Advertisement
ಈ ಹಿಂದಿನ ಪಂದ್ಯದಲ್ಲಿ ಸೋತಿದ್ದರೂ ವಿಚಲಿತರಾಗದ ವನಿತೆಯರು ಬುಧವಾರ ನಡೆಯುವ ನಾಲ್ಕನೇ ಟ್ವೆಂಟಿ20 ಪಂದ್ಯವನ್ನು ಗೆದ್ದು 3-1 ಮುನ್ನಡೆಯೊಂದಿಗೆ ಸರಣಿ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಅವಳಿ ಪ್ರಶಸ್ತಿ ಗೆಲ್ಲುವತ್ತ ವನಿತೆಯರು ಹೊರಟಿದ್ದಾರೆ.
ಟ್ವೆಂಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅನುಕ್ರಮವಾಗಿ ಏಳು ಮತ್ತು 9 ವಿಕೆಟ್‌ಗಳ ಸುಲಭ ಜಯ ದಾಖಲಿಸಿದ್ದ ಭಾರತೀಯ ವನಿತೆಯರು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಐದು ವಿಕೆಟ್ ಅಂತರದಿಂದ ಸೋತಿದ್ದರು. ಸದ್ಯ 2-1 ಮುನ್ನಡೆಯಲ್ಲಿರುವ ಭಾರತಕ್ಕೆ ಸರಣಿ ಗೆಲುವು ದಾಖಲಿಸಲು ಅವಕಾಶವಿದೆ. ಇನ್ನೆರಡು ಪಂದ್ಯಗಳು ಬಾಕಿ ಉಳಿದಿದ್ದು ಒಂದು ಪಂದ್ಯದಲ್ಲಿ ಗೆದ್ದರೆ ಭಾರತ ಸರಣಿ ತನ್ನದಾಗಿಸಿಕೊಳ್ಳಲಿದೆ. ಬುಧವಾರದ ಪಂದ್ಯದಲ್ಲಿ ಒಂದು ವೇಳೆ ಭಾರತ ಗೆದ್ದರೆ ಹರ್ಮನ್‌ಪ್ರೀತ್ ಕೌನ್ ನೇತೃತ್ವದ ಭಾರತೀಯ ತಂಡ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಮೊದಲ ಬಾರಿ ಅವಳಿ ಸರಣಿ ಗೆಲ್ಲಲಿದೆ. ಆಸ್ಟ್ರೇಲಿಯದಲ್ಲಿ ಟ್ವೆಂಟಿ20 ಸರಣಿ ಗೆದ್ದ ಭಾರತೀಯ ತಂಡಕ್ಕೆ ಇದೊಂದು ದೊಡ್ಡ ಸಾಧನೆಯಾಗಲಿದೆ.
Related Articles
Advertisement
ಭಾರತೀಯ ವನಿತಾ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿ ಅಪರೂಪದ ಸಾಧನೆಗೈಯಲು ಭಾರತೀಯ ವನಿತಾ ತಂಡ ಬಯಸಿದೆ. ಅದಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಎಲ್ಲರೂ ಪ್ರಯತ್ನಪಡಬೇಕಾಗಿದೆ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.
ಈ ಹಿಂದಿನ ಪಂದ್ಯದಲ್ಲಿ ಜಯಭೇರಿ ಬಾರಿಸಿದ ದಕ್ಷಿಣ ಆಫ್ರಿಕಾ ವನಿತೆಯರೂ ಕೂಡ ಇದೀಗ ಹೊಸ ಹುಮ್ಮಸ್ಸಿನಿಂದ ಆಡುವ ಸಾಧ್ಯತೆಯಿದೆ. ಟ್ವೆಂಟಿ20ಯಲ್ಲಿ ಮೊದಲ ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದಿರುವ ಶಬಿ°ಮ್ ಇಸ್ಮಾಯಿಲ್ ಮತ್ತೆ ಭಾರತದ ಓಟಕ್ಕೆ ಬ್ರೇಕ್ ಹಾಕಲು ತಯಾರಾಗಿದ್ದಾರೆ. ಇಸ್ಮಾಯಿಲ್ ಈ ಹಿಂದಿನ ಪಂದ್ಯದಲ್ಲಿ 30 ರನ್ನಿಗೆ 5 ವಿಕೆಟ್ ಹಾರಿಸಿದ್ದರು.
ತಂಡಗಳು:ಭಾರತೀಯ ವನಿತೆಯರು: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ, ಮಿಥಾಲಿ ರಾಜ್, ವೇದಾ ಕೃಷ್ಣಮೂರ್ತಿ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ಅನುಜಾ ಪಾಟೀಲ್, ತನಿಯಾ ಭಾಟಿಯಾ, ನುಜಾಟ್ ಪರ್ವೀನ್, ಪೂನಂ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರುಮೇಲಿ ಧಾರ್. ದಕ್ಷಿಣ ಆಫ್ರಿಕಾ ವನಿತೆಯರು: ಡೇನ್ ವಾನ್ ನಿಕೆರ್ಕ್ (ನಾಯಕಿ), ಮರಿಝಾನೆ ಕ್ಯಾಪ್, ತೃಷಾ ಚೆಟ್ಟಿ, ಶಬಿ°ಮ್ ಇಸ್ಮಾಯಿಲ್, ಅಯಬೊಂಗ ಖಾಕಾ, ಮಸಬಾಟ ಕ್ಲಾಸ್, ಸನಿ ಲುಸ್, ಒಡಿನೆ ಕಿರ್ಸ್ಟನ್, ಮಿಗ್ನೊàನ್ ಡು ಪ್ರೀಜ್, ಲಿಝೆಲಿ ಲೀ, ಚಲೇ ಟ್ರೈಆನ್, ನದಿನೆ ಡಿ ಕ್ಲೆರ್ಕ್, ರೈಸಿಬೆ ಟೊಜಾಖೇ, ಮೋಸ್‌ಲೈನ್ ಡೇನಿಯಲ್ಸ್. ಪಂದ್ಯ ಆರಂಭ: ಭಾರೆತೀಯ ಕಾಲಮಾನ ಸಂಜೆ 4.30