Advertisement
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತಂಡವು ಕೆಎಲ್ ರಾಹುಲ್ ಅವರ ಉತ್ತಮ ಆಟದಿಂದಾಗಿ 3 ವಿಕೆಟಿಗೆ 180 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಚಾಹಲ್ ಅವರ ಮಾರಕ ದಾಳಿಗೆ ಕುಸಿದ ಶ್ರೀಲಂಕಾ ತಂಡವು 16 ಓವರ್‌ಗಳಲ್ಲಿ ಕೇವಲ 87 ರನ್ನಿಗೆ ಆಲೌಟಾಗಿ ಸಂಪೂರ್ಣ ನೆಲಕಚ್ಚಿತು. ಅಗ್ರ ಕ್ರಮಾಂಕದ ಮೂವರ ಸಹಿತ ದುಷ್ಮಂತ ಚಮೀರ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. 23 ರನ್ ಗಳಿಸಿದ ಉಪುಲ್ ತರಂಗ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
Related Articles
Advertisement
ಶ್ರೀಲಂಕಾ ತಂಡದಲ್ಲಿ ನಾಲ್ಕು ಬದಲಾವಣೆ: ಮೊದಲ ಟ್ವೆಂಟಿ20 ಪಂದ್ಯಕ್ಕಾಗಿ ಶ್ರೀಲಂಕಾ ನಾಲ್ಕು ಬದಲಾವಣೆ ಮಾಡಿ ಕೊಂಡಿದೆ. ವಿಶ್ವ ಫೆರ್ನಾಂಡೊ, ದುಷ್ಮಂತ ಚಮೀರ, ಆಲ್‌ರೌಂಡರ್ ದಾಸುನ್ ಶಣಕ ಮತ್ತು ಕುಸಲ್ ಪೆರೆರ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಮೂಲಕ ವಿಶ್ವ ಫೆರ್ನಾಂಡೊ ಟ್ವೆಂಟಿ20ಗೆ ಪಾದಾರ್ಪಣೆಗೈದರು. ಏಕದಿನ ಕ್ರಿಕೆಟ್ ಕೂಟದಲ್ಲಿ ಆಡಿದ ದನುಷ್ಕ ಗುಣತಿಲಕ, ಸದೀರ ಸಮರವಿಕ್ರಮ, ಸಚಿತ ಪತಿರಣ ಮತ್ತು ಸುರಂಗ ಲಕ್ಮಲ್ ಅವರನ್ನು ಕೈಬಿಡಲಾಗಿದೆ.
ಭಾರತೀಯ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಶಿಖರ್ ಧವನ್ ಮತ್ತು ಭುವನೇಶ್ವರ್ ಕುಮಾರ್ ಬದಲಿಗೆ ಕೆಎಲ್ ರಾಹುಲ್ ಮತ್ತು ಜಯದೇವ್ ಉನಾದ್ಕತ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಭಾರತ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಜಸ್‌ಪ್ರೀತ್ ಬುಮ್ರಾ, ಯುಜುವೇಂದ್ರ ಚಾಹಲ್
ಶ್ರೀಲಂಕಾ: ಉಪುಲ್ ತರಂಗ, ನಿರೋಷನ್ ಡಿಕ್ವೆಲ್ಲ, ಕುಸಲ್ ಪೆರೆರ, ಏಂಜೆಲೊ ಮ್ಯಾಥ್ಯೂಸ್, ಅಸೇಲ ಗುಣರತ್ನೆ, ತಿಸರ ಪೆರೆರ (ನಾಯಕ), ದಾಸುನ್ ಶಣಕ, ಅಖೀಲ ಧನಂಜಯ, ವಿಶ್ವ ಫೆರ್ನಾಂಡೊ, ದುಷ್ಮಂತ ಚಮೀರ, ನುವನ್ ಪ್ರದೀಪ್.
