Advertisement
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಏಂಜೆಲೊ ಮ್ಯಾಥ್ಯೂಸ್ ಅವರ ಶತಕದ ನೆರವಿನಿಂದ 7 ವಿಕೆಟಿಗೆ 264 ರನ್ ಗಳಿಸಿದರೆ, ಭಾರತ 43.3 ಓವರ್‌ಗಳಲ್ಲಿ 3 ವಿಕೆಟಿಗೆ 265 ರನ್ ಬಾರಿಸಿ ಸುಲಭ ಜಯ ಸಾಧಿಸಿತು.
ಭಾರತದ ಅಭಿಯಾನದ ವೇಳೆ ರೋಹಿತ್ ಶರ್ಮ 94 ಎಸೆತಗಳಿಂದ 103 ರನ್ ಬಾರಿಸಿದರು (14 ಬೌಂಡರಿ, 2 ಸಿಕ್ಸರ್). ಇದು ಈ ವಿಶ್ವಕಪ್‌ನಲ್ಲಿ ರೋಹಿತ್ ಬಾರಿಸಿದ ಸರ್ವಾಧಿಕ 5 ಶತಕಗಳ ವಿಶ್ವದಾಖಲೆ. ಹಾಗೆಯೇ ಶತಕಗಳ ಹ್ಯಾಟ್ರಿಕ್ ಸಾಧನೆಯೂ ಹೌದು. ಇನ್ನೊಂದೆಡೆ ಕೆ.ಎಲ್. ರಾಹುಲ್ 111 ರನ್ ಸೂರೆಗೈದು ವಿಶ್ವಕಪ್‌ನಲ್ಲಿ ಮೊದಲ ಶತಕ ಸಂಭ್ರಮವನ್ನಾಚರಿಸಿದರು. 118 ಎಸೆತ ಎದುರಿಸಿದ ರಾಹುಲ್ 11 ಫೋರ್, ಒಂದು ಸಿಕ್ಸರ್ ಚಚ್ಚಿದರು. ಇವರಿಬ್ಬರಿಂದ ಮೊದಲ ವಿಕೆಟಿಗೆ 30.1 ಓವರ್‌ಗಳಿಂದ 189 ರನ್ ಹರಿದು ಬಂತು. ನಾಯಕ ವಿರಾಟ್ ಕೊಹ್ಲಿ ಔಟಾಗದೆ 34 ರನ್ ಮಾಡಿದರು.
Related Articles
ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಭಾರತದೆದುರು ಶತಕ ಬಾರಿಸುವ ಪರಿಪಾಠ ವನ್ನು ಮುಂದುವರಿಸಿ 113 ರನ್ ಕೊಡುಗೆ ಸಲ್ಲಿಸಿದರು.
211ನೇ ಏಕದಿನ ಪಂದ್ಯವಾಡುತ್ತಿರುವ ಮ್ಯಾಥ್ಯೂಸ್ ಹೊಡೆದ 3ನೇ ಶತಕ ಇದಾಗಿದೆ. ಸ್ವಾರಸ್ಯವೆಂದರೆ, ಅವರ ಹಿಂದಿನೆರಡು ಶತಕಗಳೂ ಭಾರತದೆದುರೇ ದಾಖಲಾಗಿರುವುದು! ಮೊಹಾಲಿ ಮತ್ತು ರಾಂಚಿ ಪಂದ್ಯಗಳಲ್ಲಿ ಮ್ಯಾಥ್ಯೂಸ್ ಮೂರಂಕೆಯ ಗಡಿ ದಾಟಿದ್ದರು.
Advertisement
ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುವ ಶ್ರೀಲಂಕಾ ನಿರ್ಧಾರಕ್ಕೆ ಜಸ್‌ಪ್ರೀತ್ ಬುಮ್ರಾ ಭಾರೀ ಆಘಾತವಿಕ್ಕಿದರು. 12 ಓವರ್ ಆಗುವಷ್ಟರಲ್ಲಿ 55 ರನ್ನಿಗೆ 4 ವಿಕೆಟ್ ಉದುರಿತು. ಆರಂಭಿಕರಾದ ದಿಮುತ್ ಕರುಣರತ್ನೆ (10) ಮತ್ತು ಕುಸಲ್ ಪೆರೆರ (18) ಬುಮ್ರಾ ಬುಟ್ಟಿಗೆ ಬಿದ್ದರು. ವಿಂಡೀಸ್ ಎದುರಿನ ಕಳೆದ ಪಂದ್ಯದಲ್ಲಿ ಶತಕ ಹೊಡೆದ ಆವಿಷ್ಕ ಫೆರ್ನಾಂಡೊ ಇಲ್ಲಿ 20 ರನ್ ಮಾಡಿ ವಾಪಸಾದರು. ಕುಸಲ್ ಮೆಂಡಿಸ್ ಆಟ ಮೂರೇ ರನ್ನಿಗೆ ಮುಗಿಯಿತು.
