Advertisement
ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಮೂರೇ ವಿಕೆಟಿಗೆ 240 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟಿಗೆ 173 ರನ್ ಮಾಡಿ ಶರಣಾಯಿತು.
Related Articles
ರಾಹುಲ್, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಆರ್ಭಟದಿಂದ ಭಾರತ ಟಿ20 ಕ್ರಿಕೆಟ್‌ನಲ್ಲಿ ತನ್ನ 3ನೇ, ವಿಂಡೀಸ್ ವಿರುದ್ಧ 2ನೇ ಬೃಹತ್ ಮೊತ್ತ ದಾಖಲಿಸಿತು.
Advertisement
ಹಿಂದಿನೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮ ತವರಿನ ಅಂಗಳದಲ್ಲಿ ಪ್ರಚಂಡ ಬೀಸುಗೆಗೆ ಮುಂದಾದರು. ಇವರೊಂದಿಗೆ ರಾಹುಲ್ ಕೂಡ ಸಿಡಿದು ನಿಂತರು. ಮೊದಲ ವಿಕೆಟಿಗೆ 11.4 ಓವರ್‌ಗಳಿಂದ 135 ರನ್ ಹರಿದು ಬಂತು. ಇದು ವಿಂಡೀಸ್ ವಿರುದ್ಧ ಮೊದಲ ವಿಕೆಟಿಗೆ ಭಾರತ ಪೇರಿಸಿದ ಅತ್ಯಧಿಕ ಮೊತ್ತವಾಗಿದೆ. ಪವರ್ ಪ್ಲೇಯಲ್ಲಿ 72 ರನ್ ಪೇರಿಸಿದ ರೋಹಿತ್-ರಾಹುಲ್, ಮೊದಲ 10 ಓವರ್‌ಗಳಲ್ಲಿ 116 ರನ್ ಒಟ್ಟುಗೂಡಿಸಿದರು. ಇದು ಟಿ20ಯಲ್ಲಿ ಇವರಿಬ್ಬರು ಮೊದಲ ವಿಕೆಟಿಗೆ ದಾಖಲಿಸಿದ 3ನೇ ಶತಕದ ಜತೆಯಾಟ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಪೂರೈಸಿ ಮುನ್ನುಗ್ಗಿದ ರೋಹಿತ್, 34 ಎಸೆತಗಳಿಂದ 71 ರನ್ ಬಾರಿಸಿದರು. ಈ ವೇಳೆ 6 ಬೌಂಡರಿ, 5 ಸಿಕ್ಸರ್ ಸಿಡಿಯಲ್ಪಟ್ಟಿತು.
ಶತಕದ ನಿರೀಕ್ಷೆ ಮೂಡಿಸಿದ್ದ ರಾಹುಲ್ ವಾಂಖೇಡೆಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿ 91 ರನ್ ಸೂರೆಗೈದರು. ಎದುರಿಸಿದ್ದು 56 ಎಸೆತ, ಸಿಡಿಸಿದ್ದು 9 ಬೌಂಡರಿ ಹಾಗೂ 4 ಸಿಕ್ಸರ್. ವಾಂಖೇಡೆಯ ಹಿಂದಿನೆರಡು ಟಿ20 ಪಂದ್ಯಗಳಲ್ಲಿ ರಾಹುಲ್ 94 ಹಾಗೂ 100 ರನ್ ಬಾರಿಸಿದ್ದರು.
ಹಿಂದಿನ ಪಂದ್ಯದಲ್ಲಿ ಶಿವಂ ದುಬೆ ಅವರನ್ನು ವನ್‌ಡೌನ್‌ನಲ್ಲಿ ಕಳಿಸಿ ಯಶಸ್ಸು ಪಡೆದಿದ್ದ ಕೊಹ್ಲಿ, ಇಲ್ಲಿ ರಿಷಭ್ ಪಂತ್ ಅವರಿಗೆ ಈ ಅವಕಾಶ ನೀಡಿದರು. ಆದರೆ ಪಂತ್ ಸೊನ್ನೆ ಸುತ್ತಿ ನಡೆದರು. ಅನಂತರ ಕೊಹ್ಲಿಯ ಆರ್ಭಟ ಮೊದಲ್ಗೊಂಡಿತು. ಆರಂಭಿಕರಿಗಿಂತಲೂ ಸ್ಫೋಟಕ ಆಟವಾಡಿದ ಕೊಹ್ಲಿ ಬರೀ 29 ಎಸೆತಗಳಿಂದ ಅಜೇಯ 70 ರನ್ ಸಿಡಿಸಿದರು. 2ನೇ ಪಂದ್ಯದ ಕೊನೆಯ 5 ಓವರ್‌ಗಳಲ್ಲಿ ರನ್ ಬರಲಿಲ್ಲ ಎಂದು ಪರಿತಪಿಸಿದ್ದ ಕೊಹ್ಲಿ, ಇಲ್ಲಿ 68 ರನ್ ಬಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.ಭಾರತ-ವೆಸ್ಟ್ ಇಂಡೀಸ್ ಇನ್ನು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿವೆ.
