Advertisement
ವಿಶ್ವದ ಅನಿಶ್ಚಿತ ಹಾಗೂ ಅತ್ಯಂತ ಅಪಾಯಕಾರಿ ತಂಡವೆಂದೇ ಗುರುತಿಸಲ್ಪಡುವ ವೆಸ್ಟ್ ಇಂಡೀಸ್ ಟೆಸ್ಟ್ ಹಾಗೂ ಏಕದಿನಕ್ಕೆ ಹೋಲಿಸಿದರೆ ಟಿ20ಯಲ್ಲಿ ಹೆಚ್ಚು ಬಲಶಾಲಿಯಾಗಿದೆ. ಕಳೆದ ಸಲ ಭಾರತದಲ್ಲೇ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿಕೊಂಡದ್ದೇ ಇದಕ್ಕೆ ಸಾಕ್ಷಿ. ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯ ಕೈರನ್ ಪೊಲಾರ್ಡ್ ನಾಯಕತ್ವದಲ್ಲಿ ಕೆರಿಬಿಯನ್ ಪಡೆ ಹೋರಾಟಕ್ಕೆ ಇಳಿಯಲಿದೆ.
ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿದ ತಂಡಕ್ಕೆ ಹೋಲಿಸಿದರೆ ಭಾರತದ ಈಗಿನ ಪಡೆ ಹೆಚ್ಚು ಶಕ್ತಿಶಾಲಿ. ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ಮರಳಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್, ವೇಗಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮರಳಿದ್ದಾರೆ.
Related Articles
Advertisement
ರಾಹುಲ್, ಪಂತ್ ಮೇಲೆ ನಿರೀಕ್ಷೆಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಸಶಕ್ತ ಹಾಗೂ ಪೂರ್ಣ ಸಾಮರ್ಥ್ಯದ ತಂಡವೊಂದನ್ನು ರಚಿಸುವುದು ಭಾರತದ ಗುರಿ. ಹೀಗಾಗಿ ತಂಡ ಪ್ರದರ್ಶನದೊಂದಿಗೆ ಆಟಗಾರರ ವೈಯಕ್ತಿಕ ಸಾಮರ್ಥ್ಯವನ್ನೂ ಸೂಕ್ಷ್ಮವಾಗಿ ಗಮನಿಸಬೇ ಕಾಗುತ್ತದೆ. ಈ ಸಾಲಿನಲ್ಲಿರುವ ಇಬ್ಬರು ಆಟಗಾರ ರೆಂದರೆ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್. ಎಡಗೈ ಆರಂಭಕಾರ ಶಿಖರ್ ಗಾಯಾಳಾಗಿ ಹೊರಗುಳಿದ ಕಾರಣ ರಾಹುಲ್‌ಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ಲಭಿಸುವುದು ಬಹುತೇಕ ಖಚಿತ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ರಾಹುಲ್, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕೂಟದಲ್ಲಿ ಕರ್ನಾಟಕವನ್ನು ಚಾಂಪಿಯನ್ ಪಟ್ಟಕ್ಕೇರಿ ಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 31 ಟಿ20 ಪಂದ್ಯಗಳಿಂದ 974 ರನ್ ಪೇರಿಸಿದ ಹೆಗ್ಗಳಿಕೆ ರಾಹುಲ್ ಪಾಲಿಗಿದೆ. ಟೀಮ್ ಇಂಡಿಯಾದಲ್ಲಿದ್ದರೂ ರಾಹುಲ್‌ಗೆ ಮಧ್ಯಮ ಕ್ರಮಾಂಕ ಅಷ್ಟಾಗಿ ಹೊಂದಿಕೊಳ್ಳುತ್ತಿರಲಿಲ್ಲ. ಅಲ್ಲದೇ ಈಗ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕಕ್ಕೆ ಲಗ್ಗೆ ಇರಿಸಿದ್ದರಿಂದ ರಾಹುಲ್‌ಗೆ ಈ ಸ್ಥಾನವೂ ಕಳೆದು ಹೋಗಿದೆ. ಉಳಿದಿರುವ ಒಂದೇ ಮಾರ್ಗವೆಂದರೆ ಧವನ್ ಜಾಗವನ್ನು ಸಮರ್ಥ ರೀತಿಯಲ್ಲಿ ತುಂಬಿ ಸುವುದು. ಪಂತ್ ಇನ್ನೂ ನಿರೀಕ್ಷಿತ ಮಟ್ಟಕ್ಕೆ ಏರಿಲ್ಲ. ಕೀಪಿಂಗ್ ಹಾಗೂ ಬ್ಯಾಟಿಂಗ್‌ಗಳೆರಡರಲ್ಲೂ “ಸಿಲ್ಲಿ’ಯಾಗಿ ವರ್ತಿಸಿ ಟೀಕೆಗೆ ಗುರಿಯಾಗುತ್ತಿದ್ದಾರೆ. ವಿಂಡೀಸಿಗೆ ಸೇಡು ಸಾಧ್ಯವೇ?
