Advertisement

INDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ

03:59 PM Jul 01, 2024 | Team Udayavani |

ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ದದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತದ ವನಿತೆಯರು ಸುಲಭದಲ್ಲಿ ಜಯಿಸಿದ್ದಾರೆ. ಹರಿಣಗಳ ಸವಾಲನ್ನು ಹಿಮ್ಮೆಟ್ಟಿಸಿದ ಭಾರತದ ವನಿತೆಯರು 10 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಭಾರತದ ಗೆಲುವಿನ ಪಯಣ ಮುಂದುವರಿದಿದೆ.

Advertisement

ಚೆನ್ನೈನ ಚೆಪಾಕ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ ವಿಶ್ವದಾಖಲೆಯ 603 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ದ.ಆಫ್ರಿಕಾ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 266 ರನ್ ಗಳಿಗೆ ಆಲೌಟಾಗಿತ್ತು. 377 ರನ್ ಹಿನ್ನಡೆಯ ಕಾರಣದಿಂದ ಫಾಲೋ ಆನ್ ಪಡೆದಿದ್ದ ಹರಿಣಗಳು ಎರಡನೇ ಇನ್ನಿಂಗ್ಸ್ ನಲ್ಲಿ 373 ರನ್ ಗಳಿಸಿತ್ತು. ಗೆಲುವಿಗೆ 37 ರನ್ ಗುರಿ ಪಡೆದ ಭಾರತ ವಿಕೆಟ್ ನಷ್ಟವಿಲ್ಲದೆ ಗಳಿಸಿ ಟೆಸ್ಟ್ ಕ್ರಿಕೆಟ್ ನ ಎಂಟನೇ ಗೆಲುವು ಸಾಧಿಸಿತು.

ಫಾಲೋ ಆನ್ ಪಡೆದಿದ್ದ ದ.ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಆಫ್ರಿಕಾ ತಂಡಕ್ಕೆ ನಾದಿನ್ ಡಿ ಕ್ಲಾರ್ಕ್ 61 ರನ್ ಗಳಿಸಿ ನೆರವಾದರು. ಮಾರಿಜಾನೆ ಕಪ್ಪ್ 31 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ರನ್ ಗಳಿಸಲು ವಿಫಲಾರದರು. ಭಾರತದ ಪರ ಸ್ನೇಹ್ ರಾಣಾ, ದೀಪ್ತಿ ಶರ್ಮಾ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಎರಡು ವಿಕೆಟ್ ಕಿತ್ತರು.

337 ರನ್ ಹಿನ್ನಡೆಯೊಂದಿಗೆ ಫಾಲೋ ಆನ್ ಪಡೆದಿದ್ದ ದ.ಆಫ್ರಿಕಾ ತಂಡವು ಎರಡನೇ ಇನ್ನಿಂಗ್ಸ್ ನಲ್ಲಿ 373 ರನ್ ಗಳಿಸಿತು. ಇದರಿಂದ ಭಾರತಕ್ಕೆ 37 ರನ್ ಗುರಿ ನೀಡಿತು.

Advertisement

ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಮತ್ತು ಶುಭಾ ಸತೀಶ್ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದರು. ಶಫಾಲಿ 24 ರನ್ ಮಾಡಿದರೆ, ಶುಭಾ 13 ರನ್ ಗಳಿಸಿದರು.

ಏಕದಿನ ಸರಣಿಯನ್ನು 3-0ಯಿಂದ ವೈಟ್ ವಾಶ್ ಮಾಡಿದ್ದ ಭಾರತ ತಂಡವು ಇದೀಗ ಏಕೈಕ ಟೆಸ್ಟ್ ಪಂದ್ಯವನ್ನೂ ಸುಲಭದಲ್ಲಿ ಜಯಿಸಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ದ ಭಾರತವು 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಇದು ಚೆನ್ನೈನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next