Advertisement

ಭಾರತದ ವಿರುದ್ಧ Germany ನಿಯತಕಾಲಿಕ ವ್ಯಂಗ್ಯಚಿತ್ರ

09:11 PM Apr 25, 2023 | Team Udayavani |

ನವದೆಹಲಿ: ಇತ್ತೀಚೆಗಷ್ಟೇ ಭಾರತದ ಜನಸಂಖ್ಯೆ, ಚೀನಾವನ್ನು ಮೀರಿದ್ದಕ್ಕಾಗಿ ಜರ್ಮನಿಯ ನಿಯತಕಾಲಿಕೆಯೊಂದು ಭಾರತದ ವಿರುದ್ಧ ಅವಹೇಳನಾತ್ಮಕ ವ್ಯಂಗ್ಯಚಿತ್ರ ರಚಿಸಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

ಡೆರ್‌ಸ್ಪೈಗಲ್‌ ಎನ್ನುವ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವ್ಯಂಗ್ಯಚಿತ್ರದಲ್ಲಿ ಭಾರತದ ಸಾಮಾನ್ಯ ರೈಲೊಂದರಲ್ಲಿ ತ್ರಿವರ್ಣ ಹಿಡಿದ ಜನರು ತುಂಬಿ ತುಳುಕುತ್ತಿರುವಂತೆ, ಮತ್ತೂಂದೆಡೆ ಚೀನಾದ ಇಬ್ಬರೇ ಚಾಲಕರು ಬುಲೆಟ್‌ ಟ್ರೈನ್‌ನಲ್ಲಿ ಸಂಚರಿಸುತ್ತಿರುವಂತೆ ಚಿತ್ರಿಸಲಾಗಿದೆ. ಇದನ್ನು ಜನಸಂಖ್ಯೆ ಹೆಚ್ಚುತ್ತಿದೆಯೇ ವಿನಾ ಅಭಿವೃದ್ಧಿಯಲ್ಲ ಎಂಬರ್ಥದಲ್ಲಿ ಬರೆಯಲಾಗಿದೆ.

ಈ ಚಿತ್ರದ ಬಗ್ಗೆ ಕೇಂದ್ರ ಸಚಿವ ರಾಜೀವ್‌ಚಂದ್ರಶೇಖರ್‌ ಪ್ರತಿಕ್ರಿಯಿಸಿ, “ಆತ್ಮೀಯ ವ್ಯಂಗ್ಯ ಚಿತ್ರಕಾರರೇ, ಭಾರತವನ್ನು ಅಪಹಾಸ್ಯ ಮಾಡುವ ನಿಮ್ಮ ಪ್ರಯತ್ನದ ಹೊರತಾಗಿಯೂ ಸಲಹೆ ನೀಡುತ್ತಿದ್ದೇನೆ. ಪ್ರಧಾನಿ ಮೋದಿ ನೇತೃತ್ವದ ಭಾರತದ ಜತೆಗೆ ಸವಾಲಿಗಿಳಿಯುವುದು ಜಾಣತನವಲ್ಲ. ಏಕೆಂದರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ಆರ್ಥಿಕತೆ ಜರ್ಮನಿಯನ್ನೂ ಮೀರಿರಲಿದೆ’ ಎಂದಿದ್ದಾರೆ. ಸಲಹೆಗಾರರು, ತಜ್ಞರೂ ಆದ ಕಾಂಚನ್‌ ಗುಪ್ತಾ ಕೂಡ ಪ್ರತಿಕ್ರಿಯಿಸಿ, ನಿಮ್ಮ ಈ ಪ್ರಯತ್ನಗಳು ನಿಮ್ಮ ಭೇದ ಹಾಗೂ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಆದಾಗ್ಯೂ ನಿಮ್ಮ ವ್ಯಂಗ್ಯ ಚಿತ್ರಕ್ಕೂ, ಭಾರತದ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next