Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 49.3 ಓವರ್‌ಗಳಲ್ಲಿ 279 ರನ್ ಪೇರಿಸಿತು. ನ್ಯೂಜಿಲ್ಯಾಂಡ್ ಆರಂಭಿಕ ಕುಸಿತದಿಂದ ಚೇತರಿಸಿಕೊಂಡೂ 49.1 ಓವರ್‌ಗಳಲ್ಲಿ 7 ವಿಕೆಟಿಗೆ 280 ರನ್ ಬಾರಿಸಿತು.
ಸ್ಮತಿ ಮಂಧನಾ ಕ್ವಾರಂಟೈನ್‌ನಿಂದ ಹೊರಬಂದರೂ ಈ ಪಂದ್ಯದಲ್ಲಿ ಆಡಲಿಲ್ಲ. ಆದರೆ ಎಸ್. ಮೇಘನಾ (61) ಮತ್ತು ಶಫಾಲಿ ವರ್ಮ (51) ಮೊದಲ ವಿಕೆಟಿಗೆ ಕೇವಲ 13 ಓವರ್‌ಗಳಿಂದ 100 ರನ್ ಪೇರಿಸುವಲ್ಲಿ ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ಇದೇ ಜೋಶ್ ಕಾಯ್ದುಕೊಳ್ಳಲು ಭಾರತ ದಿಂದ ಸಾಧ್ಯವಾಗಲಿಲ್ಲ. ಯಾಸ್ತಿಕಾ ಭಾಟಿಯಾ (19), ನಾಯಕಿ ಮಿಥಾಲಿ ರಾಜ್ (23), ಹರ್ಮನ್‌ಪ್ರೀತ್ ಕೌರ್ (13) ದೊಡ್ಡ ಮೊತ್ತ ಪೇರಿಸಲು ವಿಫಲರಾದರು. ಆದರೆ ಕೊನೆಯಲ್ಲಿ ದೀಪ್ತಿ ಶರ್ಮ ಸಿಡಿದು ನಿಂತ ಪರಿಣಾಮ ಸವಾಲಿನ ಮೊತ್ತ ಸಾಧ್ಯವಾಯಿತು.
Related Articles
Advertisement
ಆಘಾತ ನೀಡಿದ ಜೂಲನ್ಕಿವೀಸ್ಗೆ ಜೂಲನ್ ಗೋಸ್ವಾಮಿ ಬಲವಾದ ಆಘಾತವಿಕ್ಕಿದರು. 14 ರನ್ ಆಗುವಷ್ಟರಲ್ಲಿ ಓಪನರ್‌ಗಳಾದ ಸೋಫಿ ಡಿವೈನ್ (0) ಮತ್ತು ಸುಝೀ ಬೇಟ್ಸ್ (5) ವಿಕೆಟ್ ಉಡಾಯಿಸಿದರು. ಆದರೆ ಅನಂತರ ಬಂದವರೆಲ್ಲ ಕ್ರೀಸ್ ಆಕ್ರಮಿಸಿಕೊಳ್ಳು ವುದರೊಂದಿಗೆ ಭಾರತದ ಮೊದಲ ಗೆಲುವಿನ ಕನಸು ಛಿದ್ರಗೊಂಡಿತು. ಸಂಕ್ಷಿಪ್ತ ಸ್ಕೋರ್
ಭಾರತ-49.3 ಓವರ್‌ಗಳಲ್ಲಿ 279 (ದೀಪ್ತಿ ಶರ್ಮ ಔಟಾಗದೆ 69, ಮೇಘನಾ 61, ಶಫಾಲಿ ವರ್ಮ 51, ಮೈರ್ 42ಕ್ಕೆ 2, ರೋವ್ 52ಕ್ಕೆ 2). ನ್ಯೂಜಿಲ್ಯಾಂಡ್-49.1 ಓವರ್‌ಗಳಲ್ಲಿ 7 ವಿಕೆಟಿಗೆ 280 (ಕೆರ್ 67, ಲಾರೆನ್ ಡೌನ್ ಔಟಾಗದೆ 64, ಆ್ಯಮಿ ಸ್ಯಾಟರ್‌ವೈಟ್ 59, ಜೂಲನ್ ಗೋಸಾವಮಿ 47ಕ್ಕೆ 3). ಪಂದ್ಯಶ್ರೇಷ್ಠ: ಲಾರೆನ್ ಡೌನ್