Advertisement
ಸರಣಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಸೋತಿದ್ದ ಭಾರತವು ಆಬಳಿಕ ಎಚ್ಚರಿಕೆಯ ಆಟವಾಡಿ ಸತತ ಎರಡು ಪಂದ್ಯಗಳಲ್ಲಿ ಅಧಿಕಾರಯುತವಾಗಿ ಗೆದ್ದಿದೆ. ಬುಧವಾರದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಜಯಭೇರಿ ಬಾರಿಸಿ ಫೈನಲಿಗೇರುವ ಆತ್ಮವಿಶ್ವಾಸವನ್ನು ಭಾರತ ಹೊಂದಿದೆ. ಅದಕ್ಕಾಗಿ ಯಾವುದೇ ಪರೀಕ್ಷೆ ನಡೆಸದೇ ಇರುವ ಬಲಿಷ್ಠ ತಂಡವನ್ನೇ ಕಣಕ್ಕೆ ಇಳಿಸಲು ಯೋಚಿಸಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಸೋತರೂ ಫೈನಲಿಗೇರುವ ಅವಕಾಶ ಭಾರತಕ್ಕಿದೆ. ಮಾ. 16ರಂದು ಶ್ರೀಲಂಕಾ ಮತ್ತು ಬಾಂಗ್ಲಾ ಅಂತಿಮ ಲೀಗ್ ಪಂದ್ಯ ಆಡಲಿದ್ದು ಈ ಫಲಿತಾಂಶದ ಬಳಿಕ ಫೈನಲಿಗೆ ಯಾರು ಅರ್ಹತೆ ಗಳಿಸುತ್ತಾರೆಂದು ತಿಳಿಯುತ್ತದೆ. ಒಂದು ವೇಳೆ ಮೂರು ತಂಡಗಳು ಒಂದೇ ರೀತಿಯ ಅಂಕ ಗಳಿಸಿದ್ದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಅಗ್ರ ಎರಡು ತಂಡಗಳು ಫೈನಲಿಗೇರಲಿವೆ. ರನ್ ಧಾರಣೆಯಲ್ಲಿ ಸದ್ಯ ಭಾರತ ಅಗ್ರಸ್ಥಾನದಲ್ಲಿದೆ.
Related Articles
ಶ್ರೀಲಂಕಾ ವಿರುದ್ಧ ದಾಖಲೆಯ 215 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ಬಾಂಗ್ಲಾದೇಶವು ಭಾರೀ ಆತ್ಮವಿಶ್ವಾಸದಿಂದ ಭಾರತವನ್ನು ಎದುರಿಸಲು ಸಿದ್ಧವಾಗಿದೆ. ಭಾರತ ವಿರುದ್ಧ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುವ ಸಾಧ್ಯತೆಯಿದೆ. ಒಂದು ವೇಳೆ ಬಾಂಗ್ಲಾ ಗೆದ್ದರೆ ಫೈನಲಿಗೇರುವ ಸಾಧ್ಯತೆಯೂ ಇದೆ, ಭಾರತವು ಮೊದಲ ಪಂದ್ಯದಲ್ಲಿ ಬಾಂಗ್ಲಾ ಮೊತ್ತವನ್ನು 139 ರನ್ನಿಗೆ ನಿಯಂತ್ರಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ತಮಿಮ್ ಇಕ್ಬಾಲ್, ಲಿಟನ್ ದಾಸ್, ಮುಶ್ಫಿàಕರ್ ರಹೀಂ ಭರ್ಜರಿಯಾಗಿ ಆಡಿದ್ದರಿಂದ ಶ್ರೀಲಂಕಾ ನೀಡಿದ ದಾಖಲೆ ಗುರಿಯನ್ನು ಮೆಟ್ಟಿ ಜಯಭೇರಿ ಸಾಧಿಸಿದ ಸಾಧನೆ ಮಾಡಿತ್ತು.
Advertisement
ಉಭಯ ತಂಡಗಳುಭಾರತ
ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾದೂìಲ್ ಠಾಕುರ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ರಿಷಬ್ ಪಂತ್. ಬಾಂಗ್ಲಾದೇಶ
ಮಹಮುದುಲ್ಲ (ನಾಯಕ), ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಇಮ್ರುಲ್ ಕೆಯಿಸ್, ಮುಶ್ಫಿàಕರ್ ರಹೀಂ, ಶಬ್ಬೀರ್ ರೆಹಮಾನ್, ಮುಸ್ತಾಫಿಜುರ್ ರೆಹಮಾನ್, ರುಬೆಲ್ ಹೊಸೈನ್, ಟಸ್ಕಿನ್ ಅಹ್ಮದ್, ಅಬು ಹೈದರ್, ಅಬು ಜಯೇದ್, ಅರಿಫುಲ್ ಹಕ್, ನಜ್ಮುಲ್ ಇಸ್ಲಾಮ್, ನುರುಲ್ ಹಸನ್, ಮೆಹಿದಿ ಹಸನ್, ಲಿಟನ್ ದಾಸ್. ಪಂದ್ಯ ಆರಂಭ: ರಾತ್ರಿ 7 ಗಂಟೆ