Advertisement

ಧೋನಿ- ಜಾಧವ್ ಮ್ಯಾಜಿಕ್ : ಭಾರತಕ್ಕೆ ಐತಿಹಾಸಿಕ ಏಕದಿನ ಸರಣಿ

10:46 AM Jan 18, 2019 | |

ಮೆಲ್ಬೋರ್ನ್: ಭಾರತ- ಆಸ್ಟ್ರೇಲಿಯಾ ನಡುವಿನ ಅಂತಿಮ ಏಕದಿನ ಪಂದ್ಯ ಗೆಲ್ಲುವ ಮೂಲಕ ಕೊಹ್ಲಿ ಪಡೆ, ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ಪಂದ್ಯ ಗೆಲ್ಲಲು 231 ರನ್ ಗಳ ಗುರಿ ಪಡೆದ ಭಾರತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಹಸದಿಂದ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. 

Advertisement

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 230 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ಯುಜುವೇಂದ್ರ ಚಾಹಲ್ 6  ವಿಕೆಟ್ ಪಡೆದು ಆಸೀಸ್ ಆಟಗಾರರಿಗೆ ಕಡಿವಾಣ ಹಾಕಿದ್ದರು. 

ಗುರಿ ಬೆನ್ನತ್ತಿದ ಭಾರತದ ಸ್ಥಿತಿಯೇನು ಭಿನ್ನವಾಗಿರಲಿಲ್ಲ. ಕೇವಲ 9 ರನ್ ಗಳಿಸಿದ ರೋಹಿತ್ ಶರ್ಮಾ ಅಗ್ಗಕ್ಕೆ ವಿಕೆಟ್ ಒಪ್ಪಿಸಿದರೆ, ಧವನ್ 23 ಮತ್ತು ನಾಯಕ ಕೊಹ್ಲಿ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

 
ನಂತರ ಕೇದಾರ್ ಜಾದವ್ ಜೊತೆಗೂಡಿದ ಮಹೇಂದ್ರ ಸಿಂಗ್ ಧೋನಿ ಶತಕದ ಜೊತೆಯಾಟವಾಡಿದರು.  ಧೋನಿ ಅಜೇಯ 87 ರನ್ ಗಳಿಸಿದರೆ, ಕೇದಾರ್ ಜಾಧವ್ 61 ರನ್ ಗಳಿಸಿ ಅಜೇಯರಾಗಿ ಉಳಿದರು .

ಇದೇ ಮೊದಲ ಬಾರಿಗೆ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ. ಟಿ-20ಯಲ್ಲಿ ಸಮಬಲ, ಟೆಸ್ಟ್ ಸರಣಿ ವಿಜಯದ ನಂತರ ಇದೀಗ ಏಕದಿನದಲ್ಲೂ ಸರಣಿ ಗೆಲುವಿನ ಮೂಲಕ ಕೊಹ್ಲಿ ಪಡೆ ಇದೇ ಮೊದಲ ಬಾರಿಗೆ ಆಸೀಸ್ ಸರಣಿಯನ್ನು ಅಜೇಯವಾಗಿ ಪೂರ್ಣಗೊಳಸಿದ ಐತಿಹಾಸಿಕ ಸಾಧನೆ ಮಾಡಿದೆ.


ಬಿಗು ಬೌಲಿಂಗ್ ದಾಳಿ ನಡೆಸಿದ ಚಾಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಮೂರು ಅರ್ಧಶತಕ ಬಾರಿಸಿದ ಧೋನಿ ಸರಣಿ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next