ಭಾರತದೆದುರು ತವರಲ್ಲೇ 3-0 ವೈಟ್‌ವಾಶ್ ಅನು ಭವಿಸಿದ ವೆಸ್ಟ್ ಇಂಡೀಸಿಗೆ ಸೇಡು ತೀರಿಸಿಕೊಳ್ಳಲು ಸಾಧ್ಯವೇ ಎಂಬು ದೊಂದು ಪ್ರಶ್ನೆ. ಚುಟುಕು ಕ್ರಿಕೆಟ್ ಮಟ್ಟಿಗೆ ಕೆರಿಬಿಯನ್ನರದು ಬಲಾಡ್ಯ ತಂಡವೆಂ ಬುದರಲ್ಲಿ ಅನುಮಾನವಿಲ್ಲ. ಆದರೆ ಬದ್ಧತೆ ತೋರ್ಪಡಿಸಬೇಕಾದುದು ಅಷ್ಟೇ ಅಗತ್ಯ. ಬಿಗ್ ಹಿಟ್ಟರ್ ನಿಕೋಲಸ್ ಪೂರಣ್ ನಿಷೇಧದಲ್ಲಿರುವ ಕಾರಣ ಮೊದಲ ಪಂದ್ಯಕ್ಕೆ ಲಭಿಸುತ್ತಿಲ್ಲ. ಆದರೆ ಶೈ ಹೋಪ್, ಹೆಟ್‌ಮೈರ್, ಚೇಸ್ ಮೇಲೆ ತಂಡ ಭರವಸೆ ಇರಿಸಿದೆ. ಸೀನಿಯರ್‌ಗಳಾದ ಬ್ರಾತ್‌ವೇಟ್, ರಸೆಲ್, ಬ್ರಾವೊ ಅವರನ್ನು ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇವರ ಸಾಧನೆಯಲ್ಲಿ ತಂಡದ ಯಶಸ್ಸು ಅಡಗಿದೆ. ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಕೆ.ಎಲ್. ರಾಹುಲ್, ರಿಷಭ್ ಪಂತ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ. ವೆಸ್ಟ್ ಇಂಡೀಸ್: ಕೈರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲನ್, ಬ್ರ್ಯಾಂಡನ್ ಕಿಂಗ್, ದಿನೇಶ್ ರಾಮದಿನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೆವಿಸ್, ಶಫೇìನ್ ರುದರ್‌ಫೋರ್ಡ್, ಶಿಮ್ರನ್ ಹೆಟ್‌ಮೈರ್, ಖಾರಿ ಪಿಯರೆ, ಲೆಂಡ್ಲ್ ಸಿಮನ್ಸ್, ಜಾಸನ್ ಹೋಲ್ಡರ್, ಹೇಡನ್ ವಾಲ್ಶ್ ಜೂನಿಯರ್, ಕೀಮೊ ಪೌಲ್, ಕೆಸ್ರಿಕ್ ವಿಲಿಯಮ್ಸ್. ಪ್ರಸಾರ: ಸ್ಟಾರ್ ಸ್ಪೋರ್ಟ್ಸ್