Advertisement
ಭಾರತ ತಂಡ ಶನಿವಾರ ದಿಲ್ಲಿಯಿಂದ ಲಂಡನ್‌ನಲ್ಲಿ ಬಂದಿಳಿದ ಬಳಿಕ ಸೋಮವಾರ ಮರ್ಚಂಟ್ಸ್ ಟೇಲರ್ ಸ್ಕೂಲ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮೊದಲ ಅಭ್ಯಾಸ ನಡೆಸಿತು. ಆಟಗಾರರು ಮೂರು ಗುಂಪುಗಳಾಗಿ ಚದುರಿ ಕ್ರೀಡೆಯ ಎಲ್ಲ ವಿಭಾಗಗಳಲ್ಲಿ ಅಭ್ಯಾಸ ನಡೆಸಿದರು. ಉಮೇಶ್ ಯಾದವ್, ಭುವನೇಶ್ವರ ಕುಮಾರ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವೇಗದ ದಾಳಿಯ ನೇತೃತ್ವ ವಹಿಸಿದರೆ ಕೆಲವು ಆಟಗಾರರು ಫೀಲ್ಡಿಂಗ್ ಅಭ್ಯಾಸ ನಡೆಸಿದರು. ಒಂದು ನೆಟ್‌ನಲ್ಲಿ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಸಮೀಪದ ಇನ್ನೊಂದು ನೆಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಸ್ಪಿನ್ ಮತ್ತು ವೇಗದ ದಾಳಿ ವಿರುದ್ಧ ಅಭ್ಯಾಸ ನಡೆಸಿದರು.
Related Articles
Advertisement
ಭಾರತ ಮತ್ತು ಅಯರ್‌ಲ್ಯಾಂಡ್ ನಡುವೆ ಈತನಕ ಹೆಚ್ಚು ಪಂದ್ಯಗಳು ನಡೆದಿಲ್ಲ. 2011 ಮತ್ತು 2014ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸಗೈದ ವೇಳೆ ಅಯರ್‌ಲ್ಯಾಂಡ್‌ಗೆ ತೆರಳಿರಲಿಲ್ಲ. 2007ರ ಪ್ರವಾಸದಲ್ಲಿ ಮಾತ್ರ ಭಾರತ ಅಯರ್‌ಲ್ಯಾಂಡ್ ವಿರುದ್ಧ ಏಕೈಕ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನಾಡಿತ್ತು. ಇವೆರಡು ತಂಡಗಳ ನಡುವೆ ಒಟ್ಟಾರೆ ನಾಲ್ಕು ಪಂದ್ಯಗಳು ಮಾತ್ರ ನಡೆದಿವೆ ಮತ್ತು ಈ ಪೈಕಿ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಾದರೆ ಒಂದು ಟಿ20 ಪಂದ್ಯವಾಗಿತ್ತು.
ಅಯರ್‌ಲ್ಯಾಂಡ್ ತಂಡದಲ್ಲಿ ಈಗಿರುವ ಆಟಗಾರರ ಪೈಕಿ ನಾಯಕ ಗ್ಯಾರಿ ವಿಲ್ಸನ್, ಮಾಜಿ ನಾಯಕ ವಿಲಿಯಂ ಪೋರ್ಟರ್‌ಫೀಲ್ಡ್ ಮತ್ತು ಆಲ್‌ರೌಂಡರ್ ಕೆವಿನ್ ಒಬ್ರಿಯಾನ್ ಅವರು ಮಾತ್ರ ಟಿ 20 ಪಂದ್ಯವನ್ನು ಆಡಿದ ಅನುಭವ ಹೊಂದಿದ್ದಾರೆ.
ತಂಡಗಳುಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಮನೀಷ್ ಪಾಂಡೆ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್. ಅಯರ್‌ಲ್ಯಾಂಡ್: ಗ್ಯಾರಿ ವಿಲ್ಸನ್(ಕ್ಯಾಪ್ಟನ್ ಮತ್ತು ವಿಕೆಟ್ ಕೀಪರ್), ಆಂಡ್ನೂ ಬಲ್‌ಬಿರ್ನಿ, ಪೀಟರ್ ಚೇಸ್, ಜಾರ್ಜ್ ಡಾಕ್ರೆಲ್, ಜೋಶ್ ಲಿಟ್ಲ, ಆ್ಯಂಡಿ ಮೆಕ್‌ಬ್ರೈನ್, ಕೆವಿನ್ ಒಬ್ರಿಯಾನ್, ವಿಲಿಯಂ ಪೋರ್ಟರ್‌ಫೀಲ್ಡ್, ಸ್ಟುವರ್ಟ್ ಪೊçಂಟರ್, ಬೋಯ್ಡ ರ್ಯಾನ್‌ಕಿನ್, ಜೇಮ್ಸ್ ಶಾನನ್, ಸಿಮಿ ಸಿಂಗ್, ಪಾಲ್ ಸ್ಟರ್ಲಿಂಗ್, ಸ್ಟುವರ್ಟ್ ಥೋಮ್ಸನ್. ಪಂದ್ಯ ಆರಂಭ: ಭಾರತೀಯ ಕಾಲ ರಾತ್ರಿ 8.30ಕ್ಕೆ