Advertisement

ವಿದಾಯ ಹೇಳಿದ ಆಶಿಷ್‌ ನೆಹ್ರಾ ಅವರಿಗೆ ಗೆಲುವಿನ ಉಡುಗೊರೆ

07:55 AM Nov 02, 2017 | |

ಹೊಸದಿಲ್ಲಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತವು ವಿಶ್ವದ ಅಗ್ರಮಾನ್ಯ ಟಿ20 ತಂಡವಾಗಿರುವ ನ್ಯೂಜಿಲ್ಯಾಂಡ್‌ ತಂಡವನ್ನು ರನ್ನುಗಳಿಂದ ಸದೆಬಡಿದಿದೆ. ಈ ಮೂಲಕ ವಿದಾಯ ಹೇಳಿರುವ ಆಶಿಷ್‌ ನೆಹ್ರಾ ಅವರಿಗೆ ಗೆಲುವಿನ ಉಡುಗೊರೆ ನೀಡಿದೆ. ಮಾತ್ರವಲ್ಲದೇ ನ್ಯೂಜಿಲ್ಯಾಂಡ್‌ ವಿರುದ್ಧದ ಸತತ ಸೋಲಿನ ಸರಮಾಲೆಯನ್ನು ಅಂತ್ಯಗೊಳಿಸಿ ಮೊದಲ ಗೆಲುವಿನ ಸಂಭ್ರಮ ಆಚರಿಸಿದೆ. ಭಾರತ ಈ  ಹಿಂದೆ ಐದು ಬಾರಿ ನ್ಯೂಜಿಲ್ಯಾಂಡಿಗೆ ಶರಣಾಗಿತ್ತು.

Advertisement

ಆರಂಭಿಕ ಆಟಗಾರರಾದ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಅವರ ದಾಖಲೆಯ ಜತೆಯಾಟದಿಂದಾಗಿ ಭಾರತವು ಮೂರು ವಿಕೆಟಿಗೆ 202 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಭಾರತೀಯ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟಿಗೆ 149 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು.


ಗೆಲ್ಲಲು 203 ರನ್‌ ತೆಗೆಯುವ ಸವಾಲು ಪಡೆದ ನ್ಯೂಜಿಲ್ಯಾಂಡ್‌ ತಂಡವು ಆರಂಭಿಕ ಕುಸಿತ ಕಂಡಿತು. 6 ರನ್‌ ಗಳಿಸಿದ ವೇಳೆ ಪಾಂಡ್ಯ ಪಡೆದ ಅದ್ಭುತ ಕ್ಯಾಚಿಗೆ ಗಪ್ಟಿಲ್‌ ಬಲಿಯಾದರೆ ಕಾಲಿನ್‌ ಮುನ್ರೊ 7 ರನ್‌ ಗಳಿಸಲಷ್ಟೇ ಶಕ್ತರಾದರು. ಆಬಳಿಕ ಕೇನ್‌ ವಿಲಿಯಮ್ಸನ್‌ ಮತ್ತು ಟಾಮ್‌ ಲಾಥಂ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಈ ಜತೆಯಾಟ ಹೆಚ್ಚು ಹೊತ್ತು ಇರಲಿಲ್ಲ. 

28 ರನ್‌ ಗಳಿಸಿದ ವಿಲಿಯಮ್ಸನ್‌ ಔಟಾದ ಬಳಿಕ ಪ್ರವಾಸಿ ತಂಡ ಬ್ರೂಸ್‌ ಮತ್ತು ಗ್ರ್ಯಾಂಡ್‌ಹೋಮ್‌ ಅವರನ್ನು ಬೇಗನೇ ಕಳೆದುಕೊಂಡು ಒತ್ತಡಕ್ಕೆ ಬಿತ್ತು. ಆಬಳಿಕ ಹೆನ್ರಿ ನಿಕೋಲ್ಸ್‌ ರನೌಟ್‌ ಆಗುವುದರೊಂದಿಗೆ 94 ರನ್‌ ತಲುಪುವಷ್ಟರಲ್ಲಿ ತಂಡ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಟಾಮ್‌ ಲಾಥಂ ಹೋರಾಟ ನಡೆಸಿದರೂ ತಂಡ ಗೆಲುವಿನಿಂದ ತುಂಬಾ ದೂರವೇ ಉಳಿಯಿತು. ಲಾಥಂ ಗರಿಷ್ಠ 39 ರನ್‌ ಹೊಡೆದರು.

ಧವನ್‌, ರೋಹಿತ್‌ ದಾಖಲೆ ಜತೆಯಾಟ
ಧವನ್‌ ಮತ್ತು ರೋಹಿತ್‌ ಅವರು ಮೊದಲ ವಿಕೆಟಿಗೆ ದಾಖಲೆಯ ಜತೆಯಾಟ ನಡೆಸಿದ್ದರಿಂದ ಭಾರತ ಉತ್ತಮ ಮೊತ್ತ ಪೇರಿಸುವಂತಾಯಿತು. ಮೊದಲ ವಿಕೆಟಿಗೆ 158 ರನ್‌ ಪೇರಿಸುವ ಮೂಲಕ ಅವರಿಬ್ಬರು 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಮತ್ತು ರೋಹಿತ್‌ ಅವರು ಪೇರಿಸಿದ 138 ರನ್‌ ಜತೆಯಾಟದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ವೈಯಕ್ತಿಕವಾಗಿ ಅವರಿಬ್ಬರು ತಲಾ 80 ರನ್‌ ಗಳಿಸಿ ಔಟಾದರು.