ಭಾರತ ತಂಡದಲ್ಲಿ ಶಮಿ, ಕುಲದೀಪ್3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕಾಗಿ ಭಾರತ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಆಲ್‌ರೌಂಡರ್ ರವೀಂದ್ರ ಜಡೇಜ ಬದಲು ಮೊಹಮ್ಮದ್ ಶಮಿ ಬಂದರೆ, ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಬದಲು ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಸೇರಿಸಿಕೊಳ್ಳಲಾಯಿತು. ಇಬ್ಬರಿಗೂ ಇದು ಸರಣಿಯಲ್ಲಿ ಮೊದಲ ಪಂದ್ಯವಾಗಿದೆ. ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಪರಿವರ್ತನೆ ಆಗಲಿಲ್ಲ. ತಿರುವನಂತಪುರದಲ್ಲಿ ಗೆದ್ದ ಹನ್ನೊಂದರ ಬಳಗವನ್ನೇ ಉಳಿಸಿಕೊಂಡಿತು. ಸ್ಕೋರ್ ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ವಾಲ್ಶ್ ಬಿ ವಿಲಿಯಮ್ಸ್ 71
ಕೆ.ಎಲ್. ರಾಹುಲ್ ಸಿ ಪೂರನ್ ಬಿ ಕಾಟ್ರೆಲ್ 91
ಪಂತ್ ಸಿ ಹೋಲ್ಡರ್ ಬಿ ಪೊಲಾರ್ಡ್ 0
ವಿರಾಟ್ ಕೊಹ್ಲಿ ಔಟಾಗದೆ 70
ಶ್ರೇಯಸ್ ಅಯ್ಯರ್ ಔಟಾಗದೆ 0
ಇತರ 8
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 240
ವಿಕೆಟ್ ಪತನ: 1-135, 2-138, 3-233.
ಬೌಲಿಂಗ್:
ಶೆಲ್ಡನ್ ಕಾಟ್ರೆಲ್ 4-0-40-1
ಜಾಸನ್ ಹೋಲ್ಡರ್ 4-0-54-0
ಖಾರಿ ಪಿಯರೆ 4-0-54-0
ಕೆಸ್ರಿಕ್ ವಿಲಿಯಮ್ಸ್ 2-0-37-1
ಹೇಡನ್ ವಾಲ್ಶ್ 4-0-38-0
ಕೈರನ್ ಪೊಲಾರ್ಡ್ 2-0-33-1
ವೆಸ್ಟ್ ಇಂಡೀಸ್
ಲೆಂಡ್ಲ್ ಸಿಮನ್ಸ್ ಸಿ ಅಯ್ಯರ್ ಬಿ ಶಮಿ 7
ಕಿಂಗ್‌ಸಿ ರಾಹುಲ್ ಬಿ ಭುವನೇಶ್ವರ್ 5
ಹೆಟ್‌ಮೈರ್ ಸಿ ರಾಹುಲ್ ಬಿ ಕುಲದೀಪ್ 41
ನಿಕೋಲಸ್ ಪೂರಣ್ ಸಿ ದುಬೆ ಬಿ ಚಹರ್ 0
ಪೊಲಾರ್ಡ್ ಸಿ ಜಡೇಜ ಬಿ ಭುವನೇಶ್ವರ್ 68
ಜಾಸನ್ ಹೋಲ್ಡರ್ ಸಿ ಪಾಂಡೆ ಬಿ ಕುಲದೀಪ್ 8
ಹೇಡನ್ ವಾಲ್ಶ್ ಬಿ ಶಮಿ 11
ಖಾರಿ ಪಿಯರೆ ಸಿ ಜಡೇಜ ಬಿ ಚಹರ್ 6
ಕೆಸ್ರಿಕ್ ವಿಲಿಯಮ್ಸ್ ಔಟಾಗದೆ 13
ಶೆಲ್ಡನ್ ಕಾಟ್ರೆಲ್ ಔಟಾಗದೆ 4
ಇತರ 10
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 173
ವಿಕೆಟ್ ಪತನ: 1-12, 2-17, 3-17, 4-91, 5-103, 6-141, 7-152, 8-169.
ಬೌಲಿಂಗ್:
ದೀಪಕ್ ಚಹರ್ 4-0-20-2
ಭುವನೇಶ್ವರ್ ಕುಮಾರ್ 4-0-41-2
ಮೊಹಮ್ಮದ್ ಶಮಿ 4-0-25-2
ಶಿವಂ ದುಬೆ 3-0-32-0
ಕುಲದೀಪ್ ಯಾದವ್ 4-0-45-2
ವಾಷಿಂಗ್ಟನ್ ಸುಂದರ್ 1-0-5-0