Advertisement

India ಕೆನಡಾದಲ್ಲಿ ವೀಸಾ ಸೇವೆಗಳನ್ನು ಪುನರಾರಂಭಿಸಬೇಕಾದರೆ…: ಜೈಶಂಕರ್ ಹೇಳಿದ್ದೇನು?

06:42 PM Oct 22, 2023 | Vishnudas Patil |

ಹೊಸದಿಲ್ಲಿ:ಭಾರತ ಮತ್ತು ಕೆನಡಾ ನಡುವಿನವೀಸಾ ಸೇವೆಗಳ ಸ್ಥಗಿತದ ಬಗ್ಗೆ ಭಾನುವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದು, ‘ವಿಯೆನ್ನಾ ಒಪ್ಪಂದದ ಪ್ರಕಾರ ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಸುರಕ್ಷತೆಯನ್ನು ಒದಗಿಸಿದರೆ ವೀಸಾಗಳ ವಿತರಣೆ ಸೇವೆ ಪುನರಾರಂಭಿಸಲು ನಾನು ಬಯಸುತ್ತೇನೆ” ಎಂದು ಸ್ಪಷ್ಟ ನುಡಿಗಳನ್ನಾಡಿದ್ದಾರೆ.

Advertisement

ಕೆಲವು ವಾರಗಳ ಹಿಂದೆ, ಭಾರತವು ಕೆನಡಾದಲ್ಲಿ ವೀಸಾ ನೀಡುವುದನ್ನು ನಿಲ್ಲಿಸಿತು ಏಕೆಂದರೆ ನಮ್ಮ ರಾಜತಾಂತ್ರಿಕರು ವೀಸಾ ನೀಡುವುದಕ್ಕೆ ಹೋಗುವುದು ಸುರಕ್ಷಿತವಾಗಿರಲಿಲ್ಲ. ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ಕಠಿನ ಹಾದಿಯಲ್ಲಿ ಹೋಗುತ್ತಿದೆ. ರಾಜತಾಂತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ವಿಯೆನ್ನಾ ಸಮಾವೇಶದ ಅತ್ಯಂತ ಮೂಲಭೂತ ಅಂಶವಾಗಿದೆ. ಕೆನಡಾದಲ್ಲಿ ನಮ್ಮ ಜನರು ಸುರಕ್ಷಿತವಾಗಿಲ್ಲ, ನಮ್ಮ ರಾಜತಾಂತ್ರಿಕರು ಸುರಕ್ಷಿತವಾಗಿಲ್ಲ ಎಂದು ಅನೇಕ ರೀತಿಯಲ್ಲಿ ಸವಾಲು ಹಾಕಲಾಗಿದೆ. ಹಾಗಾಗಿ ನಾವು ಪ್ರಗತಿಯನ್ನು ನೋಡಿದರೆ ವೀಸಾಗಳನ್ನು ಪುನರಾರಂಭಿಸಲು ನಾನು ಖಂಡಿತವಾಗಿಯೂ ಬಯಸುತ್ತೇನೆ. ಇದು ಶೀಘ್ರದಲ್ಲೇ ಆಗಬಹುದು ಎಂದು ನನ್ನ ಭರವಸೆ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ಗೆ ಉಲ್ಲೇಖಿಸಿದೆ.

”ಕೆನಡಾದ ರಾಜಕೀಯದ ಒಂದು ನಿರ್ದಿಷ್ಟ ಭಾಗ ಮತ್ತು ಅದರ ನೀತಿಗಳೊಂದಿಗೆ ನಮ್ಮಲ್ಲಿ ಸಮಸ್ಯೆಗಳಿವೆ ಎಂದು ಹೇಳಲು ನಾನು ಬಯಸುತ್ತೇನೆ, ”ಕೆನಡಾ ತನ್ನ 41 ರಾಜತಾಂತ್ರಿಕರನ್ನು ಭಾರತದಿಂದ ಹಿಂತೆಗೆದುಕೊಂಡ ಕೆಲವು ದಿನಗಳ ನಂತರ, ದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಒದಗಿಸುವುದನ್ನು ಬಿಟ್ಟುಬಿಟ್ಟಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next