ಸ್ಕೋರ್‌ಪಟ್ಟಿ ಭಾರತ
ರೋಹಿತ್ ಶರ್ಮ ಸಿ ಚಮೀರ ಬಿ ಮ್ಯಾಥ್ಯೂಸ್ 17
ಕೆಎಲ್ ರಾಹುಲ್ ಬಿ ತಿಸರ ಪೆರೆರ 61
ಶ್ರೇಯಸ್ ಅಯ್ಯರ್ ಸಿ ಡಿಕ್ವೆಲ್ವ ಬಿ ಪ್ರದೀಪ್ 24
ಎಂಎಸ್ ಧೋನಿ ಔಟಾಗದೆ 39
ಮನೀಷ್ ಪಾಂಡೆ ಔಟಾಗದೆ 32 ಇತರ: 7
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 180
ವಿಕೆಟ್ ಪತನ: 1-38, 3-101, 3-112 ಬೌಲಿಂಗ್:
ವಿಶ್ವ ಫೆರ್ನಾಂಡೊ 2-0-16-0
ಅಖೀಲ ಧನಂಜಯ 4-0-30-0
ದುಷ್ಮಂತ ಚಮೀರ 3-0-38-0
ಏಂಜೆಲೊ ಮ್ಯಾಥ್ಯೂಸ್ 2-0-18-1
ತಿಸರ ಪೆರೆರ 4-0-37-1
ನುವನ್ ಪ್ರದೀಪ್ 4-0-38-1 ಶ್ರೀಲಂಕಾ
ನಿರೋಷನ ಡಿಕ್ವೆಲ್ಲ ಸಿ ರಾಹುಲ್ ಬಿ ಉನಾದ್ಕತ್ 13
ಉಪುಲ್ ತರಂಗ ಸಿ ಧೋನಿ ಬಿ ಚಾಹಲ್ 23
ಕುಸಲ್ ಪೆರೆರ ಸಿ ಧೋನಿ ಬಿ ಕುಲದೀಪ್ 19
ಏಂಜೆಲೊ ಮ್ಯಾಥ್ಯೂಸ್ ಸಿ ಮತ್ತು ಬಿ ಚಾಹಲ್ 1
ಅಸೇಲ ಗುಣರತ್ನೆ ಸ್ಟಂಪ್ಡ್ ಧೋನಿ ಬಿ ಚಾಹಲ್ 4
ದಾಸುನ್ ಶಣಕ ಸಿ ಪಾಂಡ್ಯ ಬಿ ಕುಲದೀಪ್ 1
ತಿಸರ ಪೆರೆರ ಸ್ಟಂಪ್ಡ್ ಧೋನಿ ಬಿ ಚಾಹಲ್ 3
ಅಖೀಲ ಧನಂಜಯ ಸಿ ಮತ್ತು ಬಿ ಪಾಂಡ್ಯ 7
ದುಷ್ಮಂತ ಚಮೀರ ಸಿ ರಾಹುಲ್ ಬಿ ಪಾಂಡ್ಯ 12
ವಿಶ್ವ ಫೆರ್ನಾಂಡೊ ಸಿ ಉನಾದ್ಕತ್ ಬಿ ಪಾಂಡ್ಯ 2
ನುವನ್ ಪ್ರದೀಪ್ ಔಟಾಗದೆ 0 ಇತರ: 2
ಒಟ್ಟು (16 ಓವರ್‌ಗಳಲ್ಲಿ ಆಲೌಟ್) 87
ವಿಕೆಟ್ ಪತನ: 1-15, 2-39, 3-46, 4-55, 5-58, 6-62, 7-70, 8-76, 9-85 ಬೌಲಿಂಗ್:
ಹಾರ್ದಿಕ್ ಪಾಂಡ್ಯ 4-0-29-3
ಜಯದೇವ್ ಉನಾದ್ಕತ್ 2-0-7-1
ಯಜುವೇಂದ್ರ ಚಾಹಲ್ 4-0-23-4
ಜಸ್‌ಪ್ರೀತ್ ಬುಮ್ರಾ 2-0-10-0
ಕುಲದೀಪ್ ಯಾದವ್ 4-0-18-2 ಪಂದ್ಯಶ್ರೇಷ್ಠ: ಯಜುವೇಂದ್ರ ಚಾಹಲ್