ಆಕ್ಲೆಂಡ್: ಸ್ಟ್ರೈಕರ್ ನವನೀತ್ ಕೌರ್ ಅವರ ಅವಳಿ ಗೋಲುಗಳ ಸಹಾಯದಿಂದ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಅಂತಿಮ ಪಂದ್ಯದಲ್ಲಿ 3-0 ಅಂತರದ ಗೆಲುವಿನೊಂದಿಗೆ ಕೂಟವನ್ನು ಮುಗಿಸಿದೆ.
ಮಂಗಳವಾರ ಆಕ್ಲೆಂಡ್‌ನಲ್ಲಿ ನಲ್ಲಿ ನಡೆದ ಕೂಟದ 4ನೇ ಪಂದ್ಯದಲ್ಲಿ ಬ್ರಿಟನ್ ವಿರುದ್ಧ ಭಾರತ ತಂಡ 1-0 ಗೆಲುವು ದಾಖಲಿಸಿತ್ತು.
ಬುಧವಾರ ನಡೆದ ಅಂತಿಮ ಪಂದ್ಯದ 45ನೇ ನಿಮಿಷದಲ್ಲಿ ಸ್ಟ್ರೈಕರ್ ನವನೀತ್ ಕೌರ್ ಖಾತೆ ತೆರೆದು ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದಾದ ಒಂಬತ್ತೇ ನಿಮಿಷದ ಅಂತರದಲ್ಲಿ ಶರ್ಮಿಳ ಗೋಲು ಬಾರಿಸಿ ದರು. ಭಾರತೀಯರು 2-0 ಮುನ್ನಡೆ ಪಡೆದು ಕೊಂಡಿದ್ದರು. 58ನೇ ನಿಮಿಷದಲ್ಲಿ ಮತ್ತೂಮ್ಮೆ ಶರ್ಮಿಳಾ ಬಿರು ಗಾಳಿಯ ಪ್ರದರ್ಶನ ನೀಡಿದರು. ಇದರಿಂದ ನ್ಯೂಜಿಲೆಂಡ್ ಭಾರೀ ಆಘಾತಕ್ಕೆ ತುತ್ತಾಯಿತು.
ಸದ್ಯ ಗೆಲುವಿನೊಂದಿಗೆ ಭಾರತೀಯರು ಖುಷಿಯಿಂದಲೇ ಕೂಟವನ್ನು ಮುಗಿಸಿ ದ್ದಾರೆ. ಮುಂಬರುವ ಒಲಿಂಪಿಕ್ಸ್ ನಿಟ್ಟಿನಲ್ಲಿ ಭಾರತೀಯರಿಗೆ ಈ ಗೆಲುವು ಅತ್ಯಂತ ಮುಖ್ಯವಾಗಿತ್ತು. ಇದೀಗ ಜಯದೊಂದಿಗೆ ಭಾರತೀಯರು ತಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
ಪಂದ್ಯದ ನಂತರ ಮಾತನಾಡಿದ ನಾಯಕಿ ರಾಣಿ ರಾಂಪಾಲ್ “ಭವಿಷ್ಯದಲ್ಲಿ ಒಲಿಂಪಿಕ್ಸ್‌ಗೂ ಮೊದಲು ನಡೆಯಲಿರುವ ಮತ್ತಷ್ಟು ಕೂಟಗಳಲ್ಲಿ ಗೆಲುವಿನ ಪ್ರಯತ್ನ ನಡೆಸುತ್ತೇವೆ. ಇದರಿಂದ ಒಲಿಂಪಿಕ್ಸ್‌ಗೆ ಒಳ್ಳೆಯ ತಯಾರಿ ನಡೆಸಿದಂತಾಗುತ್ತದೆ ಎಂದು ತಿಳಿಸಿದರು.