Advertisement

ಅಫ್ಘಾನಾಘಾತದಿಂದ ಭಾರತ ಪಾರು

11:36 AM Jun 24, 2019 | Team Udayavani |

ಸೌತಾಂಪ್ಟನ್‌: ಬದ್ಧ ಎದುರಾಳಿ ಪಾಕಿಸ್ಥಾನವನ್ನು ನೆಲಕ್ಕೆ ಕೆಡವಿ ಭರ್ಜರಿ ಪರಾಕ್ರಮ ಮೆರೆದಿದ್ದ ಭಾರತ, ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ದುರ್ಬಲ ಹಾಗೂ ಸೋಲಿನ ಸುಳಿಗೆ ಸಿಲುಕಿದ್ದ ಅಫ್ಘಾನಿಸ್ಥಾನ ವಿರುದ್ಧ ಬಹಳ ಕಷ್ಟದಿಂದ 11 ರನ್‌ ಗೆಲುವು ಸಾಧಿಸಿ ನಿಟ್ಟುಸಿರೆಳೆದಿದೆ. ಮೊಹಮ್ಮದ್‌ ಶಮಿ ಅವರ ಹ್ಯಾಟ್ರಿಕ್‌ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

Advertisement

“ರೋಸ್‌ಬೌಲ್‌’ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಟೀಮ್‌ ಇಂಡಿಯಾ ಅಫ‌^ನ್ನರ ಘಾತಕ ದಾಳಿಗೆ ತತ್ತರಿಸಿ 8 ವಿಕೆಟಿಗೆ ಕೇವಲ 224 ರನ್‌ ಗಳಿಸಿತು. ಜವಾಬಿತ್ತ ಅಫ್ಘಾನಿಸ್ಥಾನ 49.5 ಓವರ್‌ಗಳಲ್ಲಿ 213ಕ್ಕೆ ಆಲೌಟ್‌ ಆಯಿತು. ಶಮಿ ಅಂತಿಮ 3 ವಿಕೆಟ್‌ಗಳನ್ನು ಸತತ 3 ಎಸೆತಗಳಲ್ಲಿ ಹಾರಿಸಿ ಭಾರತದ ಗೆಲುವು ಸಾರಿದರು. ಅಂತಿಮ ಓವರಿನಲ್ಲಿ ಅಫ್ಘಾನ್‌ ಗೆಲುವಿಗೆ 3 ವಿಕೆಟ್‌ಗಳಿಂದ 16 ರನ್‌ ಬೇಕಿತ್ತು.

ಕೈಕೊಟ್ಟ ಬ್ಯಾಟಿಂಗ್‌ ಯೋಜನೆ
ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಬೃಹತ್‌ ಮೊತ್ತ ಪೇರಿಸುವ ಯೋಜನೆಯಲ್ಲಿತ್ತು. ಆದರೆ ಕಪ್ತಾನ ಕೊಹ್ಲಿ ನಿರ್ಧಾರ ಆರಂಭದಲ್ಲೇ ಹೊರಳಿ ಹೋಯಿತು. ಪಾಕ್‌ ವಿರುದ್ಧ ಬ್ಯಾಟಿಂಗ್‌ ಆರ್ಭಟ ತೋರಿದ್ದ ಟೀಮ್‌ ಇಂಡಿಯಾ ಅಫ‌^ನ್ನರ ಮುಂದೆ ಥಂಡಾ ಹೊಡೆದದ್ದು ಅಚ್ಚರಿಯಾಗಿ ಕಂಡಿತು.

25.2 ಓವರ್‌ಗಳಲ್ಲಿ ರನ್ನಿಲ್ಲ!
ಇದಕ್ಕೆ ರೋಸ್‌ಬೌಲ್‌ನ ಟರ್ನಿಂಗ್‌ ಟ್ರ್ಯಾಕ್‌ ಕೂಡ ಕಾರಣವಾಯಿತು. ಅಂಗಳವೂ ನಿಧಾನ ಗತಿಯಿಂದ ಕೂಡಿತ್ತು. ಹೀಗಾಗಿ ಬಾರಿಸಿದ ಚೆಂಡು ತೆವಳುತ್ತ ಸಾಗುತ್ತಿತ್ತು. ಅಫ್ಘಾನ್‌ ಬೌಲರ್‌ಗಳು ಇದರ ಭರಪೂರ ಲಾಭವೆತ್ತಿದರು. ದಾಳಿಗಿಳಿದ ಪ್ರತಿಯೊಬ್ಬ ಬೌಲರ್‌ ಕೂಡ ಭಾರತಕ್ಕೆ ಸವಾಲಾಗುತ್ತ ಹೋಗಿ ವಿಕೆಟ್‌ ಕೀಳತೊಡಗಿದರು. ಮುನ್ನುಗ್ಗಿ ಬಾರಿಸಲು ಭಾರತದಿಂದ ಸಾಧ್ಯವಾಗಲೇ ಇಲ್ಲ.

