Advertisement

ಕೊಹ್ಲಿಗೆ ಇಂದು 200ನೇ ಪಂದ್ಯ

07:15 AM Oct 22, 2017 | |

ಮುಂಬಯಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪಾಲಿಗೆ ರವಿವಾರದ ಮುಖಾಮುಖೀ ಬಹಳ ವಿಶೇಷದ್ದಾಗಿದೆ. ಕಾರಣ, ಇದು ಅವರ 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ. ಕೊಹ್ಲಿ 200 ಪಂದ್ಯವಾಡಿದ ವಿಶ್ವದ 72ನೇ, ಭಾರತದ 14ನೇ ಕ್ರಿಕೆಟಿಗನಾಗಿ ಮೂಡಿಬರಲಿದ್ದಾರೆ.

Advertisement

ಈ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ವಿಶಿಷ್ಟ ದಾಖಲೆಯೊಂದನ್ನು ಬರೆಯಲಿದ್ದಾರೆ. 200 ಪಂದ್ಯಗಳಲ್ಲಿ ಅತ್ಯಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಕೊಹ್ಲಿ ಈವರೆಗಿನ 199 ಏಕದಿನ ಪಂದ್ಯಗಳಲ್ಲಿ 8,767 ರನ್‌ ಪೇರಿಸಿದ್ದಾರೆ. ಅವರು ರವಿವಾರ ಮುಂಬಯಿಯಲ್ಲಿ ಸೊನ್ನೆಗೆ ಔಟಾದರೂ ದಾಖಲೆ ನಿರ್ಮಾಣವಾಗಲಿದೆ! ಕಾರಣ, ಕೊಹ್ಲಿ ಈಗಾಗಲೇ ಈ ಎತ್ತರ ತಲುಪಿ ಆಗಿದೆ. ಇದಕ್ಕೆ “200 ಪಂದ್ಯ’ಗಳ ಟಚ್‌ ಲಭಿಸುವುದೊಂದು ಬಾಕಿ. ಈಗಿನ ದಾಖಲೆ ಎಬಿ ಡಿ ವಿಲಿಯರ್ ಹೆಸರಲ್ಲಿದೆ. ಅವರು 200 ಪಂದ್ಯಗಳಲ್ಲಿ 8,621 ರನ್‌ ಪೇರಿಸಿದ್ದಾರೆ. ಕೊಹ್ಲಿ ಈಗಾಗಲೇ ಎಬಿಡಿ ಅವರಿಗಿಂತ 146 ರನ್ನುಗಳ ಮುನ್ನಡೆಯಲ್ಲಿದ್ದಾರೆ!

200 ಪಂದ್ಯಗಳಲ್ಲಿ ಅತ್ಯಧಿಕ ರನ್‌ ಬಾರಿಸಿದವರ ಯಾದಿಯಲ್ಲಿ ಸೌರವ್‌ ಗಂಗೂಲಿ 3ನೇ(7,747 ರನ್‌) ಹಾಗೂ ಸಚಿನ್‌ ತೆಂಡುಲ್ಕರ್‌ 4ನೇ ಸ್ಥಾನದಲ್ಲಿದ್ದಾರೆ (7,305 ರನ್‌).

Advertisement

Udayavani is now on Telegram. Click here to join our channel and stay updated with the latest news.

Next