Advertisement

3-0: ಕೊಹ್ಲಿ ಪಡೆಗೆ ವಿರಾಟ್ ಸರಣಿ ವಿಜಯ

07:29 AM Oct 23, 2019 | keerthan |

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಭಾರತ ಅಧಿಕಾರಯುತವಾಗಿ ಗೆದ್ದುಕೊಂಡಿದೆ.

Advertisement

ರಾಂಚಿ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಆಫ್ರಿಕಾ ಸೋಲು ಬಹುತೇಕ ಖಚಿತವಾಗಿತ್ತು. ಭಾರತದ ಗೆಲುವಿಗೆ ಕೇವಲ ಎರಡು ವಿಕೆಟ್ ಅಗತ್ಯವಿದ್ದರೆ, ಆಫ್ರಿಕಾ ಸೋಲು ತಪ್ಪಿಸಿಕೊಳ್ಳಬೇಕಿದ್ದರೆ ಇರುವ ಎರಡು ವಿಕೆಟ್ ನಲ್ಲಿ ಎರಡು ದಿನಪೂರ್ತಿ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿತ್ತು. ಆದರೆ ಹರಿಣಗಳಿಗೆ ಇದು ಸಾಧ್ಯವಾಗಿಲ್ಲ.

ಮೂರನೇ ದಿನದ ಅಂತ್ಯಕ್ಕೆ 132 ರನ್ ಗಳಿಸಿದ್ದ ಹರಿಣಗಳು ಇಂದು ತನ್ನ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಎರಡೂ ವಿಕೆಟ್ ಕಳೆದುಕೊಂಡಿತು. ಈ ಎರಡೂ ವಿಕೆಟ್ ಗಳು ಶಬಾಜ್ ನದೀಂ ಪಾಲಾಯಿತು.

ಈ ಸರಣಿ ಗೆಲುವಿನಿಂದ ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಅಧಿಪತ್ಯ  ಮುಂದುವರಿಸಿತು.

ಭಾರತ ಮೊದಲ ಇನ್ನಿಂಗ್ಸ್ : 9 ವಿಕೆಟ್ ಗೆ 497 ಡಿಕ್ಲೇರ್
ದ. ಆಪ್ರಿಕಾ ಮೊದಲ ಇನ್ನಿಂಗ್ಸ್: 162
ದ. ಆಪ್ರಿಕಾ ದ್ವಿತೀಯ ಇನ್ನಿಂಗ್ಸ್: 133

Advertisement
Advertisement

Udayavani is now on Telegram. Click here to join our channel and stay updated with the latest news.

Next