ಈ ಅವಧಿಯಲ್ಲಿ ಕೀಪರ್ ಧೋನಿ ಕೈಚಳಕವೂ ಅಮೋಘ ಮಟ್ಟದಲ್ಲಿತ್ತು. ಈ ನಾಲ್ಕೂ ವಿಕೆಟ್ ಪತನಗಳಲ್ಲಿ ಧೋನಿ ಪಾಲಿತ್ತು. ಅವರು 3 ಕ್ಯಾಚ್ ಜತೆಗೆ ಒಂದು ಸ್ಟಂಪಿಂಗ್ ಕೂಡ ನಡೆಸಿದರು.
ಮ್ಯಾಥ್ಯೂಸ್ ಜವಾಬ್ದಾರಿಯ ಆಟಮುಂದಿನದು ಏಂಜೆಲೊ ಮ್ಯಾಥ್ಯೂಸ್ ಅವರ ಜವಾಬ್ದಾರಿಯುತ ಆಟದ ಸರದಿ. ಅವರಿಗೆ ಮತ್ತೋರ್ವ ಅನುಭವಿ ಆಟಗಾರ ಲಹಿರು ತಿರಿಮನ್ನೆ ಉತ್ತಮ ಬೆಂಬಲ ನೀಡಿದರು. ಇವರಿಬ್ಬರಿಂದ 5ನೇ ವಿಕೆಟಿಗೆ 124 ರನ್ ಒಟ್ಟುಗೂಡಿತು. ಲಂಕಾ ಎದ್ದು ನಿಂತಿತು. 32ರ ಹರೆಯದ ಮ್ಯಾಥ್ಯೂಸ್ 128 ಎಸೆತಗಳಿಂದ 113 ರನ್ ಬಾರಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ತಿರಿಮನ್ನೆ 68 ಎಸೆತಗಳಿಂದ 53 ರನ್ ಹೊಡೆದರು (4 ಬೌಂಡರಿ). ಭಾರತದ ಬೌಲಿಂಗ್ ಸರದಿಯಲ್ಲಿ ಭುವನೇಶ್ವರ್, ಕುಲದೀಪ್ ಬಹಳ ದುಬಾರಿಯಾಗಿ ಪರಿಣಮಿಸಿದರು. ಬುಮ್ರಾ 2 ಮೇಡನ್ ಓವರ್ ಎಸೆಯುವುದರ ಜತೆಗೆ ಕೇವಲ 37 ರನ್ನಿತ್ತು 3 ವಿಕೆಟ್ ಉಡಾಯಿಸಿದರು. ಮೊಹಮ್ಮದ್ ಶಮಿ, ಚಹಲ್‌ಗೆ ವಿಶ್ರಾಂತಿ
ಶ್ರೀಲಂಕಾ ವಿರುದ್ಧದ ಅಂತಿಮ ಲೀಗ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ 2 ಬದಲಾವಣೆ ಸಂಭವಿಸಿತು. ಇನ್‌ಫಾರ್ಮ್ ಬೌಲರ್ ಮೊಹಮ್ಮದ್ ಶಮಿ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಅವರಿಗೆ ವಿಶ್ರಾಂತಿ ನೀಡಲಾಯಿತು. ಇವರ ಬದಲು ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಸೇರ್ಪಡೆಗೊಂಡರು. ಜಡೇಜ ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಕಂಡುಬಂತು. ಜೆಫ್ರಿ ವಾಂಡರ್ಸೆ ಬದಲು ತಿಸರ ಪೆರೆರ ಅವಕಾಶ ಪಡೆದರು. ಜಸ್‌ಪ್ರೀತ್‌ಬುಮ್ರಾ 100 ವಿಕೆಟ್ ಸಾಧನೆ
