Advertisement

ಪರಸ್ಪರ ಅಭಿವೃದ್ಧಿಗೆ ಕೈ ಜೋಡಿಸಿ

06:00 AM Jul 27, 2018 | |

ಜೊಹಾನ್ಸ್‌ಬರ್ಗ್‌: ನಾಲ್ಕನೇ ಕೈಗಾರಿಕಾ ಕ್ರಾಂತಿಯ ಈ ಕಾಲಘಟ್ಟದಲ್ಲಿ ಭಾರತ, “ಬ್ರಿಕ್ಸ್‌’ ಸದಸ್ಯ ರಾಷ್ಟ್ರಗಳೊಂದಿಗೆ ಕೈ ಜೋಡಿಸಲು ಭಾರತ ಸಿದ್ಧವಿದ್ದು,  ಬ್ರಿಕ್ಸ್‌ನ ಎಲ್ಲಾ ಸದಸ್ಯ ರಾಷ್ಟ್ರಗಳು ಈ ಕ್ಷೇತ್ರದ ಬಗ್ಗೆ ತಾವು ಹೊಂದಿರುವ ನೀತಿ ಹಾಗೂ ಕಾರ್ಯಯೋಜನೆಗಳನ್ನು ಇತರ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವ ಮೂಲಕ ಪರಸ್ಪರರ ಅಭಿವೃದ್ಧಿಗೆ ಪೂರಕವಾಗಿ ಮುನ್ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 

Advertisement

ಜೊಹಾನ್ಸ್‌ಬರ್ಗ್‌ನಲ್ಲಿ ಆಯೋಜನೆ ಗೊಂಡಿರುವ ಈ ಬಾರಿಯ ಬ್ರಿಕ್ಸ್‌ ಸಮಾವೇಶದಲ್ಲಿ ಭಾಗಿಯಾದ ಅವರು, ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಉತ್ಪಾದನೆ ಹಾಗೂ ಪೂರೈಕೆಯ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ. 

18ನೇ ಶತಮಾನದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆದಿದ್ದ ಮೊಟ್ಟಮೊದಲ ಕೈಗಾರಿಕಾ ಕ್ರಾಂತಿಯ ನಂತರ, ಅದೇ ಮಾದರಿಯ ಎರಡು ಕ್ರಾಂತಿಗಳು ನಡೆದಿದ್ದು, ಈಗಿನ ಡಿಜಿಟಲ್‌ ಯುಗದಲ್ಲಿ ತಂತ್ರಜ್ಞಾನ ಹಾಗೂ ಔದ್ಯೋಗಿಕ ವಲಯಗಳಲ್ಲಿ ಆಗುತ್ತಿರುವ ಗುರುತರ ಬೆಳವಣಿಗೆಗಳು ನಾಲ್ಕನೇ ಕೈಗಾರಿಕಾ ಕ್ರಾಂತಿಯೆಂದು ಪರಿಗಣಿಸಲ್ಪಟ್ಟಿವೆ. 

Advertisement

Udayavani is now on Telegram. Click here to join our channel and stay updated with the latest news.

Next