Advertisement

2ನೇ ಮಹಿಳಾ ಟಿ20: ಭಾರತಕ್ಕೆ ಸರಣಿ ಜಯದ ಗುರಿ

06:35 AM Feb 16, 2018 | Team Udayavani |

ಈಸ್ಟ್‌ ಲಂಡನ್‌ (ದ.ಆಫ್ರಿಕಾ): ದಕ್ಷಿಣ ಆಫ್ರಿಕಾ ನೆಲದಲ್ಲಿ ಕೊಹ್ಲಿ ಪಡೆಯ ಜತೆ ಭಾರತದ ವನಿತೆಯರೂ ಪೈಪೋಟಿಗೆ ಇಳಿದಿರುವ ರೋಮಾಂಚಕಾರಿ ವಿದ್ಯಮಾನವೀಗ ಕಂಡುಬರುತ್ತಿದೆ. 

Advertisement

ಭಾರತ ಪುರುಷರ ತಂಡಕ್ಕಿಂತಲೂ ಮೊದಲೇ ಏಕದಿನ ಸರಣಿ ವಶಪಡಿಸಿಕೊಂಡ ಮಹಿಳಾ ತಂಡವೀಗ ಟಿ20 ಪಂದ್ಯದಲ್ಲೂ ಗೆಲುವಿನ ಆರಂಭ ಕಂಡುಕೊಂಡಿದೆ. ಶುಕ್ರವಾರ ಈಸ್ಟ್‌ ಲಂಡನ್‌ನಲ್ಲಿ 2ನೇ ಚುಟುಕು ಕ್ರಿಕೆಟ್‌ ಪಂದ್ಯ ನಡೆಯಲಿದ್ದು, ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವುದು ಹರ್ಮನ್‌ಪ್ರೀತ್‌ ಕೌರ್‌ ಪಡೆಯ ಯೋಜನೆ.

ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಎಡವಿ ಕ್ಲೀನ್‌ಸಿÌàಪ್‌ ಅವಕಾಶವನ್ನು ಕಳೆದುಕೊಂಡ ಭಾರತ, ಟಿ20 ಸರಣಿಯನ್ನು ಸಕಾರಾತ್ಮಕ ರೀತಿಯಲ್ಲೇ ಆರಂಭಿಸಿದೆ. ದಕ್ಷಿಣ ಆಫ್ರಿಕಾ 4ಕ್ಕೆ 164 ರನ್‌ ಬಾರಿಸಿ ಸವಾಲೊಡ್ಡಿದ ಬಳಿಕ ಭಾರತ 18.5 ಓವರ್‌ಗಳಲ್ಲಿ ಗುರಿ ಮುಟ್ಟಿತ್ತು. ಚೇಸಿಂಗ್‌ ವೇಳೆ ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್‌ (ಔಟಾಗದೆ 54), ಸ್ಮತಿ ಮಂಧನಾ (28), ಮೊದಲ ಪಂದ್ಯವಾಡಿದ ಮುಂಬೈನ 17ರ ಹರೆಯದ ಜೆಮಿಮಾ ರೋಡ್ರಿಗಸ್‌ (37) ಮತ್ತು ವೇದಾ ಕೃಷ್ಣಮೂರ್ತಿ (ಔಟಾಗದೆ 37) ಸೇರಿಕೊಂಡು ಭಾರತವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದ್ದರು. ಮಿಥಾಲಿ ರಾಜ್‌ ಇವರಿಬ್ಬರೊಂದಿಗೂ ಅತ್ಯುತ್ತಮ ಜತೆಯಾಟ ನಿಭಾಯಿಸಿದ್ದರು. 3ನೇ ವಿಕೆಟಿಗೆ 69 ರನ್‌, 4ನೇ ವಿಕೆಟಿಗೆ 52 ರನ್‌ ಹರಿದು ಬಂದಿತ್ತು. ಆದರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮೊದಲ ಎಸೆತದಲ್ಲೇ ರನೌಟ್‌ ಆಘಾತಕ್ಕೆ ಸಿಲುಕಬೇಕಾಯಿತು.

ನಾಯಕತ್ವದ ಒತ್ತಡದಿಂದ ಮುಕ್ತರಾಗಿದ್ದ ಮಿಥಾಲಿ ರಾಜ್‌ ಅವರ ಬಿರುಸಿನ ಬ್ಯಾಟಿಂಗ್‌ ಹಾಗೂ 11ನೇ ಅರ್ಧ ಶತಕ ಭಾರತದ ಸರದಿಯ ಆಕರ್ಷಣೆಯಾಗಿತ್ತು. 48 ಎಸೆತ ಎದುರಿಸಿದ ಮಿಥಾಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್‌ ಎತ್ತಿ ಮೆರೆದಿದ್ದರು.

ಬೌಲಿಂಗ್‌ ಸುಧಾರಿಸಬೇಕು: ಆದರೆ ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್‌ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ಗಾಯಾಳಾಗಿ ಸರಣಿಯಿಂದಲೇ ಹೊರಬಿದ್ದಿರುವುದು ತಂಡಕ್ಕೆ ಬಿದ್ದ ದೊಡ್ಡ ಹೊಡೆತವಾಗಿದೆ. ಶಿಖಾ ಪಾಂಡೆ (41ಕ್ಕೆ 1) ಬಹಳ ದುಬಾರಿಯಾದರೆ, ಯುವ ವೇಗಿ ಪೂಜಾ ವಸ್ತ್ರಾಕರ್‌ (34ಕ್ಕೆ 1) ಸಾಮಾನ್ಯ ಯಶಸ್ಸು ಕಂಡಿದ್ದರು. ಆದರೆ ಟಿ20 ಸೆಷ್ಪಲಿಸ್ಟ್‌ ಸ್ಪಿನ್ನರ್‌ ಅನುಜಾ ಪಾಟೀಲ್‌ 23ಕ್ಕೆ 2 ವಿಕೆಟ್‌ ಕಿತ್ತು ಭರವಸೆ ಮೂಡಿಸಿದ್ದಾರೆ. ಇವರಿಗೆ ಪೂನಂ ಯಾದವ್‌, ರಾಧಾ ಯಾದವ್‌ ಅವರಿಂದ ಸೂಕ್ತ ಬೆಂಬಲ ಲಭಿಸಬೇಕಿದೆ.

Advertisement

ದಕ್ಷಿಣ ಆಫ್ರಿಕಾದ ಕ್ಲೊ ಟ್ರಯಾನ್‌ ಕೇವಲ 7 ಎಸೆತಗಳಲ್ಲಿ ಅಜೇಯ 32 ರನ್‌ (2 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಭಾರತವನ್ನು ಬೆದರಿಸಿದ್ದರು. ಪುನರ್‌ ಸಂಘಟಿತರಾಗಿ ಆಡಿದರೆ ಸರಣಿಯನ್ನು ಸಮಬಲಕ್ಕೆ ತರಬಹುದೆಂಬುದು ಆತಿಥೇಯ ತಂಡದ ನಾಯಕಿ ಡೇನ್‌ ವಾನ್‌ ನೀಕರ್ಕ್‌ ನಿರೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next