Advertisement
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 5 ವಿಕೆಟಿಗೆ 90 ರನ್ ಮಾಡಿದರೆ, ಭಾರತ 7.2 ಓವರ್‌ಗಳಲ್ಲಿ 4 ವಿಕೆಟಿಗೆ 92 ರನ್ ಬಾರಿಸಿತು. ಮೊದಲ ಪಂದ್ಯವನ್ನು ಆಸೀಸ್ 4 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಏಕದಿನ ಪಂದ್ಯ ರವಿವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.
ಒದ್ದೆ ಅಂಗಳದಿಂದಾಗಿ ಪಂದ್ಯ ಎರಡೂವರೆ ಗಂಟೆ ವಿಳಂಬಗೊಂಡಿತು. 9.15ಕ್ಕೆ ಟಾಸ್ ಹಾರಿಸಿ, 9.30ಕ್ಕೆ ಪಂದ್ಯವನ್ನು ಪ್ರಾರಂಭಿಸಲಾಯಿತು. ಭಾರತದ ಬೌಲಿಂಗ್ ಆರಂಭಿ ಸಿದವರು ಹಾರ್ದಿಕ್ ಪಾಂಡ್ಯ. ಇದರಲ್ಲಿ ಎರಡು ಬೌಂಡರಿ ಸೇರಿದಂತೆ 10 ರನ್ ಬಂತು. ಅಕ್ಷರ್ ಪಟೇಲ್ ಅವರಿಗೂ ಬೌಂಡರಿ ಸ್ವಾಗತ ಸಿಕ್ಕಿತು. ಆದರೆ 3ನೇ ಎಸೆತದಲ್ಲಿ ಕ್ಯಾಮರಾನ್ ಗ್ರೀನ್ ರನೌಟಾಗಿ ನಿರ್ಗಮಿಸಿದರು. ಕಳೆದ ಪಂದ್ಯದ ಹೀರೋ ಗ್ರೀನ್ ಇಲ್ಲಿ ಐದೇ ರನ್ನಿಗೆ ವಾಪಸಾದರು. ಓವರ್‌ನ ಅಂತಿಮ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಬೌಲ್ಡ್ ಆದರು. ಅವರದು ಗೋಲ್ಡನ್ ಡಕ್ ಆಗಿತ್ತು.
Related Articles
Advertisement
ಬುಮ್ರಾ ದಾಳಿಗೆ ಇಳಿದದ್ದು 5ನೇ ಓವರ್‌ನಲ್ಲಿ. ಇಲ್ಲಿ ಅವರಿಗೆ ಆಸೀಸ್ ನಾಯಕನ ವಿಕೆಟ್ ಸಿಕ್ಕಿತು. ಆರನ್ ಫಿಂಚ್ 31 ರನ್ ಮಾಡಿ ಬೌಲ್ಡ್ ಆದರು. 5 ಓವರ್ ಮುಕ್ತಾಯಕ್ಕೆ ಆಸೀಸ್ 4 ವಿಕೆಟಿಗೆ 46 ರನ್ ಮಾಡಿತ್ತು.
ಮೊದಲ ಪಂದ್ಯದಲ್ಲಿ ತಂಡವನ್ನು ದಡ ಮುಟ್ಟಿಸಿದ ಮ್ಯಾಥ್ಯೂ ವೇಡ್ ಅಜೇಯ 43 ರನ್ (20 ಎಸೆತ, 4 ಬೌಂಡರಿ, 3 ಸಿಕ್ಸರ್) ಬಾರಿಸಿ ಆಸೀಸ್ ಸರದಿಯ ಟಾಪ್ ಸ್ಕೋರರ್ ಎನಿಸಿದರು. ಅವರು ಹರ್ಷಲ್ ಪಟೇಲ್ ಅವರ ಕೊನೆಯ ಓವರ್‌ನಲ್ಲಿ 3 ಸಿಕ್ಸರ್ ಸಿಡಿಸಿದರು. ವೇಡ್, ಫಿಂಚ್ ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಗಡಿ ದಾಟಲಿಲ್ಲ.
ಬುಮ್ರಾ, ಪಂತ್ ಆಗಮನಭಾರತ ಈ ಪಂದ್ಯಕ್ಕಾಗಿ ಎರಡು ಬದಲಾವಣೆ ಮಾಡಿಕೊಂಡಿತು. ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ಬದಲು ಜಸ್‌ಪ್ರೀತ್ ಬುಮ್ರಾ ಹಾಗೂ ರಿಷಭ್ ಪಂತ್ ಅವರನ್ನು ಸೇರಿಸಿಕೊಳ್ಳಲಾಯಿತು.
ಆಸ್ಟ್ರೇಲಿಯ ತಂಡದಲ್ಲೂ ಎರಡು ಪರಿವರ್ತನೆ ಕಂಡುಬಂತು. ಗಾಯಾಳು ನಥನ್ ಎಲ್ಲಿಸ್ ಹಾಗೂ ಜೋಶ್ ಇಂಗ್ಲಿಸ್ ಸ್ಥಾನಕ್ಕೆ ಸೀನ್ ಅಬೋಟ್ ಮತ್ತು ಡೇನಿಯಲ್ ಸ್ಯಾಮ್ಸ್ ಬಂದರು. ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-5 ವಿಕೆಟಿಗೆ 90 (ವೇಡ್ ಔಟಾಗದೆ 43, ಫಿಂಚ್ 31, ಅಕ್ಷರ್ ಪಟೇಲ್ 13ಕ್ಕೆ 2, ಬುಮ್ರಾ 23ಕ್ಕೆ 1). ಭಾರತ-7.2 ಓವರ್‌ಗಳಲ್ಲಿ 4 ವಿಕೆಟಿಗೆ 92 (ರೋಹಿತ್ ಔಟಾಗದೆ 46 , ಕೊಹ್ಲಿ 11, ಕಾರ್ತಿಕ್ ಔಟಾಗದೆ 10, ರಾಹುಲ್ 10, ಪಾಂಡ್ಯ 9, ಝಂಪ 10ಕ್ಕೆ 3).