ಹೊಸದಿಲ್ಲಿ: ಉತ್ಪಾದನಾ ವಲಯದಲ್ಲಿ ಭಾರತ ಸುಧಾರಿಸಿಕೊಳ್ಳದಿದ್ದರೆ ನಿರುದ್ಯೋಗ ಸಮಸ್ಯೆ ಮಿತಿ ಮೀರಬಹುದು ಎಂದು ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಪಾಲ್ ಕ್ರುಗ್ಮನ್ ಎಚ್ಚರಿಸಿದ್ದಾರೆ. ಜಪಾನ್‌ನಲ್ಲಿ ಉದ್ಯೋಗದಲ್ಲಿ ನಿರತರಾಗಿರುವವರ ವಯಸ್ಸು ಕುಗುತ್ತಿದೆ. ಹೀಗಾಗಿ ಅದು ಸೂಪರ್ ಪವರ್ ಪಟ್ಟದಿಂದ ಕುಸಿದಿದೆ. ಏಷ್ಯಾದಲ್ಲಿ ಭಾರತ ಈ ಸ್ಥಾನವನ್ನು ತುಂಬಬಲ್ಲದು. ಆದರೆ ಉತ್ಪಾದನೆ ವಲಯವನ್ನು ಭಾರತ ಅಭಿವೃದ್ಧಿಪಡಿಸಿಕೊಳ್ಳಬೇಕಿದೆ. ಉತ್ಪಾದನೆ ವಲಯದಲ್ಲಿ ಹಿಂದುಳಿದಿರುವುದು ಭಾರತಕ್ಕೆ ವಿರುದ್ಧವಾಗಬಹುದು. ಉದ್ದೇಶಿತ ಬೆಳವಣಿಗೆಯನ್ನು ಸಾಧಿಸಲು ಸೂಕ್ತ ಉದ್ಯೋಗ ದೇಶದಲ್ಲಿಲ್ಲ. ದೇಶದ ಜನರಿಗೆ ಸೂಕ್ತ ಉದ್ಯೋಗವನ್ನು ಕಲ್ಪಿಸಬೇಕಿದೆ ಸೇವಾ ಕ್ಷೇತ್ರದಲ್ಲಿನ ಅಭಿವೃದ್ಧಿ ಜಗತ್ತಿನಲ್ಲಿ ಹಿಂದೆಂದೂ ಕಂಡಿರಲಿಲ್ಲ. ಜಾಗತಿಕ ಸೇವಾ ಕ್ಷೇತ್ರದಲ್ಲಿ ವ್ಯಾಪಾರಕ್ಕೆ ಅಪಾರ ಅವಕಾಶವಿದೆ. ಇದೇ ಕಾರಣಕ್ಕೆ ಭಾರತ ಪ್ರಗತಿ ಸಾಧಿಸುವ ಅವಕಾಶವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.