ನವದೆಹಲಿ:2035ರ ವೇಳೆಗೆ ಬಂದರು ಯೋಜನೆಗಾಗಿ ಭಾರತ 82 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ(ಮಾರ್ಚ್ 02) ತಿಳಿಸಿದ್ದಾರೆ.
ಇದನ್ನೂ ಓದಿ:1 ರಿಂದ 5 ನೇ ತರಗತಿಗಳ ಆರಂಭ ಸದ್ಯಕ್ಕಿಲ್ಲ: ಸುರೇಶ್ ಕುಮಾರ್
ಈ ಬಂದರು ಅಭಿವೃದ್ದಿ ಯೋಜನೆಯಡಿಯಲ್ಲಿಯೂ ಲೈಟ್ ಹೌಸ್ ಮತ್ತು ಪ್ರವಾಸೋದ್ಯಮ, ಜಲಮಾರ್ಗದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಭಾರತದ ನೌಕಾ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಬಂದರುಗಳು, ಶಿಪ್ ಯಾರ್ಡ್ಸ್ ಮತ್ತು ಜಲಮಾರ್ಗ ಅಭಿವೃದ್ಧಿಗೆ ಬಂಡವಾಳ ಹೂಡುವಂತೆ ಜಾಗತಿಕ ಹೂಡಿಕೆದಾರರಿಗೆ ಆಹ್ವಾನ ನೀಡಿದ್ದಾರೆ.
ಸಾಗರಮಾಲಾ ಯೋಜನೆಯಡಿ 2015 ಮತ್ತು 2035ರ ನಡುವೆ ಭಾರತದಲ್ಲಿ ಸುಮಾರು 6 ಲಕ್ಷ ಕೋಟಿ (82 ಬಿಲಿಯನ್) ರೂಪಾಯಿ ಮೌಲ್ಯದ 574ಕ್ಕೂ ಅಧಿಕ ಬಂದರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಗುರುತಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.