Advertisement

ಟಿ20 ಪಂದ್ಯ: ಆಸ್ಟ್ರೇಲಿಯ ವನಿತೆಯರಿಗೆ 4-1 ಸರಣಿ

11:17 PM Dec 20, 2022 | Team Udayavani |

ಮುಂಬಯಿ: ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು 54 ರನ್ನುಗಳಿಂದ ಗೆದ್ದ ಆಸ್ಟ್ರೇಲಿಯ ವನಿತೆಯರು 4-1ರಿಂದ ಸರಣಿ ವಶಪಡಿಸಿಕೊಂಡರು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಎಂದಿನ ಬಿರುಸಿನ ಆಟವನ್ನು ಪ್ರದರ್ಶಿಸಿ 4 ವಿಕೆಟಿಗೆ 196 ರನ್‌ ಪೇರಿಸಿತು. ಜವಾಬಿತ್ತ ಕೌರ್‌ ಪಡೆ 20 ಓವರ್‌ಗಳಲ್ಲಿ 142ಕ್ಕೆ ಆಲೌಟ್‌ ಆಯಿತು.

ಆಸ್ಟ್ರೇಲಿಯ 10 ಓವರ್‌ ಒಳಗೆ 67ಕ್ಕೆ 4 ವಿಕೆಟ್‌ ಕಳೆದುಕೊಂಡಿತು. ಆದರೆ 5ನೇ ವಿಕೆಟಿಗೆ ಜತೆಗೂಡಿದ ಆ್ಯಶ್ಲಿ ಗಾರ್ಡನರ್‌ (ಔಟಾಗದೆ 66) ಮತ್ತು ಗ್ರೇಸ್‌ ಹ್ಯಾರಿಸ್‌ (ಔಟಾಗದೆ 64) ಉಳಿದ 10.2 ಓವರ್‌ಗಳಿಂದ 129 ರನ್‌ ಪೇರಿಸಿ ಸವಾಲಾದರು.

ಚೇಸಿಂಗ್‌ ವೇಳೆ ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಸಂಪೂರ್ಣ ವೈಫ‌ಲ್ಯ ಕಂಡಿತು. 53 ರನ್‌ ಮಾಡಿದ ದೀಪ್ತಿ ಶರ್ಮ ಅವರದೇ ಹೆಚ್ಚಿನ ಮೊತ್ತ. ದ್ವಿತೀಯ ಟೈ ಪಂದ್ಯವನ್ನಷ್ಟೇ ಭಾರತ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next