Advertisement

ಏಷ್ಯನ್‌ ಕಪ್‌ ಹಾಕಿ; ಇಂಡೋನೇಶ್ಯ ವಿರುದ್ಧ ಭಾರತಕ್ಕೆ 16-0 ಗೆಲುವು!: ಪಾಕ್ ಗೆ ಜಪಾನ್ ಶಾಕ್

08:25 PM May 26, 2022 | Team Udayavani |

ಜಕಾರ್ತಾ: ಹಾಲಿ ಚಾಂಪಿಯನ್‌ ಭಾರತವು ಗುರುವಾರ ನಡೆದ ಏಷ್ಯನ್‌ ಕಪ್‌ ಪುರುಷರ ಹಾಕಿ ಕೂಟದ ಪಂದ್ಯದಲ್ಲಿ ಆತಿಥೇಯ ಇಂಡೋನೇಶ್ಯ ತಂಡವನ್ನು 16-0 ಭಾರೀ ಗೋಲುಗಳ ಅಂತರದಲ್ಲಿ ಸೋಲಿಸಿ ನಾಕೌಟ್‌ ಹಂತಕ್ಕೇರಿದೆ .

Advertisement

“ಎ’ ಬಣದ ಇನ್ನೊಂದು ಪಂದ್ಯದಲ್ಲಿ ಜಪಾನ್‌ ಪಾಕಿಸ್ಥಾನವನ್ನು ಸೋಲಿಸಿದ್ದರಿಂದ ಭಾರತ ಸೂಪರ್ 4 ಗೆ ಅರ್ಹತೆ ಪಡೆಯಿತು. 2023ರ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಭಾರತ ,ಜಪಾನ್, ಮಲೇಷ್ಯಾ ಮತ್ತು ಕೊರಿಯಾ 2023 ರ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. 2014 ರ ವಿಶ್ವಕಪ್‌ಗೆ ಅರ್ಹತೆ ಪಡೆಯಲು ತಂಡ ವಿಫಲವಾದ ನಂತರ ಇದು ಪಾಕ್ ನ ಎರಡನೇ ವಿಶ್ವಕಪ್ ವಿಫಲತೆ ಆಗಿದೆ.

ಜಕಾರ್ತಾದಲ್ಲಿ ನಂಬಲಾಗದ ಸಂಜೆ ಎಂಬಂತೆ ಪಾಕಿಸ್ತಾನವು ಜಪಾನ್ ವಿರುದ್ಧ ಸೋತಿತು ಮತ್ತು ಭಾರತವು ಸೂಪರ್ 4 ಗೆ ಹೋಗಲು ಕನಿಷ್ಠ 15 ಗೋಲುಗಳಿಂದ ಗೆಲ್ಲಬೇಕಾಗಿತ್ತು ಆದರೆ ಪವಾಡವೆಂಬಂತೆ 16-0 ಅಂತರದಿಂದ ಗೆದ್ದಿತು.

ಒಂದು ಡ್ರಾ ಮತ್ತು ಒಂದು ಸೋಲಿನಿಂದ ಭಾರತ “ಎ’ ಬಣದಲ್ಲಿ ಮೂರನೇ ಸ್ಥಾನದಲ್ಲಿತ್ತು . ಜಪಾನ್‌ ಅಗ್ರಸ್ಥಾನದಲ್ಲಿ, ಪಾಕಿಸ್ಥಾನ (4 ಅಂಕ) ದ್ವಿತೀಯ ಸ್ಥಾನದಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next