ಮೌಂಟ್ ಮೌಂಗನಿ: ಪ್ರವಾಸಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್, 3ನೇ ಮತ್ತು ಅಂತಿಮ ಏಕದಿನ ಹಣಾಹಣಿಯಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಈಗಾಗಲೇ 2-0 ಅಂತರದಿಂದ ಸರಣಿ ಕಿವೀಸ್ ಪಾಲಾಗಿದ್ದು ವೈಟ್ ವಾಶ್ ತಪ್ಪಿಸಿಕೊಳ್ಳಬೇಕಾದರೆ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ವಾಪಾಸಾಗಿದ್ದು ಭಾರತಕ್ಕೆ ಮಾರಕವಾಗಿ ಪರಿಣಮಿಸಿದೆ.
ನಾಯಕ ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು , ಕೇದಾರ್ ಜಾದವ್ ಬದಲಿಗೆ ಮನೀಷ್ ಪಾಂಡೆಗೆ ಅವಕಾಶ ನೀಡಿದ್ದಾರೆ.
ಹನ್ನೊಂದರ ಬಳಗ:
ಭಾರತ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ(c), ಶ್ರೆಯಸ್ ಆಯ್ಯರ್ , ಮನಿಷ್ ಪಾಂಡೆ,ಲೋಕೇಶ್ ರಾಹುಲ್, , ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ
ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್,ಹೆನ್ರಿ ನಿಕೋಲ್ಸ್ , ಕೇನ್ ವಿಲಿಯಮ್ಸನ್ (c), ರಾಸ್ ಟೇಲರ್, ಟಾಮ್ ಲಾಥಮ್(w) ಮಿಚೆಲ್ ಸ್ಯಾಂಟ್ನರ್ , ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಕೈಲ್ ಜಾಮೀಸನ್, ಟಿಮ್ ಸೌಥಿ, ಹ್ಯಾಮಿಶ್ ಬೆನೆಟ್