ನವದೆಹಲಿ: ದೇಶದಲ್ಲಿ ಬುಧವಾರ ಹೊಸದಾಗಿ 2,151 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ಐದು ತಿಂಗಳಲ್ಲೇ ಇದು ಅತ್ಯಧಿಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಅ.28ರಂದು ಒಟ್ಟು 2,208 ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಇನ್ನೊಂದೆಡೆ, ಕೊರೊನಾ ಕಾರಣ ಬುಧವಾರ ಒಂದೇ ದಿನ 11 ಮಂದಿ ಮೃತಪಟ್ಟಿದ್ದಾರೆ.
ಈ ಪೈಕಿ ಮಹಾರಾಷ್ಟ್ರದಲ್ಲಿ ಏಳು ಮಂದಿ, ಕೇರಳದಲ್ಲಿ ಮೂವರು ಹಾಗೂ ಕರ್ನಾಟಕದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಪ್ರಸ್ತುತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 11,903 ಇದ್ದು, ಕೊರೊನಾ ಸಾವಿನ ಸಂಖ್ಯೆ 5,30,848ಕ್ಕೆ ಏರಿಕೆಯಾಗಿದೆ. ಮಂಗಳವಾರ ಹೊಸದಾಗಿ 1,753 ಕೊರೊನಾ ಪ್ರಕರಣಗಳು ವರದಿಯಾಗಿತ್ತು.