ಇಂಗ್ಲೆಂಡ್‌ ಎದುರಿನ ಹಿಂದಿನ ಪಂದ್ಯದಲ್ಲಿ 25 ಸಿಕ್ಸರ್‌ಗಳ ಹೊಡೆತ ಅನುಭವಿಸಿದ್ದ ಅಫ್ಘಾನ್‌ ಬೌಲರ್‌ಗಳಿಲ್ಲಿ 152 ಡಾಟ್‌ ಬಾಲ್‌ ಎಸೆದದ್ದು ಅದ್ಭುತವಾಗಿ ಕಂಡಿತು. ಅಂದರೆ ಭಾರತ ಎದುರಿಸಿದ 25.2 ಓವರ್‌ಗಳಲ್ಲಿ ರನ್ನೇ ಬಂದಿರಲಿಲ್ಲ!
ಐಪಿಎಲ್‌ನ ಸ್ಟಾರ್‌ ಸ್ಪಿನ್ನರ್‌ಗಳಾದ ಮೊಹಮ್ಮದ್‌ ನಬಿ (33ಕ್ಕೆ 2), ಮುಜೀಬ್‌ ಉರ್‌ ರಹಮಾನ್‌ (26ಕ್ಕೆ 1) ಮತ್ತು ರಶೀದ್‌ ಖಾನ್‌ (38ಕ್ಕೆ 1) ಸೇರಿಕೊಂಡು ಭಾರತವನ್ನೇ ಕುಣಿಸಿದರು. 4ನೇ ಸ್ಪಿನ್ನರ್‌ ರಹಮತ್‌ ಶಾ ಕೂಡ ಮ್ಯಾಜಿಕ್‌ ಮಾಡಿದರು.

Advertisement

ಧೋನಿ-ಜಾಧವ್‌ ನಿಧಾನ ಆಟ
ಮಧ್ಯಮ ಕ್ರಮಾಂಕದಲ್ಲಿ ಜತೆಗೂಡಿದ ಮಹೇಂದ್ರ ಸಿಂಗ್‌ ಧೋನಿ (52 ಎಸೆತಗಳಿಂದ 28 ರನ್‌) ಮತ್ತು ಕೇದಾರ್‌ ಜಾಧವ್‌ (68 ಎಸೆತಗಳಿಂದ 52 ರನ್‌) 57 ರನ್‌ ಜತೆಯಾಟ ನಡೆಸಿದರೂ ರನ್‌ ಗತಿ ಏರಿಸಲು ವಿಫ‌ಲರಾದರು. ಈ 57 ರನ್ನಿಗೆ ಅವರು 14 ಓವರ್‌ ನಿಭಾಯಿಸಿದರು. ಇನ್ನೇನು ಮುನ್ನುಗ್ಗಿ ಬಾರಿಸಬೇಕೆನ್ನುವಾಗಲೇ ಧೋನಿ ಸ್ಟಂಪ್ಡ್ ಆದರು. ಹಾರ್ಡ್‌ ಹಿಟ್ಟರ್‌ ಹಾರ್ದಿಕ್‌ ಪಾಂಡ್ಯ ಸಂಚಲನ ಮೂಡಿಸಬಹುದೆಂಬ ನಿರೀಕ್ಷೆಯೂ ಫ‌ಲಿಸಲಿಲ್ಲ.

