Advertisement
ಮಳೆಯಿಂದ 47 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಖಾತೆ ತೆರೆಯದ ಟಾಮಿ ಬ್ಯೂಮಂಟ್ ಅವರನ್ನು ಶಿಖಾ ಪಾಂಡೆ ದ್ವಿತೀಯ ಓವರ್‌ನಲ್ಲೇ ಪೆವಿಲಿಯನ್ನಿಗೆ ಕಳುಹಿಸಿದರು. ಆದರೆ ಲಾರೆನ್ ವಿನ್‌ಫೆಲ್ಡ್ ಹಿಲ್ (36), ನಾಯಕಿ ಹೀತರ್ ನೈಟ್ (46) 67 ರನ್ ಜತೆಯಾಟ ನಡೆಸಿ ತಂಡದ ರಕ್ಷಣೆಗೆ ನಿಂತರು. 49 ರನ್ ಮಾಡಿದ ನಥಾಲಿ ಶಿವರ್ ಇಂಗ್ಲೆಂಡ್ ಸರದಿಯ ಟಾಪ್ ಸ್ಕೋರರ್. ಈ ಸರಣಿಯ ಶೋಧವಾದ ಸೋಫಿಯಾ ಡಂಕ್ಲಿ 28 ರನ್ ಬಾರಿಸಿದರು. ಅಂತಿಮವಾಗಿ 47 ಓವರ್ ನಲ್ಲಿ ಇಂಗ್ಲೆಂಡ್ 219 ರನ್ ಗೆ ಆಲ್ ಔಟ್ ಆಯಿತು.
Related Articles
Advertisement
ಸರಣಿಯ ಮತ್ತೊಂದು ಅರ್ಧಶತಕ ಸಿಡಿಸಿದ ನಾಯಕಿ ಮಿಥಾಲಿ ರಾಜ್ ಅಜೇಯ ಆಟವಾಡಿದರು. ಹರ್ಮನ್ 116 ರನ್, ದೀಪ್ತಿ 18 ರನ್ ಮತ್ತು ಕೊನೆಯಲ್ಲಿ ಸ್ನೇಹ್ ರಾಣಾ ಉಪಯುಕ್ತ 24 ರನ್ ಗಳಿಸಿದರು. ಆರು ವಿಕೆಟ್ ಕಳೆದುಕೊಂಡ ಭಾರತ ತಂಡ ಮೂರು ಎಸೆತ ಬಾಕಿ ಇರುವಂತೆ ಜಯ ಗಳಿಸಿತು.
ಮಿಥಾಲಿ ರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸೋಫಿಯಾ ಎಕ್ಲೆಸ್ಟೋನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮೂರು ಟಿ20 ಪಂದ್ಯಗಳ ಸರಣಿ ಜುಲೈ 9ರಿಂದ ಆರಂಭವಾಗಲಿದೆ.