Advertisement

ಬೃಹತ್‌ ಆಹಾರ ಧಾನ್ಯ ದಾಸ್ತಾನು ಚಿಂತನೆ; ಜಾಗತಿಕ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಕ್ರಮ

10:02 PM Dec 05, 2022 | Team Udayavani |

ಹೊಸದಿಲ್ಲಿ: ದೇಶದ ನಾಗರಿಕರಿಗೆ ಅರ್ಹರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಗತ್ತಿನಲ್ಲಿಯೇ ಅತೀ ಬೃಹತ್‌ ಪ್ರಮಾಣದ ಆಹಾರ ಸಂಗ್ರಹಣ ಯೋಜನೆ ಹಮ್ಮಿಕೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವಕೃಷಿ ಸಚಿವಾಲಯ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಆಹಾರ ಸಂಸ್ಕರಣ ಇಲಾಖೆಗಳ ಯೋಜನೆಗಳನ್ನು ವಿಲೀನಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ, ಹೆಚ್ಚುತ್ತಿರುವ ಆಹಾರ ಉತ್ಪನ್ನಗಳ ಬೆಲೆ, ರಾಜಕೀಯ ಬೆಳವಣಿಗೆಗಳ ಏರಿಳಿತಗಳನ್ನು ಗಮನಿಸಿರುವ ಕೇಂದ್ರ ಸರಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಉಕ್ರೇನ್‌ ಮೇಲಿನ ದಾಳಿಯಿಂದಾಗಿದ ಈಗಾಗಲೇ ಆಹಾರ ಪೂರೈಕೆಯ ಸರಪಳಿ ಜಗತ್ತಿನ ಕೆಲವು ಹಂತಗಳಲ್ಲಿ ತಪ್ಪಿ ಹೋಗಿ ಬೆಲೆಯ ಏರಿಕೆಗೆ ಕೂಡ ಕಾರಣವಾಗಿದೆ. ದೇಶದಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆಗೆ ಸಾಮರ್ಥ್ಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಹೆಜ್ಜೆಗಳನ್ನು ಇರಿಸಿದೆ ಎಂದು ಕೃಷಿ ಆರ್ಥಿಕ ತಜ್ಞ ಅಶೋಕ್‌ ಗುಲಾಟಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next