ಸ್ಕೋರ್‌ ಪಟ್ಟಿ
ಭಾರತ
ಕೆ.ಎಲ್‌. ರಾಹುಲ್‌ ಸಿ ಹಜ್ರತುಲ್ಲ ಬಿ ನಬಿ 30
ರೋಹಿತ್‌ ಶರ್ಮ ಬಿ ಮುಜೀಬ್‌ 1
ವಿರಾಟ್‌ ಕೊಹ್ಲಿ ಸಿ ರಹಮತ್‌ ಬಿ ನಬಿ 67
ವಿಜಯ್‌ ಶಂಕರ್‌ ಎಲ್‌ಬಿಡಬ್ಲ್ಯು ರಹಮತ್‌ 29
ಎಂ.ಎಸ್‌. ಧೋನಿ ಸ್ಟಂಪ್ಡ್ ಖೀಲ್‌ ಬಿ ರಶೀದ್‌ 28
ಕೇದಾರ್‌ ಜಾಧವ್‌ ಜದ್ರಾನ್‌ (ಬದಲಿ) ಬಿ ನೈಬ್‌ 52
ಹಾರ್ದಿಕ್‌ ಪಾಂಡ್ಯ ಸಿ ಖೀಲ್‌ ಬಿ ಆಲಂ 7
ಮೊಹಮ್ಮದ್‌ ಶಮಿ ಬಿ ನೈಬ್‌ 1
ಕುಲದೀಪ್‌ ಯಾದವ್‌ ಔಟಾಗದೆ 1
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 1
ಇತರ 7
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 224
ವಿಕೆಟ್‌ ಪತನ: 1-7, 2-64, 3-122, 4-135, 5-192, 6-217, 7-222, 8-223.
ಬೌಲಿಂಗ್‌:
ಮುಜೀಬ್‌ ಉರ್‌ ರಹಮಾನ್‌ 10-0-26-1
ಅಫ್ತಾಬ್‌ ಆಲಂ 7-1-54-1
ಗುಲ್ಬದಿನ್‌ ನೈಬ್‌ 9-0-51-2
ಮೊಹಮ್ಮದ್‌ ನಬಿ 9-0-33-2
ರಶೀದ್‌ ಖಾನ್‌ 10-0-38-1
ರಹಮತ್‌ ಶಾ 5-0-22-1
ಅಫ್ಘಾನಿಸ್ಥಾನ
ಹಜ್ರತುಲ್ಲ ಜಜಾಯ್‌ ಬಿ ಶಮಿ 10
ಗುಲ್ಬದಿನ್‌ ನೈಬ್‌ ಸಿ ಶಂಕರ್‌ ಬಿ ಪಾಂಡ್ಯ 27
ರಹಮತ್‌ ಶಾ ಸಿ ಚಹಲ್‌ ಬಿ ಬುಮ್ರಾ 36
ಹಶ್ಮತುಲ್ಲ ಶಾಹಿದಿ ಸಿ ಮತ್ತು ಬಿ ಬುಮ್ರಾ 21
ಅಸYರ್‌ ಅಫ್ಘಾನ್‌ ಬಿ ಚಹಲ್‌ 8
ಮೊಹಮ್ಮದ್‌ ನಬಿ ಸಿ ಪಾಂಡ್ಯ ಬಿ ಶಮಿ 52
ನಜೀಬುಲ್ಲ ಜದ್ರಾನ್‌ ಸಿ ಚಹಲ್‌ ಬಿ ಪಾಂಡ್ಯ 21
ರಶೀದ್‌ ಖಾನ್‌ ಸ್ಟಂಪ್ಡ್ ಧೋನಿ ಬಿ ಚಹಲ್‌ 14
ಇಕ್ರಮ್‌ ಅಲಿ ಖೀಲ್‌ ಔಟಾಗದೆ 7
ಅಫ್ತಾಬ್‌ ಆಲಂ ಬಿ ಶಮಿ 0
ಮುಜೀಬ್‌ ಬಿ ಶಮಿ 0
ಇತರ 17
ಒಟ್ಟು (49.5 ಓವರ್‌ಗಳಲ್ಲಿ ಆಲೌಟ್‌) 213
ವಿಕೆಟ್‌ ಪತನ: 1-20, 2-64, 3-106, 4-106, 5-130, 6-166, 7-190, 8-213, 9-213.
ಬೌಲಿಂಗ್‌:
ಮೊಹಮ್ಮದ್‌ ಶಮಿ 9.5-1-40-4
ಜಸ್‌ಪ್ರೀತ್‌ ಬುಮ್ರಾ 10-1-39-2
ಯಜುವೇಂದ್ರ ಚಹಲ್‌ 10-0-36-2
ಹಾರ್ದಿಕ್‌ ಪಾಂಡ್ಯ 10-1-51-2
ಕುಲದೀಪ್‌ ಯಾದವ್‌ 10-0-39-0

Advertisement

Udayavani is now on Telegram. Click here to join our channel and stay updated with the latest news.

Next