Advertisement
ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಆರಂಭದಲ್ಲಿ ತತ್ತರಿಸಿದ ದಕ್ಷಿಣ ಆಫ್ರಿಕಾವು ಎಬಿ ಡಿ’ವಿಲಿಯರ್, ಪ್ಲೆಸಿಸ್ ಮತ್ತು ಕಾಕ್ ಅವರ ಜವಾಬ್ದಾರಿಯ ಆಟದಿಂದಾಗಿ 286 ರನ್ ಪೇರಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ಭಾರತವೂ ಆರಂಭಿಕ ಕುಸಿತ ಕಂಡಿದೆ. 18 ರನ್ ಗಳಿಸುವಷ್ಟರಲ್ಲಿ ತಂಡ ಆರಂಭಿಕರನ್ನು ಕಳೆದುಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಕೇವಲ 5 ರನ್ನಿಗೆ ಔಟಾಗಿರುವುದು ತಂಡಕ್ಕೆ ಎದುರಾದ ದೊಡ್ಡ ಹೊಡೆತವಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಮೂರು ವಿಕೆಟಿಗೆ 28 ರನ್ ಗಳಿಸಿದೆ. ಚೇತೇಶ್ವರ ಪೂಜಾರ ಮತ್ತು ರೋಹಿತ್ ಶರ್ಮ ತಂಡದ ರಕ್ಷಣೆಯ ಭಾರ ಹೊತ್ತಿದ್ದಾರೆ.
ವೇಗಿ ಭುವನೇಶ್ವರ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಕೇವಲ 12 ರನ್ ಗಳಿಸುವಷ್ಟರಲ್ಲಿ ಆರಂಭದ ಮೂರು ವಿಕೆಟ್ ಕಳೆದುಕೊಂಡು ಒದ್ದಾಡಿತು. ಎಲ್ಗರ್, ಆಮ್ಲ ಅವರ ವಿಕೆಟನ್ನು ಕಳೆದುಕೊಂಡ ದಕ್ಷಿಣ ಆಫ್ರಿಕಾ ಸಂಕಷ್ಟಕ್ಕೆ ಬಿತ್ತು. ಆದರೆ ಅನುಭವಿ ಎಬಿ ಡಿ’ವಿಲಿಯರ್ ಮತ್ತು ಪ್ಲೆಸಿಸ್ ಅವರ ಜವಾಬ್ದಾರಿಯ ಆಟದಿಂದಾಗಿ ತಂಡ ಚೇತರಿಸಿಕೊಂಡಿತು. ಭಾರತೀಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರಿಬ್ಬರು ಮೂರನೇ ವಿಕೆಟಿಗೆ 114 ರನ್ನುಗಳ ಜತೆಯಾಟ ನಡೆಸಿದರು. ಇಬ್ಬರೂ ಅರ್ಧಶತಕ ಸಿಡಿಸಿದರು. ಈ ಟೆಸ್ಟ್ ಮೂಲಕ ಟೆಸ್ಟ್‌ಗೆ ಪಾದಾರ್ಪಣೆಗೈದ ಜಸ್‌ಪ್ರೀತ್ ಬುಮ್ರಾ ಈ ಜೋಡಿಯನ್ನು ಮುರಿಯಲು ಯಶಸ್ವಿಯಾದರು. ಬುಮ್ರಾ ಅವರ ಅಮೋಘ ಎಸೆತಕ್ಕೆ ಡಿ’ವಿಲಿಯರ್ ಬೌಲ್ಡ್ ಆದರು. 84 ಎಸೆತ ಎದುರಿಸಿದ ಅವರು 11 ಬೌಂಡರಿ ನೆರವಿನಿಂದ 65 ರನ್ ಹೊಡೆದರು. ಸ್ವಲ್ಪ ಹೊತ್ತಿನಲ್ಲಿ ಪ್ಲೆಸಿಸ್ ಕೂಡ ನಿರ್ಗಮಿಸಿದರು. ಅವರು 104 ಎಸೆತಗಳಿಂದ 62 ರನ್ ಹೊಡೆದರು.
Related Articles
Advertisement
ಕುಸಿದ ಭಾರತದಕ್ಷಿಣ ಆಫ್ರಿಕಾದಂತೆ ಭಾರತವು ಆರಂಭಿಕ ಕುಸಿತಕ್ಕೆ ಒಳಗಾಗಿದೆ. ಆರಂಭಿಕ ಶಿಖರ್ ಧವನ್ ಬಿರುಸಿನ ಆಟಕ್ಕೆ ಮುಂದಾದರು. ಆದರೆ 13 ಎಸೆತಗಳಲ್ಲಿ 16 ರನ್ ಗಳಿಸಿದ ವೇಳೆ ಸ್ಟೇನ್‌ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಈ ಮೊದದಲು ಮುರಳಿ ವಿಜಯ್ ಅವರ ವಿಕೆಟನ್ನು ಫಿಲಾಂಡರ್ ಹಾರಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಅವರನ್ನು ತಂಡ ಕಳೆದುಕೊಂಡಿರುವುದು ದೊಡ್ಡ ಹೊಡೆತವಾಗಿದೆ. ಕೊಹ್ಲಿ ಅವರನ್ನು ಮಾರ್ನೆ ಕೆಡಹಿದ್ದರು. ಭಾರತ
ಮುರಳಿ ವಿಜಯ್ ಸಿ ಎಲ್ಗರ್ ಬಿ ಫಿಲಾಂಡರ್ 1
ಶಿಖರ್ ಧವನ್ ಸಿ ಮತ್ತು ಬಿ ಸ್ಟೇನ್ 16
ಚೇತೇಶ್ವರ್ ಪೂಜಾರ ಬ್ಯಾಟಿಂಗ್ 5
ವಿರಾಟ್ ಕೊಹ್ಲಿ ಸಿ ಕಾಕ್ ಬಿ ಮಾರ್ಕೆಲ್ 5
ರೋಹಿತ್ ಶರ್ಮ ಬ್ಯಾಟಿಂಗ್ 0
ಇತರ: 1
ಒಟ್ಟು (11 ಓವರ್‌ಗಳಲ್ಲಿ 3 ವಿಕೆಟಿಗೆ) 28
ವಿಕೆಟ್ ಪತನ: 1-16, 2-18, 3-27
ಬೌಲಿಂಗ್:
ವೆರ್ನನ್ ಫಿಲಾಂಡರ್ 4-1-13-1
ಡೇನ್ ಸ್ಟೇನ್ 4-1-13-1
ಮಾರ್ನೆ ಮಾರ್ಕೆಲ್ 2-2-0-1
ಕಾಗಿಸೊ ರಬಾಡ 1-0-10