Advertisement

ಭಾರತದ ನ್ಯೂಜಿಲೆಂಡ್‌ ಕ್ರಿಕೆಟ್‌ ಪ್ರವಾಸ ಮುಂದೂಡಿಕೆ

09:48 PM Sep 16, 2021 | Team Udayavani |

ನವದೆಹಲಿ: ಭಾರತೀಯ ಕ್ರಿಕೆಟ್‌ ತಂಡದ ನ್ಯೂಜಿಲೆಂಡ್‌ ಪ್ರವಾಸ 2022ರ ಅಂತ್ಯದ ತನಕ ಮುಂದೂಡಲ್ಪಟ್ಟಿದೆ. ಮುಂದಿನ ಬೇಸಗೆಯಲ್ಲಿ ಭಾರತ ಕಿವೀಸ್‌ಗೆ ತೆರಳಿ 3 ಏಕದಿನ ಪಂದ್ಯಗಳನ್ನಾಡಬೇಕಿತ್ತು.

Advertisement

ಇದು 2023ರ ಆವೃತ್ತಿಯ ವಿಶ್ವಕಪ್‌ ಅರ್ಹತೆಯ ಸೂಪರ್‌ ಲೀಗ್‌ ವ್ಯಾಪ್ತಿಗೆ ಒಳಪಟ್ಟ ಸರಣಿಯಾಗಿತ್ತು. ಈ ಸರಣಿ ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಯ ಬಳಿಕ ನಡೆಯಲಿದೆ ಎಂಬುದಾಗಿ ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ಸರ್ಕಾರ ನೂತನ ಕ್ವಾರಂಟೈನ್‌ ಮಾರ್ಗಸೂಚಿಯನ್ನು (ಎಂಐಕ್ಯೂ) ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಸರಣಿ ಮುಂದೂಡಲ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next