Advertisement

Asian Championship Trophy Hockey: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವು

12:42 AM Aug 10, 2023 | Team Udayavani |

ಚೆನ್ನೈ: ಏಷ್ಯನ್‌ ಚಾಂಪಿಯನ್‌ಶಿಪ್‌ ಟ್ರೋಫಿ ಹಾಕಿಯ ಲೀಗ್‌ ಹಂತದಲ್ಲಿ ಅಜೇಯವಾಗಿ ಉಳಿದ ಭಾರತವು ಬುಧವಾರ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ 4-0 ಗೋಲುಗಳ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಸೋತ ಪಾಕಿಸ್ಥಾನ ಕೂಟದಿಂದಲೇ ಹೊರಬಿದ್ದಿದೆ. ಟಾಪ್‌ 4 ತಂಡಗಳಾಗಿ ಭಾರತ, ಮಲೇಷ್ಯಾ, ಕೊರಿಯ ಮತ್ತು ಜಪಾನ್‌ ಸೆಮಿಫೈನಲ್‌ನಲ್ಲಿ ಸೆಣಸಲಿವೆ.

Advertisement

ಆರಂಭದಿಂದಲೇ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. 15ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಮೂಲಕ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. ಈ ಮೂಲಕ ಮೊದಲ ಕ್ವಾರ್ಟರ್‌ನಲ್ಲಿ ಭಾರತ 1-0 ಗೋಲು ಅಂತರದಲ್ಲಿ ಮುನ್ನಡೆ ಸಾಧಿಸಿತು.

23ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಮೂಲಕ ಮತ್ತೂಂದು ಗೋಲು ಬಾರಿಸಿ ಮುನ್ನಡೆಯನ್ನು ಹೆಚ್ಚಿಸಿ ದರು. ಹೀಗಾಗಿ ಎರಡನೇ ಕ್ವಾರ್ಟರ್‌ ಅಂತ್ಯಕ್ಕೆ ಭಾರತ 2-0 ಗೋಲುಗಳ ಮುನ್ನಡೆ ಸಾಧಿಸಿ, ಪಂದ್ಯದಲ್ಲಿ ಮೇಲುಗೈ ಪಡೆದಿತ್ತು.

ಮೂರನೇ ಕ್ವಾರ್ಟರ್‌ನಲ್ಲಿ ಜುಗ್ರಾಜ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಬಾರಿಸಿದರು. 36ನೇ ನಿಮಿಷದಲ್ಲಿ ಈ ಗೋಲು ದಾಖಲಾಯಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಪಂದ್ಯದ 55ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಸಿಂಗ್‌ ಫೀಲ್ಡ್‌ ಗೋಲು ಬಾರಿಸಿದರು.

ಸೋತರೂ ಸೆಮೀಸ್‌ಗೆ ಕೊರಿಯಾ

Advertisement

ಬುಧವಾರ ನಡೆದ ಮತ್ತೂಂದು ಪಂದ್ಯದಲ್ಲಿ ಮಲೇಷ್ಯಾವು ದಕ್ಷಿಣ ಕೊರಿಯಾವನ್ನು 1-0 ಗೋಲುಗಳಿಂದ ಸೋಲಿಸಿತು. ಎರಡು ತಂಡಗಳಿಗೆ ಇದು ಕಡೇ ಲೀಗ್‌ ಪಂದ್ಯವಾಗಿದ್ದು, ದಕ್ಷಿಣ ಕೊರಿಯಾ ಪಾಲಿಗೆ ಭಾರೀ ಪ್ರಾಮುಖ್ಯತೆ ಪಡೆದಿದ್ದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸೋತರೂ ದಕ್ಷಿಣ ಕೊರಿಯಾ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ.

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಲು ವಿಫ‌ಲವಾದವು. ಆದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ಮಲೇಷ್ಯಾದ ಅಬು ಕಮಲ್‌ ಅಜೈì ಗೋಲು ಬಾರಿಸಿ ಮಲೇಷ್ಯಾಗೆ  ಮುನ್ನಡೆ ತಂದುಕೊಟ್ಟರು. ಸದ್ಯ ಕೊರಿಯಾ 5 ಅಂಕಗಳೊಂದಿಗೆ ನಾಲ್ಕನೇ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿದೆ.

ಚೀನಾ ವಿರುದ್ಧ ಗೆದ್ದ ಜಪಾನ್‌

ಚೀನ ವಿರುದ್ಧ 2-1ರ ಅಂತರದಿಂದ ಜಪಾನ್‌ ಗೆಲುವು ಸಾಧಿಸಿತು. ಇನ್ನೊಂದೆಡೆ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ, ಪಾಕಿ ಸ್ಥಾನವನ್ನು 4-0 ಗೋಲುಗಳಿಂದ ಸೋಲಿಸಿದ ಕಾರಣದಿಂದ ಗೋಲುಗಳ ಲೆಕ್ಕಾಚಾರದಲ್ಲಿ ಜಪಾನ್‌ ಸೆಮಿಫೈನಲ್‌ಗೆ ಪ್ರವೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next