆ. ಇದು ಒಂದು ವಾರದ ಪಯಣವಾಗಿರಲಿದ್ದು, ರಾಕೆಟ್‌ ಚಂದ್ರನಲ್ಲಿಗೆ ಹೋಗಿ, ಎಲ್ಲರನ್ನೂ ವಾಪಸ್‌ ಕರೆತರಲಿದೆ. 2018ರಲ್ಲೇ ಯುಸಾಕು ಅವರು ಈ ರಾಕೆಟ್‌ನ ಎಲ್ಲ ಸೀಟುಗಳನ್ನೂ ಕಾಯ್ದಿರಿಸಿದ್ದರು. ಜತೆಗೆ, ನನ್ನೊಂದಿಗೆ ಪಯಣಿಸಲಿರುವ 8 ಮಂದಿಯನ್ನು ನಾನೇ ಜಗತ್ತಿನ ಬೇರೆ ಬೇರೆ ಮೂಲೆಗಳಿಂದ ಆಯ್ಕೆ ಮಾಡಲಿದ್ದೇನೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next