Advertisement

Finalನಲ್ಲಿ ಭಾರತ ಗೆದ್ದಿದರೆ ಅದು ಕ್ರಿಕೆಟ್‌ ಆಟದ ದುಃಖದ ದಿನವಾಗಿರುತ್ತಿತ್ತು: ರಜಾಕ್

10:33 AM Nov 24, 2023 | Team Udayavani |

ಕರಾಚಿ: ಪಾಕಿಸ್ತಾನದ ಕ್ರಿಕೆಟಿಗರು ಟೀಮ್‌ ಇಂಡಿಯಾದ ಮೇಲೆ ಸದಾ ಅಪಾದನೆಗಳನ್ನು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಮಾತನಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ಪಾಕ್‌ ಮಾಜಿ ಕ್ರಿಕೆಟಿಗ ಅಬ್ದುಲ್‌ ರಜಾಕ್‌ ಇದೀಗ ಮತ್ತೊಂದು ಹೇಳಿಕೆ ನೀಡಿದ್ದಾರೆ.

Advertisement

ಟಿವಿ ಕಾರ್ಯಕ್ರಮವೊಂದರಲ್ಲಿ ಭಾರತ ವಿಶ್ವಕಪ್ ಫೈನಲ್‌ ನಲಿ ಸೋತ ಬಗ್ಗೆ‌ ಅವರು ವ್ಯಂಗ್ಯವಾಗಿ ಮಾತನಾಡಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

“ಇಂಡಿಯಾದವರು ಅತಿಯಾದ ವಿಶ್ವಾಸದಲ್ಲಿದ್ದರು. ಫೈನಲ್‌ ನಲ್ಲಿ ಕ್ರಿಕೆಟ್‌ ಗೆದ್ದಿತು.ಭಾರತ ಸೋತಿತು. ಒಂದು ವೇಳೆ ಭಾರತ ಗೆದ್ದಿದರೆ ಅದು ಕ್ರಿಕೆಟ್‌ ಆಟದ ದುಃಖದ ದಿನವಾಗಿರುತ್ತಿತ್ತು. ಭಾರತದವರು ತಮ್ಮ ಅನುಕೂಲಕ್ಕೆ ತಕ್ಕ ಪಿಚ್‌ ಕಂಡಿಷನ್ ಬಳಸಿಕೊಳ್ಳುತ್ತಿದ್ದರು. ಫೈನಲ್‌ ಪಂದ್ಯದ ಪಿಚ್‌ ನ್ನು ನಾನು ಇದುವರೆಗೆ ನೋಡೇ ಇಲ್ಲ. ಭಾರತ ಸೋತಿದ್ದರಿಂದ ಕ್ರಿಕೆಟ್‌ ಗೆ ಒಳ್ಳೆದಾಯಿತು” ಎಂದು ಹೇಳಿದ್ದಾರೆ.

ಸದ್ಯ ಅಬ್ದುಲ್‌ ರಜಾಕ್‌ ಹೇಳಿಕೆ ಸೋಶಿಯಲ್‌ ಮೀಡಿಯಾದಲಿ ವೈರಲ್‌ ಆಗಿದ್ದು, ಹಲವರು ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next