ಡೋಂಗೆ (ದಕ್ಷಿಣ ಕೊರಿಯಾ): ತಂಡದ ಆಟಗಾರ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ವನಿತಾ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಿಂದ ಹಿಂದೆ ಸರಿದಿದೆ. ಮಲೇಶ್ಯ ಕೂಡ ಇದೇ ಕಾರಣಕ್ಕಾಗಿ ಹಿಂದಡಿ ಇರಿಸಿತ್ತು.
“ತಂಡದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಕಂಡುಬಂದ ಕಾರಣ ಕಳೆದ ಸಲದ ರನ್ನರ್ ಅಪ್ ಭಾರತ ಕೂಟದಿಂದ ಹಿಂದೆ ಸರಿಯುತ್ತಿದೆ. ಆಟಗಾರರ ಆರೋಗ್ಯ ಮುಖ್ಯ. ಹೀಗಾಗಿ ಡಿ. 9ರಂದು ಚೀನ ವಿರುದ್ಧದ ಪಂದ್ಯ ನಡೆಯಲಿಲ್ಲ’ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಈ ಕೂಟದಲ್ಲಿ ಭಾರತ ತನ್ನ ಏಕೈಕ ಪಂದ್ಯವನ್ನು ಥಾಯ್ಲೆಂಡ್ ವಿರುದ್ಧ ಆಡಿದ್ದು, 13-0 ಬೃಹತ್ ಅಂತರದಿಂದ ಗೆದ್ದು ಬಂದಿತ್ತು.
ಇದನ್ನೂ ಓದಿ:ಫಲಿತಾಂಶ ಪ್ರಕಟಿಸಿದಂತೆ ತಡೆ ಆದೇಶ: ಚುನಾವಣಾ ಆಯೋಗದಿಂದ ಮೇಲ್ಮನವಿ
2020ರಂದು ನಡೆಯಬೇಕಿದ್ದ ಈ ಪಂದ್ಯಾವಳಿಯನ್ನು ಕೋವಿಡ್ ಕಾರಣದಿಂದಲೇ ಮುಂದೂಡಲಾಗಿತ್ತು.