Advertisement

ವಿಂಡೀಸ್ ವಿರುದ್ಧ ಮಿಂಚಿದ ಕನ್ನಡದ ಹುಡುಗಿ: ಸರಣಿ ಗೆದ್ದ ಭಾರತ

09:42 AM Nov 22, 2019 | keerthan |

ಗಯಾನ: ವೆಸ್ಟ್ ಇಂಡೀಸ್ ವಿರುದ್ದದ ಅಂತಿಮ ಟಿ ಟ್ವೆಂಟಿ ಪಂದ್ಯವನ್ನೂ ಅಧಿಕಾರಯುತವಾಗಿ ಗೆದ್ದ ಭಾರತದ ವನಿತೆಯರು ಸರಣಿರಯನ್ನು 5-0 ಅಂತರದಿಂದ ಗೆದ್ದಿದ್ದಾರೆ.

Advertisement

ಇಲ್ಲಿನ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೂರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಆರಂಭಿಕರಾದ ಶಿಫಾಲಿ ಮತ್ತು ಸ್ಮ್ರತಿ ಬೇಗನೇ ವಿಕೆಟ್ ಕಳೆದುಕೊಂಡರೂ ನಂತರ ಒಟ್ಟಾದ ವೇದಾ ಕೃಷ್ಣಮೂರ್ತಿ ಮತ್ತು ಜೆಮಿಮಾ ರೋಡ್ರಿಗಸ್ ತಂಡವನ್ನು ಮೇಲಕ್ಕೆತ್ತಿದ್ದಾರೆ.

ಈ ಜೋಡಿ 117 ರನ್ ಜೊತೆಯಾಟ ನಡೆಸಿದರು. ಜೆಮಿಮಾ 50 ರನ್ ಬಾರಿಸಿದರೆ, ಕನ್ನಡತಿ ವೇದಾ ಅಜೇಯ 56 ರನ್ ಬಾರಿಸಿದರು.

ಗುರಿ ಬೆನ್ನತ್ತಿದ ವಿಂಡೀಸ್ ವನಿತೆಯರು ನಿಗದಿತ 20 ಓವರ್ ಗಳಲ್ಲಿ 73ರನ್ ಅಷ್ಷೇ ಗಳಿಸಿದರು. ಕೈಶೋನಾ ನೈಟ್ 22 ರನ್ ಗಳಿಸಿದ್ದೆ ಅತೀ ಹೆಚ್ಚಿನ ರನ್. ಇದರೊಂದಿಗೆ ವಿಂಡೀಸ್ 61 ಅಂತರದ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next