Advertisement
ಸ್ಮತಿ ಮಂಧನಾ ಗೈರಲ್ಲಿ ಏಕೈಕ ಟಿ20 ಪಂದ್ಯವಾಡಿದ ಭಾರತ 18 ರನ್ನುಗಳ ಸೋಲಿಗೆ ತುತ್ತಾಗಿತ್ತು. ಇನ್ನೂ ಕ್ವಾರಂಟೈನ್‌ನಲ್ಲಿಯೇ ಇರುವ ಮಂಧನಾ ಮೊದಲ ಏಕದಿನಕ್ಕೂ ಲಭ್ಯರಾಗುವುದಿಲ್ಲ. ಈ ಕೊರತೆಯನ್ನು ತುಂಬುವುದು ಭಾರತಕ್ಕೆ ನಿಜಕ್ಕೂ ಒಂದು ಸವಾಲು. ಹಾಗೆಯೇ ಪೇಸ್ ಬೌಲರ್‌ಗಳಾದ ರೇಣುಕಾ ಸಿಂಗ್ ಮತ್ತು ಮೇಘನಾ ಸಿಂಗ್ ಅವರೂ ಕ್ವಾರಂಟೈನ್‌ನಲ್ಲಿದ್ದಾರೆ.
Related Articles
“ನಮಗೆ ಪ್ರತಿಯೊಂದು ಸರಣಿಯೂ ಬಹಳ ಮುಖ್ಯ. ಅದರಲ್ಲೂ ಈ ಸರಣಿಯ ಮಹತ್ವ ಇನ್ನಷ್ಟು ಹೆಚ್ಚು. ಮುಂದಿನ ತಿಂಗಳು ಇಲ್ಲಿಯೇ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ತಂಡದ ಎಲ್ಲ ಸಮಸ್ಯೆಗಳನ್ನು ಬಗೆಹರಿ ಸಿಕೊಳ್ಳಲು ಇದೊಂದು ಉತ್ತಮ ವೇದಿಕೆ. ಇಲ್ಲಿ ಎಲ್ಲರೂ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಿದೆ. ನಾವು ಭರವಸೆಯ ದೊಡ್ಡ ಮೂಟೆಯನ್ನು ಹೊತ್ತು ಈ ಸರಣಿ ಆಡಲಿಳಿಯಲಿದ್ದೇವೆ’ ಎಂಬುದಾಗಿ ಮಿಥಾಲಿ ರಾಜ್ ಹೇಳಿದರು.
Advertisement
ಜನವರಿ 2019ರ ನಂತರದ ಇತ್ತಂಡಗಳ ಏಕದಿನ ಸಾಧನೆಯನ್ನು ಗಮನಿಸಿದರೆ ಇಲ್ಲಿ ಭಾರತವೇ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಭಾರತ 23 ಪಂದ್ಯಗಳನ್ನಾಡಿದ್ದು, 12ರಲ್ಲಿ ಜಯ ಸಾಧಿಸಿದೆ. 11ರಲ್ಲಿ ಸೋತಿದೆ. ನ್ಯೂಜಿಲ್ಯಾಂಡ್ ಕೂಡ 23 ಪಂದ್ಯಗಳನ್ನಾಡಿದ್ದು, ಕೇವಲ ಮೂರನ್ನು ಗೆದ್ದಿದೆ. 20 ಪಂದ್ಯಗಳಲ್ಲಿ ಎಡವಿದೆ.
ಭಾರತಕ್ಕೆ ಸವಾಲುನ್ಯೂಜಿಲ್ಯಾಂಡಿನ ಶೀತಗಾಳಿ ಮತ್ತು ಥಂಡಿ ವಾತಾ ವರಣಕ್ಕೆ ಭಾರತ ಒಗ್ಗಿಕೊಳ್ಳುವುದು ಮುಖ್ಯ. ಏಕದಿನ ಪಂದ್ಯಗಳು ಫೆ. 12, 15, 18, 22 ಮತ್ತು 24ರಂದು ಕ್ವೀನ್ಸ್ ಟೌನ್‌ನಲ್ಲಿ ನಡೆಯಲಿವೆ. ಇದೊಂದು ಸಣ್ಣ ಮೈದಾನ. ಇದು ಕೂಡ ಪ್ರವಾಸಿಗರಿಗೆ ಸವಾಲಾಗಿ ಕಾಡಲಿದೆ. ಭಾರತೀಯ ಕಾಲಮಾನದಂತೆ ಮುಂಜಾನೆ 3.30ಕ್ಕೆ ಪಂದ್ಯ ಆರಂಭವಾಗಲಿದೆ.