16 ರನ್‌ ಗಳಿಸಿದ ವೇಳೆ ಜೀವದಾನ ಪಡೆದ ರೋಹಿತ್‌ ಅವರು 55 ಎಸೆತ ಎದುರಿಸಿದ್ದು ಆರು ಸಿಕ್ಸರ್‌ ಮತ್ತು 4 ಬೌಂಡರಿ ನೆರವಿನಿಂದ 80 ರನ್‌ ಹೊಡೆದರು. ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿರುವ ಧವನ್‌ 52 ಎಸೆತಗಲಿಂದ 80 ರನ್‌ ಸಿಡಿಸಿದರು. 10 ಬೌಂಡರಿ ಬಾರಿಸಿದ ಅವರು 2 ಸಿಕ್ಸರ್‌ ಸಿಡಿಸಿದರು. 50 ರನ್‌ ಗಳಿಸಿದ ವೇಳೆ ಧವನ್‌ ಕೂಡ ಜೀವದಾನ ಪಡೆದಿದ್ದರು. ಆದರೆ ರೋಹಿತ್‌ ಸಿಕ್ಸರ್‌ ಸಿಡಿಸುವ ಮೂಲಕ ತನ್ನ ಅರ್ಧಶತಕ ಪೂರ್ತಿಗೊಳಿಸಿದ್ದರು.

Advertisement

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಸಿ ಲಾಥಂ ಬಿ ಬೌಲ್ಟ್    80
ಶಿಖರ್‌ ಧವನ್‌    ಸಿ ಲಾಥಂ ಬಿ ಸೋಧಿ    80
ಹಾರ್ದಿಕ್‌ ಪಾಂಡ್ಯ    ಸಿ ಲಾಥಂ ಬಿ ಸೋಧಿ    0
ವಿರಾಟ್‌ ಕೊಹ್ಲಿ    ಔಟಾಗದೆ    26
ಎಂಎಸ್‌ ಧೋನಿ    ಔಟಾಗದೆ    7

ಇತರ:        9
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ)    202
ವಿಕೆಟ್‌ ಪತನ: 1-158, 2-158, 3-185

ಬೌಲಿಂಗ್‌:
ಮಿಚೆಲ್‌ ಸ್ಯಾಂಟ್ನರ್‌        4-0-30-0
ಟ್ರೆಂಟ್‌ ಬೌಲ್ಟ್        4-0-49-1
ಟಿಮ್‌ ಸೌಥಿ        4-0-44-0
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    3-0-34-0
ಐಶ್‌ ಸೋಧಿ        4-0-25-2
ಕಾಲಿನ್‌ ಮುನ್ರೊ        1-0-14-0

ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌    ಸಿ ಪಾಂಡ್ಯ ಬಿ ಚಾಹಲ್‌    4
ಕಾಲಿನ್‌ ಮುನ್ರೊ    ಬಿ ಕುಮಾರ್‌    7
ಕೇನ್‌ ವಿಲಿಯಮ್ಸನ್‌    ಸಿ ಧೋನಿ ಬಿ ಪಾಂಡ್ಯ    28
ಟಾಮ್‌ ಲಾಥಂ    ಸ್ಟಂಪ್ಡ್ ಧೋನಿ ಬಿ ಚಾಹಲ್‌    39
ಟಾಮ್‌ ಬ್ರೂಸ್‌    ಸಿ ಶರ್ಮ ಬಿ ಪಟೇಲ್‌    10
ಗ್ರ್ಯಾಂಡ್‌ಹೋಮ್‌    ಸಿ ಧವನ್‌ ಬಿ ಪಟೇಲ್‌    0
ಹೆನ್ರಿ ನಿಕೋಲ್ಸ್‌    ರನೌಟ್‌    6
ಮಿಚೆಲ್‌ ಸ್ಯಾಂಟ್ನರ್‌    ಔಟಾಗದೆ    27
ಟಿಮ್‌ ಸೌಥಿ    ಸಿ ಧೋನಿ ಬಿ ಬುಮ್ರಾ    8
ಐಶ್‌ ಸೋಧಿ    ಔಟಾಗದೆ    7

ಇತರ        9
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ)    149

ವಿಕೆಟ್‌ ಪತನ: 1-6, 2-18, 3-54, 4-83, 5-84, 6-94, 7-99, 8-111

ಬೌಲಿಂಗ್‌:
ಆಶಿಷ್‌ ನೆಹ್ರಾ        4-0-29-0    
ಯುಜ್ವೇಂದ್ರ ಚಾಹಲ್‌        4-0-26-2
ಭುವನೇಶ್ವರ್‌ ಕುಮಾರ್‌        3-0-23-1
ಜಸ್‌ಪ್ರೀತ್‌ ಬುಮ್ರಾ        4-0-37-1
ಅಕ್ಷರ್‌ ಪಟೇಲ್‌        4-0-20-2
ಹಾರ್ದಿಕ್‌ ಪಾಂಡ್ಯ        1-0-11-1

ಪಂದ್ಯಶ್ರೇಷ್ಠ: ಶಿಖರ್‌ ಧವನ್‌

Advertisement

Udayavani is now on Telegram. Click here to join our channel and stay updated with the latest news.

Next