Advertisement

ಕ್ವಾರ್ಟರ್‌: ಇಂದು ವನಿತೆಯರಿಗೆ ಆಸೀಸ್‌  ಸವಾಲು

10:00 PM Aug 01, 2021 | Team Udayavani |

ಟೋಕಿಯೊ: ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್‌ ತಲುಪಿ ನೂತನ ಒಲಿಂಪಿಕ್ಸ್‌ ಅಧ್ಯಾಯವೊಂದನ್ನು ಆರಂಭಿಸುವ ಸೂಚನೆ ನೀಡಿದೆ.

Advertisement

ವನಿತೆಯರೂ ಇದೇ ಹಿಡಿಯಬಲ್ಲರೇ ಎಂಬುದು ಮುಂದಿನ ಪ್ರಶ್ನೆ ಹಾಗೂ ಕುತೂಹಲ. ರಾಣಿ ರಾಮ್‌ಪಾಲ್‌ ಪಡೆ ಅದೃಷ್ಟದ ಬಲದಿಂದ ನಾಕೌಟ್‌ ಪ್ರವೇಶಿಸಿದ್ದು, ಸೋಮವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಸತತ 3 ಸೋಲುಗಳ ಬಳಿಕ ತಿರುಗಿ ಬಿದ್ದ ಭಾರತ, ಕೊನೆಯ ಎರಡು ಲೀಗ್‌ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿತ್ತು. ಆದರೆ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವೈಫ‌ಲ್ಯ ಕಾಣುತ್ತಲೇ ಇದೆ.

5 ಲೀಗ್‌ ಪಂದ್ಯಗಳಲ್ಲಿ ಇಂಥ 33 ಅವಕಾಶ ಪಡೆದಿದ್ದ ಭಾರತ, ಕೇವಲ ನಾಲ್ಕನ್ನಷ್ಟೇ ಗೋಲಾಗಿಸಿತ್ತು. ನಾಕೌಟ್‌ನಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸಬೇಕಿದೆ. ಆಸ್ಟ್ರೇಲಿಯ  ಬಿ’ ವಿಭಾಗದ ಅಗ್ರಸ್ಥಾನಿ. ಸರ್ವಾಧಿಕ 13 ಗೋಲು ಬಾರಿಸಿ, ಒಂದನ್ನಷ್ಟೇ ಬಿಟ್ಟುಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next