ಭಾರತದ ಸೀಮರ್ ಜಸ್‌ಪ್ರೀತ್ ಬುಮ್ರಾ ಶ್ರೀಲಂಕಾ ಎದುರಿನ ಪಂದ್ಯದ ವೇಳೆ ಏಕದಿನದಲ್ಲಿ 100 ವಿಕೆಟ್ ಉರುಳಿಸಿದ ಸಾಧನೆಗೈದರು. ಲಂಕಾ ನಾಯಕ ದಿಮುತ್ ಕರುಣರತ್ನೆ ಅವರನ್ನು ಪಂದ್ಯದ 4ನೇ ಓವರಿನಲ್ಲಿ ಔಟ್ ಮಾಡುವ ಮೂಲಕ ಬುಮ್ರಾ ಈ ಮೈಲುಗಲ್ಲು ನೆಟ್ಟರು. ಇದು ಬುಮ್ರಾ ಅವರ 57ನೇ ಪಂದ್ಯ. ಭಾರತದ ಸಾಧಕರ ಯಾದಿಯಲ್ಲಿ ಅವರಿಗೆ 2ನೇ ಸ್ಥಾನ. ಮೊಹಮ್ಮದ್ ಶಮಿ 56 ಪಂದ್ಯಗಳಿಂದ 100 ವಿಕೆಟ್ ಉರುಳಿಸಿದ್ದು ಭಾರತೀಯ ದಾಖಲೆಯಾಗಿದೆ. ಸ್ಕೋರ್ ಪಟ್ಟಿ
ಶ್ರೀಲಂಕಾ
ದಿಮುತ್ ಕರುಣರತ್ನೆ ಸಿ ಧೋನಿ ಬಿ ಬುಮ್ರಾ 10
ಕುಸಲ್ ಪೆರೆರ ಸಿ ಧೋನಿ ಬಿ ಬುಮ್ರಾ 18
ಆವಿಷ್ಕ ಫೆರ್ನಾಂಡೊ ಸಿ ಧೋನಿ ಬಿ ಪಾಂಡ್ಯ 20
ಕುಸಲ್ ಮೆಂಡಿಸ್ ಸ್ಟಂಪ್ಡ್ ಧೋನಿ ಜಡೇಜ 3
ಏಂಜೆಲೊ ಮ್ಯಾಥ್ಯೂಸ್ ಸಿ ರೋಹಿತ್ ಬಿ ಬುಮ್ರಾ 113
ಲಹಿರು ತಿರಿಮನ್ನೆ ಸಿ ಜಡೇಜ ಬಿ ಕುಲದೀಪ್ 53
ಧನಂಜಯ ಡಿ ಸಿಲ್ವ ಔಟಾಗದೆ 29
ತಿಸರ ಪೆರೆರ ಸಿ ಪಾಂಡ್ಯ ಬಿ ಭುವನೇಶ್ವರ್ 2
ಇಸುರು ಉದಾನ ಔಟಾಗದೆ 1
ಇತರ 15
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 264
ವಿಕೆಟ್ ಪತನ: 1-17, 2-40, 3-53, 4-55, 5-179, 6-253, 7-260.
ಬೌಲಿಂಗ್: ಭುವನೇಶ್ವರ್ ಕುಮಾರ್ 10-0-73-1
ಜಸ್‌ಪ್ರೀತ್ ಬುಮ್ರಾ 10-2-37-3
ಹಾರ್ದಿಕ್ ಪಾಂಡ್ಯ 10-0-50-1
ರವೀಂದ್ರ ಜಡೇಜ 10-0-40-1
ಕುಲದೀಪ್ ಯಾದವ್ 10-0-58-1 ಭಾರತ
ಕೆ.ಎಲ್. ರಾಹುಲ್ ಸಿ ಕೆ.ಪೆರೆರ ಬಿ ಮಾಲಿಂಗ 111
ರೋಹಿತ್ ಶರ್ಮ ಸಿ ಮ್ಯಾಥ್ಯೂಸ್ ಬಿ ರಜಿತ 103
ವಿರಾಟ್ ಕೊಹ್ಲಿ ಔಟಾಗದೆ 34
ರಿಷಭ್ ಪಂತ್ ಎಲ್‌ಬಿಡಬ್ಲ್ಯು ಉದಾನ 4
ಹಾರ್ದಿಕ್ ಪಾಂಡ್ಯ ಔಟಾಗದೆ 7
ಇತರ 6
ಒಟ್ಟು (43.3 ಓವರ್‌ಗಳಲ್ಲಿ 3 ವಿಕೆಟಿಗೆ) 265
ವಿಕೆಟ್ ಪತನ: 1-189, 2-244, 3-253.
ಬೌಲಿಂಗ್:
ಲಸಿತ ಮಾಲಿಂಗ 10-1-82-1
ಕಸುನ್ ರಜಿತ 8-0-47-1 ಇಸುರು ಉದಾನ 9.3-0-50-1
ತಿಸರ ಪೆರೆರ 10-0-34-0
ಧನಂಜಯ ಡಿ ಸಿಲ್ವ 6-0-51-0 ಪಂದ್ಯಶ್ರೇಷ್ಠ: ರೋಹಿತ್ ಶರ್ಮ