Advertisement
ಜಿಂಬಾಬ್ವೆಯನ್ನು ಮಣಿಸುವುದು, ಸರಣಿ ವಶಪಡಿಸಿಕೊಳ್ಳುವುದು ಭಾರತಕ್ಕೆ ದೊಡ್ಡ ಸವಾಲೇ ಅಲ್ಲ ಎಂದು ಭಾವಿಸಲಡ್ಡಿಯಿಲ್ಲ. ಆದರೆ ಇಲ್ಲಿಗೆ ಭಾರತದ ಸಮಸ್ಯೆಗಳೆಲ್ಲ ಪರಿಹಾರಗೊಂಡವು ಎಂಬುದಾಗಿ ಭಾವಿಸಬೇಕಿಲ್ಲ. ಸರಣಿ ರೋಚಕವಾಗಿ ಸಾಗುವುದು ಮುಖ್ಯ. ಆಗ ಎಲ್ಲರ ಸಾಮರ್ಥ್ಯವನ್ನೂ ಅಳೆದು ತೂಗಿ ನೋಡಲು ಸಾಧ್ಯ. ಮುಖ್ಯವಾಗಿ ಕೆ.ಎಲ್. ರಾಹುಲ್ ಅವರ ಫಿಟ್‌ನೆಸ್ ಮತ್ತು ಬ್ಯಾಟಿಂಗ್ ಫಾರ್ಮ್ ಹೇಗಿದೆ ಎಂಬುದನ್ನು ಅರಿಯಬೇಕಿದೆ. ಮುಂಬ ರುವ ಏಷ್ಯಾ ಕಪ್ ಹಿನ್ನೆಲೆಯಲ್ಲಿ ಇದು ಅತ್ಯಗತ್ಯ. ಈ ಸವಾಲು ಜಿಂಬಾಬ್ವೆ ಸವಾಲಿಗಿಂತ ಎಷ್ಟೋ ಪಟ್ಟು ಹೆಚ್ಚು.
Related Articles
Advertisement
ಜಿಂಬಾಬ್ವೆಯ ತೀರಾ ಸಾಮಾನ್ಯ ಮಟ್ಟದ ಆಟ ಭಾರತದ ಸಾಮರ್ಥ್ಯಕ್ಕೆ ಖಂಡಿತ ಮಾನದಂಡವಲ್ಲ. ಇದರಿಂದ ಅಪಾಯವೇ ಜಾಸ್ತಿ. ದೊಡ್ಡ ಕೂಟಕ್ಕೆ ತೆರಳುವ ಮುನ್ನ ಯಾವತ್ತೂ ಬಲಿಷ್ಠ ತಂಡದೊಂಡನೆ ಆಡಿ ಅಭ್ಯಾಸ ನಡೆಸ ಬೇಕೇ ಹೊರತು ಜಿಂಬಾಬ್ವೆಯಂಥ ಸಾಮಾನ್ಯ ತಂಡದೆದುರು ಅಲ್ಲ.
ಚೇಸಿಂಗ್ ಸಾಮರ್ಥ್ಯ…ಭಾರತಕ್ಕೆ ಬೌಲಿಂಗ್ ಬಗ್ಗೆ ಚಿಂತೆ ಇತ್ತು. ಏಕೆಂದರೆ, ಬಾಂಗ್ಲಾ ವಿರುದ್ಧ ಹರಾರೆ ಅಂಗಳದಲ್ಲೇ ಜಿಂಬಾಬ್ವೆ 5ಕ್ಕೆ 307 ರನ್, 5ಕ್ಕೆ 291 ರನ್ ಚೇಸ್ ಮಾಡಿ ಸರಣಿ ವಶಪಡಿಸಿಕೊಂಡಿತ್ತು. ಭಾರತದ ಬಳಿ ಅಷ್ಟೇನೂ ಘಾತಕ ಹಾಗೂ ಅನುಭವಿ ಬೌಲರ್‌ಗಳಿಲ್ಲದ ಕಾರಣ ರೇಗಿಸ್ ಬಳಗ ಇಂಥದೇ ಬ್ಯಾಟಿಂಗ್ ಪರಾಕ್ರಮ ತೋರಬಹುದೆಂಬ ನಿರೀಕ್ಷೆ ಇತ್ತು. ಆದರೆ ಏಕದಿನಕ್ಕೆ ಮರಳಿದ ದೀಪಕ್ ಚಹರ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ ಸೇರಿಕೊಂಡು ಜಿಂಬಾಬ್ವೆ ಬ್ಯಾಟಿಂಗ್ ಸರದಿಯನ್ನು ಸೀಳಿಹಾಕಿದರು. ಶನಿವಾರ ಜಿಂಬಾಬ್ವೆಯನ್ನರ ಬ್ಯಾಟ್ ಮಾತಾಡೀತೇ? ಪಂದ್ಯ “ಫೈಟ್’ ಕಂಡೀತೇ? ಕುತೂಹಲ ಸಹಜ. ಆರಂಭ:
ಅಪರಾಹ್ನ 12.45
ಪ್ರಸಾರ:
ಸೋನಿ ಸ್ಪೋರ್ಟ್ಸ್